ಇವತ್ತು (ಮೇ 18, ಸೋಮವಾರ) ಚಂದ್ರ ತನ್ನ ಜಾಗ ಬದಲಾಯಿಸಿ ಮಿಥುನ ರಾಶಿಗೆ ಹೋಗ್ತಾ ಇದ್ದಾನೆ. ಇದರ ಜೊತೆಗೆ ಇವತ್ತು ಸುಕರ್ಮ ಯೋಗ, ಧೃತಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಅಮೃತ ಸಿದ್ಧಿ ಯೋಗದಂತಹ ಸೂಪರ್ ಪವರ್‌ಫುಲ್ ಯೋಗಗಳು ಒಟ್ಟಿಗೆ ಸೇರುತ್ತಿವೆ. ಜೊತೆಗೆ ಇವತ್ತು ರೋಹಿಣಿ ವ್ರತ ಕೂಡ ಇದೆ. ಇಷ್ಟೆಲ್ಲಾ ಸ್ಪೆಷಲ್ ದಿನದಂದು, ಪರಶಿವನ ದೆಸೆಯಿಂದ ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ಜಾತಕ ಹೇಗಿರಲಿದೆ? ಯಾರಿಗೆ ದುಡ್ಡಿನ ಸುರಿಮಳೆಯಾಗುತ್ತೆ? ಯಾರು ಹುಷಾರಾಗಿರಬೇಕು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಮೇಷ ರಾಶಿ (Aries)
ಮೇಷ ರಾಶಿಯವರಿಗೆ ಇವತ್ತು ಅದೃಷ್ಟ ಖುಲಾಯಿಸಲಿದೆ. ಕೈ ಹಾಕಿದ ಕೆಲಸದಲ್ಲೆಲ್ಲಾ ಸಕ್ಸಸ್ ಸಿಗುತ್ತೆ. ಆಫೀಸ್ ಮತ್ತು ಬಿಸಿನೆಸ್‌ನಲ್ಲಿ ಹೊಸ ಆಫರ್‌ಗಳು ಹುಡುಕಿಕೊಂಡು ಬರಲಿವೆ. ಇಂದು ನಿಮಗೆ ಇಷ್ಟವಾದ ಹವ್ಯಾಸಗಳಿಗೆ ಸ್ವಲ್ಪ ಟೈಮ್ ಕೊಡಿ. ಹೆಲ್ತ್ ಕಡೆ ಸ್ವಲ್ಪ ಗಮನ ಇರಲಿ, ಸರಿಯಾದ ಊಟ, ವ್ಯಾಯಾಮ ಮರೆಯಬೇಡಿ. ಹಳೇ ತಪ್ಪುಗಳಿಂದ ಪಾಠ ಕಲಿತು ಮುಂದೆ ನುಗ್ಗಿ, ಯಶಸ್ಸು ಖಂಡಿತ.
ವೃಷಭ ರಾಶಿ (Taurus)
ಇವತ್ತು ನಿಮಗೆ ಆರೋಗ್ಯದ ಬಗ್ಗೆ ಸ್ವಲ್ಪ ಟೆನ್ಷನ್ ಇರುತ್ತೆ. ಆಫೀಸ್‌ನಲ್ಲಿ ಕೆಲವೊಂದು ಬದಲಾವಣೆಗಳಾಗಬಹುದು, ಆದರೆ ನಿಧಾನವಾಗಿ ಒಳ್ಳೆ ರಿಸಲ್ಟ್ ಸಿಗುತ್ತೆ. ಬಾಕಿ ಇದ್ದ ದುಡ್ಡು ಕೈ ಸೇರಲಿದ್ದು, ಆದಾಯಕ್ಕೆ ಹೊಸ ದಾರಿ ಸಿಗಲಿದೆ. ಕಚೇರಿಯಲ್ಲಿ ಎಲ್ಲರ ಜೊತೆ ನಯವಾಗಿ ಇರಿ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರುವ ಚಾನ್ಸ್ ಇದೆ, ಮೂಡ್ ಹಾಳು ಮಾಡ್ಕೋಬೇಡಿ.
ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ ಇವತ್ತು ಸೂಪರ್ ದಿನ! ಬೇರೆ ಬೇರೆ ಕಡೆಯಿಂದ ದುಡ್ಡು ಹರಿದು ಬರಲಿದೆ. ಹೊಸ ಪ್ರಾಜೆಕ್ಟ್ ಸಿಗುವ ಲಕ್ಷಣಗಳಿವೆ. ಮನೆಯಲ್ಲಿ ಗೂಡ್ ನ್ಯೂಸ್ ಕೇಳಿ ವಾತಾವರಣ ಹ್ಯಾಪಿಯಾಗಿರುತ್ತೆ. ಎಲ್ಲಾದರೂ ಟ್ರಿಪ್ ಹೋಗೋ ಪ್ಲಾನ್ ಮಾಡಬಹುದು. ಪ್ರಾಪರ್ಟಿ ಅಥವಾ ಹೂಡಿಕೆ ಮಾಡಲು ಒಳ್ಳೆ ಟೈಮ್. ಲವ್ ಲೈಫ್ ಕೂಡ ಸಖತ್ ರೊಮ್ಯಾಂಟಿಕ್ ಆಗಿರುತ್ತೆ!
ಕಟಕ ರಾಶಿ (Cancer)
ಇವತ್ತು ನೀವು ಫುಲ್ ಎನರ್ಜಿ ಮತ್ತು ಕಾನ್ಫಿಡೆನ್ಸ್‌ನಿಂದ ಇರ್ತೀರಾ. ಹಳೇ ಇನ್ವೆಸ್ಟ್‌ಮೆಂಟ್‌ನಿಂದ ಲಾಭ ಸಿಗಲಿದೆ. ಆಫೀಸ್‌ನಲ್ಲಿ ನಿಮ್ಮ ಟ್ಯಾಲೆಂಟ್‌ಗೆ ಬಾಸ್ ಮೆಚ್ಚುಗೆ ಸೂಚಿಸುತ್ತಾರೆ. ಫ್ಯಾಮಿಲಿ ಜೊತೆ ಪ್ರವಾಸ ಹೋಗೋಕೆ ಪ್ಲಾನ್ ಮಾಡ್ತೀರಾ. ಸ್ಟೂಡೆಂಟ್ಸ್‌ಗೆ ಎಕ್ಸಾಮ್ಸ್‌ನಲ್ಲಿ ಒಳ್ಳೆ ರಿಸಲ್ಟ್ ಸಿಗುತ್ತೆ. ಸೋಷಿಯಲ್ ಲೈಫ್‌ನಲ್ಲಿ ಹೊಸ ಫ್ರೆಂಡ್ಸ್ ಸಿಗ್ತಾರೆ, ಸಂಗಾತಿ ಜೊತೆಗಿನ ಬಾಂಡಿಂಗ್ ಸ್ಟ್ರಾಂಗ್ ಆಗುತ್ತೆ!
ಸಿಂಹ ರಾಶಿ (Leo)
ಗ್ರಹಗಳ ಬದಲಾವಣೆ ನಿಮಗೆ ಪಾಸಿಟಿವ್ ರಿಸಲ್ಟ್ ಕೊಡಲಿದೆ. ಉದ್ಯೋಗದಲ್ಲಿ ಪ್ರಮೋಷನ್ ಜೊತೆ ಸಂಬಳ ಕೂಡ ಜಾಸ್ತಿಯಾಗೋ ಚಾನ್ಸ್ ಇದೆ. ಆಸ್ತಿ, ಸೈಟು ಅಥವಾ ಹೊಸ ಗಾಡಿ ಕೊಳ್ಳಲು ಯೋಗವಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ಮನಸ್ಸು ನೆಮ್ಮದಿಯಾಗಿರುತ್ತೆ. ಎಲ್ಲೂ ಟೆನ್ಷನ್ ಇಲ್ಲದೆ ದಿನ ಹ್ಯಾಪಿಯಾಗಿ ಕಳೆಯುತ್ತೆ!
ಕನ್ಯಾ ರಾಶಿ (Virgo)
ಕೆರಿಯರ್‌ನಲ್ಲಿ ಇವತ್ತು ದೊಡ್ಡ ಮಟ್ಟದ ಸಕ್ಸಸ್ ಸಿಗಲಿದೆ. ಆಫೀಸ್‌ನಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು, ಹೆದರದೆ ಒಪ್ಕೋಳ್ಳಿ. ಬಿಸಿನೆಸ್ ವಿಷಯವಾಗಿ ಟ್ರಾವೆಲ್ ಮಾಡಬೇಕಾಗಿ ಬರಬಹುದು. ಇದರಿಂದ ಫ್ಯಾಮಿಲಿಗೆ ಟೈಮ್ ಕೊಡೋದು ಸ್ವಲ್ಪ ಕಷ್ಟ ಆಗುತ್ತೆ. ಸ್ಟೂಡೆಂಟ್ಸ್‌ಗೆ ಒಳ್ಳೆ ದಿನ. ಹೊಸ ಮನೆ ಅಥವಾ ಜಮೀನು ಕೊಳ್ಳೋ ಆಲೋಚನೆ ಇದ್ರೆ ಮುಂದುವರಿಯಿರಿ!
