ಇಂದು ಅಂದರೆ 2026ರ ಮೇ 16ರ ಶನಿವಾರದ ದಿನ ತುಂಬಾ ವಿಶೇಷವಾಗಿದೆ. ಯಾಕಂದ್ರೆ ಇಂದು ‘ಶನಿ ಅಮಾವಾಸ್ಯೆ’. ಹವಾಮಾನದಲ್ಲಿ ಮಾತ್ರವಲ್ಲ, ಇವತ್ತು ಆಕಾಶದಲ್ಲಿ ಗ್ರಹಗಳ ಸ್ಥಾನದಲ್ಲೂ ದೊಡ್ಡ ಬದಲಾವಣೆ ಆಗ್ತಿದೆ. ಚಂದ್ರನು ಮೇಷ ರಾಶಿಯಿಂದ ವೃಷಭ ರಾಶಿಗೆ, ಭರಣಿ ನಕ್ಷತ್ರದಿಂದ ಕೃತ್ತಿಕಾ ನಕ್ಷತ್ರಕ್ಕೆ ಜಂಪ್ ಮಾಡ್ತಿದ್ದಾನೆ. ಇದರಿಂದ ಧನ ಯೋಗ ಮತ್ತು ಸುನಫ ಯೋಗಗಳು ಸೃಷ್ಟಿಯಾಗ್ತಿವೆ. ಅಷ್ಟೇ ಅಲ್ಲ, ವೃಷಭದಲ್ಲಿ ಬುಧಾದಿತ್ಯ ಯೋಗ, ಮಿಥುನದಲ್ಲಿ ಗಜಲಕ್ಷ್ಮಿ ಯೋಗ ಕೂಡ ರೂಪುಗೊಂಡಿದೆ. ಹಾಗಾದ್ರೆ ಇಷ್ಟೆಲ್ಲಾ ವಿಶೇಷತೆ ಇರೋ ಇಂದಿನ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಅದೃಷ್ಟ, ಯಾರು ಹುಷಾರಾಗಿರಬೇಕು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಮೇಷ ರಾಶಿ
ಮೇಷ ರಾಶಿಯವರಿಗೆ ಇವತ್ತು ಸೂಪರ್ ದಿನ. ನಿಮ್ಮ ಜೇಬಿಗೆ ಹಣ ಬಂದು ಸೇರೋದ್ರಿಂದ ಆರ್ಥಿಕ ಪರಿಸ್ಥಿತಿ ಸಖತ್ ಸ್ಟ್ರಾಂಗ್ ಆಗಲಿದೆ. ಸಮಾಜದಲ್ಲಿ ನಿಮ್ಮ ರೇಂಜ್ ಹೆಚ್ಚಾಗುತ್ತೆ. ಲವರ್ ಅಥವಾ ಲೈಫ್ ಪಾರ್ಟ್ನರ್ ಕಡೆಯಿಂದ ಫುಲ್ ಲವ್ ಅಂಡ್ ಸಪೋರ್ಟ್ ಸಿಗೋದ್ರಿಂದ ಮೈಂಡ್ ರಿಲ್ಯಾಕ್ಸ್ ಆಗಿರುತ್ತೆ. ತುಂಬಾ ದಿನದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಇವತ್ತು ಈಜಿಯಾಗಿ ಮುಗಿಯಲಿವೆ. ಬಿಸಿನೆಸ್ ಮಾಡೋರಿಗೆ ಹೊಸ ಆಫರ್‌ಗಳು ಸಿಗಲಿವೆ. ಆದ್ರೆ ನೆನಪಿರಲಿ, ಸಕ್ಸಸ್ ಸಿಕ್ಕಾಗ ತಲೆಗೆ ಅಹಂಕಾರ ಏರಲು ಬಿಡಬೇಡಿ.
