Mar 11, 2026 Languages : ಕನ್ನಡ | English

7 ಲಕ್ಷಕ್ಕೆ ಫ್ಯಾಮಿಲಿ ಕಾರು – ಹೊಸ ಲಾಂಚ್!!

ಭಾರತದಲ್ಲಿ ಫ್ಯಾಮಿಲಿ ಬಳಕೆಯ 7 ಅಥವಾ 8 ಸೀಟರ್ ಕಾರುಗಳಿಗೆ ಯಾವಾಗಲೂ ಹೆಚ್ಚಿನ ಬೇಡಿಕೆ ಇದೆ. ಇದೇ ಹಿನ್ನೆಲೆಯಲ್ಲಿ, ಮುಂದಿನ ಎರಡು ತಿಂಗಳೊಳಗೆ ಎರಡು ಹೊಸ 7-ಸೀಟರ್ ಕಾರುಗಳು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿವೆ. ವಿಶೇಷ ಅಂದ್ರೆ, ಈ ಕಾರುಗಳು ಕಡಿಮೆ ಬೆಲೆ ಜೊತೆಗೆ ಉತ್ತಮ ಮೈಲೇಜ್ ಮತ್ತು ಆಧುನಿಕ ಫೀಚರ್‌ಗಳನ್ನು ನೀಡಲಿವೆ.

2026ರಲ್ಲಿ ಕಾರು ಮಾರಾಟ ಏರಿಕೆ – ಜನವರಿಯಲ್ಲಿ 7% ಹೆಚ್ಚಳ ದಾಖಲೆ
2026ರಲ್ಲಿ ಕಾರು ಮಾರಾಟ ಏರಿಕೆ – ಜನವರಿಯಲ್ಲಿ 7% ಹೆಚ್ಚಳ ದಾಖಲೆ

ವಿನ್‌ಫಾಸ್ಟ್ ಲಿಮೋ ಗ್ರೀನ್ – 450 ಕಿ.ಮೀ ರೇಂಜ್ EV
ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಂಪನಿಯ ಲಿಮೋ ಗ್ರೀನ್ ಎಲೆಕ್ಟ್ರಿಕ್ MPV, ಭಾರತದಲ್ಲಿ ಲಾಂಚ್ ಆಗಲು ಸಜ್ಜಾಗಿದೆ. ಈ ಕಾರು BYD eMax7 ಮತ್ತು ಕಿಯಾ ಕ್ಯಾರೆನ್ಸ್ ಕ್ಲೇವಿಸ್ EVಗೆ ನೇರ ಸ್ಪರ್ಧೆ ನೀಡಲಿದೆ.

ಭಾರತಕ್ಕೆ ಬರುವ ಮಾಡೆಲ್‌ನಲ್ಲಿ 60.13kWh ಬ್ಯಾಟರಿ ಪ್ಯಾಕ್ ಇರಲಿದೆ. ಫ್ರಂಟ್-ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ EV,

  • 201 bhp ಪವರ್
  • 280 Nm ಟಾರ್ಕ್ ಉತ್ಪಾದಿಸುತ್ತದೆ.

80kW DC ಫಾಸ್ಟ್ ಚಾರ್ಜರ್ ಬಳಸಿ, ಕೇವಲ 30 ನಿಮಿಷಗಳಲ್ಲಿ 10% ರಿಂದ 70% ವರೆಗೆ ಚಾರ್ಜ್ ಮಾಡಬಹುದು. ಒಂದು ಪೂರ್ಣ ಚಾರ್ಜ್‌ನಲ್ಲಿ ಸುಮಾರು 450 ಕಿ.ಮೀ ಪ್ರಯಾಣ ಸಾಧ್ಯ. ಇದರ ಬೆಲೆ 18 ಲಕ್ಷ ರೂ.ಗಳಿಂದ ಆರಂಭವಾಗುವ ನಿರೀಕ್ಷೆ ಇದೆ.

ನಿಸ್ಸಾನ್ ಗ್ರಾವಿಟ್ – ಬಜೆಟ್ 7-ಸೀಟರ್ ಫ್ಯಾಮಿಲಿ ಕಾರು

ಇನ್ನೊಂದೆಡೆ, ನಿಸ್ಸಾನ್ ಗ್ರಾವಿಟ್ ಎಂಬ ಹೊಸ 7-ಸೀಟರ್ ಪೆಟ್ರೋಲ್ ಕಾರು ಕೂಡ ಬಿಡುಗಡೆ ಆಗಲಿದೆ. ಈ ಕಾರಿನಲ್ಲಿ

  • V-ಮೋಷನ್ ಫ್ರಂಟ್ ಗ್ರಿಲ್
  • ಸ್ಪೋರ್ಟಿ ಬಂಪರ್
  • ಬಾನೆಟ್ ಮೇಲೆ ‘Gravite’ ಬ್ಯಾಡ್ಜ್
  • ಡ್ಯುಯಲ್-ಸ್ಟ್ರಿಪ್ LED DRL ಹೆಡ್‌ಲ್ಯಾಂಪ್
  • ಹೊಸ ಅಲಾಯ್ ವೀಲ್‌ಗಳು ಇರಲಿವೆ.

ಒಳಭಾಗ ಸಂಪೂರ್ಣ ಕಪ್ಪು ಥೀಮ್‌ನೊಂದಿಗೆ ಕ್ರೋಮ್ ಆಕ್ಸೆಂಟ್‌ಗಳನ್ನು ಹೊಂದಿದೆ.

ಈ ಕಾರಿನಲ್ಲಿ 1.0 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇದ್ದು,

  • 72 bhp ಪವರ್
  • 96 Nm ಟಾರ್ಕ್ ನೀಡುತ್ತದೆ.
  • ಈ ಫ್ಯಾಮಿಲಿ ಕಾರಿನ ಬೆಲೆ 7 ಲಕ್ಷ ರೂ.ಗಳಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
  • ಕಾರ್ ಮಾರಾಟದಲ್ಲಿ ಏರಿಕೆ

ಇನ್ನೂ, 2026ರ ಜನವರಿಯಲ್ಲಿ ಭಾರತದಲ್ಲಿ ಕಾರು ಮಾರಾಟದಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. 2025ರ ಜನವರಿಗೆ ಹೋಲಿಸಿದರೆ, ಶೇಕಡಾ 7ರಷ್ಟು ಮಾರಾಟ ಹೆಚ್ಚಳ ದಾಖಲಾಗಿದೆ. ಫೆಬ್ರವರಿಯಲ್ಲೂ ಇದೇ ರೀತಿಯ ಏರಿಕೆ ನಿರೀಕ್ಷಿಸಲಾಗಿದೆ.

Latest News