ತುಲಾ ರಾಶಿ (Libra)
ಇವತ್ತು ದಿನವಿಡೀ ಫುಲ್ ಬ್ಯುಸಿಯಾಗಿ ಇರ್ತೀರಾ. ಕಷ್ಟಪಟ್ಟು ಕೆಲಸ ಮುಗಿಸೋದ್ರಿಂದ ಆಫೀಸ್‌ನಲ್ಲಿ ಒಳ್ಳೆ ಹೆಸರು ಸಿಗುತ್ತೆ. ನಿಮ್ಮ ಸ್ಕಿಲ್ಸ್ ಇಂಪ್ರೂವ್ ಮಾಡಿಕೊಳ್ಳೋಕೆ ಒಳ್ಳೆ ಅವಕಾಶ ಸಿಗಲಿದೆ. ಮನೆಯಲ್ಲಿ ಸಣ್ಣದಾಗಿ ಏನಾದರೂ ಶುಭ ಕಾರ್ಯ ನಡೆಯಬಹುದು. ಆಸ್ತಿ ವಿಚಾರದಲ್ಲಿ ಸಣ್ಣಪುಟ್ಟ ಕಿರಿಕಿರಿ ಇರಬಹುದು, ಸ್ವಲ್ಪ ಜಾಗ್ರತೆ. ಲವ್ ಲೈಫ್ ಚೆನ್ನಾಗಿರಲಿದೆ!
ವೃಶ್ಚಿಕ ರಾಶಿ (Scorpio)
ಇವತ್ತು ಸ್ವಲ್ಪ ಮೆಂಟಲ್ ಪ್ರೆಶರ್ ಇರಬಹುದು. ಆದರೆ ಹೊಸ ಆಲೋಚನೆಗಳು ಮೂಡಲಿವೆ. ಕೆರಿಯರ್‌ನಲ್ಲಿ ಬಿಜಿಯಾಗಿ ಇರ್ತೀರಾ ಮತ್ತು ದುಡ್ಡು ಗಳಿಸೋಕೆ ಒಳ್ಳೆ ಆಫರ್ ಸಿಗಬಹುದು. ಇವತ್ತು ಹೆಲ್ತ್ ಕಡೆ ಜಾಸ್ತಿ ಗಮನ ಕೊಡಿ. ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳೋಕೆ ಯೋಗ ಅಥವಾ ಧ್ಯಾನ ಮಾಡಿ. ಪಾರ್ಟ್ನರ್ ಜೊತೆ ನಿಮ್ಮ ಫೀಲಿಂಗ್ಸ್ ಶೇರ್ ಮಾಡಿಕೊಳ್ಳಿ!
ಧನು ರಾಶಿ (Sagittarius)
ಖರ್ಚು ಜಾಸ್ತಿ ಆಗ್ತಾ ಇದೆ ಅಂತ ಇವತ್ತು ಸ್ವಲ್ಪ ಮೂಡ್ ಆಫ್ ಆಗಬಹುದು. ಆದರೆ ಆಫೀಸ್‌ನಲ್ಲಿ ನಿಮ್ಮ ಕೆಲಸ ಸೂಪರ್ ಆಗಿ ಇರುತ್ತೆ, ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಫ್ಯಾಮಿಲಿ ಸಪೋರ್ಟ್‌ನಿಂದ ಕಷ್ಟದ ಕೆಲಸಗಳು ಈಸಿಯಾಗಿ ಮುಗಿಯುತ್ತವೆ. ಫ್ರೆಂಡ್ಸ್ ಜೊತೆ ಹೊರಗೆ ಹೋಗೋ ಪ್ಲಾನ್ ಮಾಡ್ತೀರಾ. ಕೋರ್ಟ್ ಕಚೇರಿ ಅಥವಾ ಲೀಗಲ್ ಮ್ಯಾಟರ್ಸ್‌ನಿಂದ ದೂರ ಇರಿ!