ವೃಷಭ ರಾಶಿ
ವೃಷಭ ರಾಶಿಯವರು ಇವತ್ತು ಸ್ವಲ್ಪ ಅಲರ್ಟ್ ಆಗಿರಬೇಕು. ಅದರಲ್ಲೂ ದುಡ್ಡಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ. ಮಾತಿನ ಮೇಲೆ ಕಂಟ್ರೋಲ್ ಇಲ್ಲದಿದ್ರೆ ಸುಮ್ಮನೆ ಜಗಳವಾಗೋ ಚಾನ್ಸ್ ಇದೆ. ಇಂದು ಯಾರಿಗೂ ಕೈಗಡ ಅಥವಾ ಸಾಲ ಕೊಡಬೇಡಿ, ಇಸ್ಕೊಳ್ಳೂಬೇಡಿ. ಯಾವುದೇ ನಿರ್ಧಾರ ತಗೋಬೇಕಾದ್ರೂ ಮನೆಯವರ ಜೊತೆ ಒಂದ್ಮಾತು ಡಿಸ್ಕಸ್ ಮಾಡಿ. ಸಿಟ್ಟು ಮಾಡಿಕೊಳ್ಳದೆ ಸೈಲೆಂಟ್ ಆಗಿದ್ರೆ ಇವತ್ತು ನಿಮಗೆ ಯಾವುದೇ ತೊಂದರೆ ಆಗಲ್ಲ!
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇವತ್ತು ಕೆಲಸದ ಕಡೆಗೆ ಫುಲ್ ಫೋಕಸ್ ಇರಲಿ. ಗಾಡಿ ಓಡಿಸುವಾಗ ಮೊಬೈಲ್ ನೋಡುವುದು ಅಥವಾ ಆತುರಪಡುವುದನ್ನು ಬಿಟ್ಟು ಕೇರ್ಫುಲ್ ಆಗಿರಿ. ಸ್ಟೂಡೆಂಟ್ಸ್‌ಗೆ ಇವತ್ತು ಸಖತ್ ಒಳ್ಳೆ ದಿನ, ಓದಿನಲ್ಲಿ ಒಳ್ಳೆ ರಿಸಲ್ಟ್ ಸಿಗುತ್ತೆ. ಆದ್ರೆ ಇವತ್ತು ಗಳಿಕೆಗೆ ತಕ್ಕಂತೆ ಖರ್ಚು ಕೂಡ ಜಾಸ್ತಿ ಇರೋದ್ರಿಂದ ಸ್ವಲ್ಪ ಟೆನ್ಷನ್ ಆಗಬಹುದು. ಬಿಸಿನೆಸ್ ಎಂದಿನಂತೆ ನಾರ್ಮಲ್ ಆಗಿ ಇರಲಿದೆ.
ಕಟಕ ರಾಶಿ
ಕಟಕ ರಾಶಿಯವರ ತಲೆಯಲ್ಲಿ ಓಡ್ತಿದ್ದ ಗೊಂದಲಗಳೆಲ್ಲಾ ಇವತ್ತು ಕ್ಲಿಯರ್ ಆಗಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದ್ದು, ನಿಂತುಹೋಗಿದ್ದ ಕೆಲಸಗಳು ಮತ್ತೆ ಸ್ಪೀಡ್ ತಗೊಳ್ಳಲಿವೆ. ಅದೃಷ್ಟ ನಿಮ್ಮ ಪರವಾಗಿ ಇರೋದ್ರಿಂದ ಯಾವುದೇ ಕೆಲಸಕ್ಕಾದರೂ ಧೈರ್ಯವಾಗಿ ಕೈಹಾಕಬಹುದು. ಹೊಸ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವಾಗಿ ನಿಮಗೆ ಹೆಲ್ಪ್ ಆಗಲಿದೆ. ಈ ಯಶಸ್ಸಿನ ನಡುವೆಯೂ ಎಲ್ಲರ ಜೊತೆ ನಮ್ರತೆಯಿಂದ ನಡೆದುಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಬಾಕಿ ಉಳಿದಿದ್ದ ಕೆಲಸಗಳೆಲ್ಲಾ ಇವತ್ತು ಕಂಪ್ಲೀಟ್ ಆಗೋ ಸೈನ್ಸ್ ಇದೆ. ಆಫೀಸ್‌ನಲ್ಲಿ ಬಾಸ್ ಮತ್ತು ಕಲೀಗ್ಸ್ ಕಡೆಯಿಂದ ಒಳ್ಳೆ ಸಪೋರ್ಟ್ ಸಿಗಲಿದೆ. ಹಳೇ ಪ್ರಾಬ್ಲಮ್ಸ್ ಎಲ್ಲಾ ಸಾಲ್ವ್ ಆಗಿ ನೆಮ್ಮದಿ ಸಿಗುತ್ತೆ. ಯಾರೋ ನಿಮಗೆ ಕೊಡಬೇಕಾಗಿದ್ದ ಹಳೇ ಬಾಕಿ ಹಣ ಇವತ್ತು ನಿಮ್ಮ ಕೈಸೇರಬಹುದು. ಬಿಸಿನೆಸ್‌ನಲ್ಲಿ ಲಾಭ ಇರಲಿದ್ದು, ಅವಸರದಲ್ಲಿ ಯಾವುದೇ ನಿರ್ಧಾರ ತಗೋಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುವ ದಿನವಿದು. ಆದರೆ ನಿಮ್ಮ ಮಾತಿನ ಧಾಟಿ ಸ್ವಲ್ಪ ಸಾಫ್ಟ್ ಆಗಿರಲಿ, ಇಲ್ಲದಿದ್ದರೆ ಅನಗತ್ಯ ಮಿಸ್ ಅಂಡರ್ಸ್ಟಾಂಡಿಂಗ್ ಆಗಬಹುದು. ಇವತ್ತು ಸೈಟ್ ಅಥವಾ ಮನೆ ಖರೀದಿಸುವ ಯೋಗ ಇದೆ. ಕೆಲಸದ ಜಾಗದಲ್ಲಿ ಸಣ್ಣಪುಟ್ಟ ಚಾಲೆಂಜ್ ಎದುರಾದರೂ ನಿಮ್ಮ ಟ್ಯಾಲೆಂಟ್‌ನಿಂದ ಅದನ್ನ ಮ್ಯಾನೇಜ್ ಮಾಡ್ತೀರಾ. ಹೆಲ್ತ್ ಚೆನ್ನಾಗಿರುತ್ತೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಕೆರಿಯರ್‌ನಲ್ಲಿ ಇವತ್ತು ಒಂದು ದೊಡ್ಡ ಬ್ರೇಕ್ ಸಿಗುವ ಸಾಧ್ಯತೆ ಇದೆ. ತಲೆಯಲ್ಲಿ ಬರೀ ನೆಗೆಟಿವ್ ಯೋಚನೆ ಮಾಡ್ತಾ ಕೂರಬೇಡಿ, ಅದೃಷ್ಟ ನಿಮ್ಮ ಜೊತೆಗಿದೆ. ಇವತ್ತು ಮಾಡುವ ಸಣ್ಣ ಜರ್ನಿ ಕೂಡ ನಿಮಗೆ ಪ್ರಾಫಿಟ್ ತಂದುಕೊಡಲಿದೆ. ಸೋಮಾರಿತನ ಬಿಟ್ಟು ಆಕ್ಟಿವ್ ಆಗಿರಿ. ಬಿಸಿನೆಸ್‌ನಲ್ಲಿ ಇನ್ವೆಸ್ಟ್ ಮಾಡಲು ಇದು ಬೆಸ್ಟ್ ಟೈಮ್.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಕೆಲಸದಲ್ಲಿದ್ದ ಅಡೆತಡೆಗಳು ದೂರಾಗಲಿವೆ. ಆದ್ರೆ ನೆನಪಿಡಿ, ಇವತ್ತು ಯಾರಿಗಾದರೂ ಸಾಲ ಕೊಟ್ಟರೆ ಆ ದುಡ್ಡು ವಾಪಸ್ ಬರೋದು ಡೌಟು! ಹೆಲ್ತ್ ಕಡೆ ಸ್ವಲ್ಪ ಗಮನ ಕೊಡಿ. ಬಿಸಿನೆಸ್‌ನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗೋ ಚಾನ್ಸ್ ಇರೋದ್ರಿಂದ ಪ್ರತಿಯೊಂದು ಡೀಲ್ ಮಾಡುವಾಗಲೂ ಎಚ್ಚರಿಕೆಯಿಂದ ಇರಿ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕಿ.
ಧನು ರಾಶಿ
ಧನು ರಾಶಿಯವರಿಗೆ ಹೊಸ ಆದಾಯದ ಮೂಲಗಳು ಕ್ರಿಯೇಟ್ ಆಗಲಿವೆ. ಬಿಸಿನೆಸ್ ಅಗಲಗೊಳಿಸಲು ಪ್ಲಾನ್ ಮಾಡ್ತಿದ್ರೆ ಇವತ್ತು ಮುನ್ನುಗ್ಗಬಹುದು. ಮನೆಯಲ್ಲಿ ಇದ್ದ ಹಳೇ ಆಸ್ತಿ ಗಲಾಟೆಗಳು ಇವತ್ತು ಸುಸೂತ್ರವಾಗಿ ಬಗೆಹರಿಯಲಿವೆ. ಮಕ್ಕಳ ಕಡೆಯಿಂದ ಗುಡ್ ನ್ಯೂಸ್ ಕೇಳಿ ಮನಸ್ಸು ಖುಷಿಯಾಗುತ್ತೆ. ಹೆಲ್ತ್ ಕಡೆ ಲೇಜಿ ಮಾಡಬೇಡಿ, ಸ್ವಲ್ಪ ಜಾಗ್ರತೆ ಇರಲಿ.