ಮಕರ ರಾಶಿ (Capricorn)
ದುಡ್ಡಿನ ವಿಷಯದಲ್ಲಿ ಇವತ್ತು ಸ್ವಲ್ಪ ಹುಷಾರಾಗಿರಿ. ಆತುರಪಟ್ಟು ಶಾಪಿಂಗ್ ಮಾಡಿ ದುಡ್ಡು ಪೋಲು ಮಾಡಬೇಡಿ. ಬಿಸಿನೆಸ್ ಮಾಡುವವರಿಗೆ ಲಾಭದಾಯಕ ಪ್ರಯಾಣ ಇರಲಿದೆ. ಸೊಸೈಟಿಯಲ್ಲಿ ನಿಮ್ಮ ವ್ಯಾಲ್ಯೂ ಜಾಸ್ತಿಯಾಗುತ್ತೆ. ಸ್ಟೂಡೆಂಟ್ಸ್‌ಗೆ ಎಕ್ಸಾಮ್ಸ್‌ನಲ್ಲಿ ಒಳ್ಳೆ ಮಾರ್ಕ್ಸ್ ಬರುತ್ತೆ. ಲೈಫ್ ಪಾರ್ಟ್ನರ್ ಜೊತೆ ಸಣ್ಣ ಜಗಳ ಆಗಬಹುದು, ಪ್ರೀತಿಯಿಂದ ಸಾಲ್ವ್ ಮಾಡಿಕೊಳ್ಳಿ!
ಕುಂಭ ರಾಶಿ (Aquarius)
ಹಣಕಾಸಿನ ಪ್ರಾಬ್ಲಮ್ಸ್ ನಿಧಾನವಾಗಿ ಕಮ್ಮಿ ಆಗಿ ನಿಟ್ಟುಸಿರು ಬಿಡ್ತೀರಾ. ಆಫೀಸ್‌ನಲ್ಲಿ ನಿಮ್ಮ ಪರ್ಫಾಮೆನ್ಸ್‌ಗೆ ಫುಲ್ ಮಾರ್ಕ್ಸ್ ಸಿಗುತ್ತೆ, ಸಂಬಳ ಕೂಡ ಹೆಚ್ಚಾಗಬಹುದು. ಕಾಂಪಿಟಿಷನ್ ಜಾಸ್ತಿ ಇದ್ರೂ ನಿಮ್ಮ ಕಾನ್ಫಿಡೆನ್ಸ್‌ನಿಂದ ಗೆಲ್ತೀರಾ. ಮನೆಗೆ ಬೇಕಾದ ವಸ್ತುಗಳನ್ನು ಶಾಪಿಂಗ್ ಮಾಡ್ತೀರಾ. ಫ್ಯಾಮಿಲಿಯಲ್ಲಿ ಸುಖ-ಶಾಂತಿ ನೆಲೆಸಲಿದ್ದು, ನೆಮ್ಮದಿಯ ದಿನ ನಿಮ್ಮದಾಗಲಿದೆ!
ಮೀನ ರಾಶಿ (Pisces)
ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತೆ. ಆಫೀಸ್‌ನಲ್ಲಿ ಬಾಸ್ ಎಕ್ಸ್‌ಟ್ರಾ ಕೆಲಸ ಕೊಡಬಹುದು. ನಿಮ್ಮ ಹೆಲ್ತ್ ನೋಡ್ಕೊಳ್ಳಿ. ಆಸ್ತಿ ಮಾರಾಟ ಅಥವಾ ಬಾಡಿಗೆಯಿಂದ ಎಕ್ಸ್‌ಟ್ರಾ ಇನ್‌ಕಮ್ ಬರಲಿದೆ. ಸ್ಟೂಡೆಂಟ್ಸ್ ಸ್ವಲ್ಪ ಕಷ್ಟಪಟ್ಟು ಓದಬೇಕಾಗುತ್ತೆ. ಇವತ್ತು ನಿಮ್ಮ ಪಾರ್ಟ್ನರ್‌ಗೆ ಒಂದು ಸರ್ಪ್ರೈಸ್ ಗಿಫ್ಟ್ ಕೊಡಿ ಅಥವಾ ಡಿನ್ನರ್‌ಗೆ ಕರ್ಕೊಂಡು ಹೋಗಿ, ಲವ್ ಲೈಫ್ ಮಸ್ತ್ ಆಗಿರುತ್ತೆ..