ಮಕರ ರಾಶಿ
ಮಕರ ರಾಶಿಯವರಿಗೆ ಆಫೀಸ್‌ನಲ್ಲಿ ನಿಮ್ಮ ಕೆಲಸಕ್ಕೆ ಭರ್ಜರಿ ಅಪ್ರಿಷಿಯೇಷನ್ ಸಿಗಲಿದೆ. ಫ್ಯಾಮಿಲಿಯಲ್ಲಿ ಹ್ಯಾಪಿ ಮೂಡ್ ಇರಲಿದೆ. ಹೊಸ ಪ್ರಾಪರ್ಟಿ ತಗೊಳೋಕೆ ಪ್ಲಾನ್ ಮಾಡ್ತೀರಾ. ಹಳೇ ಫ್ರೆಂಡ್ಸ್ ಸಿಕ್ಕಿ ಎಂಜಾಯ್ ಮಾಡ್ತೀರಾ. ಇವತ್ತು ಜಾಸ್ತಿ ಆರ್ಗ್ಯುಮೆಂಟ್ ಮಾಡೋಕೆ ಹೋಗಬೇಡಿ, "ಕಡಿಮೆ ಮಾತು, ಸಿಹಿ ಮುತ್ತು" ಪಾಲಿಸಿ ಫಾಲೋ ಮಾಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇವತ್ತು ಲಕ್ ಫುಲ್ ಸಪೋರ್ಟ್ ಮಾಡಲಿದೆ. ಅಂದುಕೊಂಡ ಪ್ಲಾನ್ ಎಲ್ಲಾ ಸಕ್ಸಸ್ ಆಗುತ್ತೆ. ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡೋಕೆ ಒಳ್ಳೆ ಅವಕಾಶ ಸಿಗುತ್ತೆ. ಆದ್ರೆ ಇವತ್ತು ತುಂಬಾ ದೂರದ ಜರ್ನಿ ಮಾಡೋಕೆ ಹೋಗ್ಬೇಡಿ, ಸುಮ್ನೆ ಬಾಡಿ ಪೈನ್ ಆಗಬಹುದು. ನಿಮ್ಮ ಒಳಗಿರೋ ಈಗೋ ಅಥವಾ ಹಠಮಾರಿತನ ಬಿಟ್ಟರೆ ನಿಮ್ಮ ರಿಲೇಶನ್‌ಶಿಪ್ಸ್ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ.
ಮೀನ ರಾಶಿ
ಮೀನ ರಾಶಿಯವರಿಗೆ ಇವತ್ತು ಅನಿರೀಕ್ಷಿತವಾಗಿ ಫೋನ್ ಕರೆ ಅಥವಾ ಮೆಸೇಜ್ ಮೂಲಕ ಒಂದೊಳ್ಳೆ ಸುದ್ದಿ ಸಿಗಲಿದೆ. ಫ್ರೆಂಡ್ಸ್ ನಿಮ್ಮ ಬೆನ್ನಿಗೆ ಇರ್ತಾರೆ. ಆದ್ರೆ ಅಪರಿಚಿತರ ವಿಷಯದಲ್ಲಿ ತಲೆ ಹಾಕೋಕೆ ಹೋಗ್ಬೇಡಿ. ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ತಕ್ಷಣ ಡಾಕ್ಟರ್ ಹತ್ತಿರ ಹೋಗಿ, ನಿರ್ಲಕ್ಷ್ಯ ಬೇಡ. ಬಿಸಿನೆಸ್‌ನಲ್ಲಿ ಇವತ್ತು ಪ್ರಮುಖ ಡಿಸಿಷನ್ ತಗೋಬೇಕಾದ್ರೆ ಕೋಪ ಮಾಡಿಕೊಳ್ಳದೆ ಕೂಲ್ ಆಗಿ ಯೋಚಿಸಿ.