Jan 25, 2026 Languages : ಕನ್ನಡ | English

ಬಾಬಾ ವಾಂಗಾ 2026ರ ಭವಿಷ್ಯ: ಈ 4 ರಾಶಿಗಳಿಗೆ ಬಹು ದೊಡ್ಡ ಅದೃಷ್ಟ!!

ಪ್ರಸಿದ್ಧ ಜ್ಯೋತಿಷಿ ಎಂದೇ ಕರೆಯಲ್ಪಡುವ ಬಾಬಾ ವಾಂಗಾ ಅವರು, ಅವರ ಸಾವಿನ ಬಳಿಕವೂ ಇಡೀ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಇವರು ನುಡಿದ ಸಾಕಷ್ಟು ವಿಚಾರದ ಭವಿಷ್ಯಗಳು ಒಂದು ಕಡೆ ಚರ್ಚೆ ಆದ್ರೆ ಇನ್ನೊಂದು ಕಡೆ ಸತ್ಯವಾಗಿದ್ದು ಉಂಟು ಎಂದು ಹಲವರ ಅಭಿಪ್ರಾಯ.  

ಬಾಬಾ ವಾಂಗಾ
ಬಾಬಾ ವಾಂಗಾ

ಜಗತ್ತಿನ ಪ್ರಾದೇಶಿಕ ಸಂಘರ್ಷಗಳು, ಹಾಗೂ ಪ್ರಕೃತಿ ರಾಜಕೀಯ ಬದಲಾವಣೆಗಳು ಸೇರಿದಂತೆ ಇವರು ನುಡಿದ ಅನೇಕ ಭವಿಷ್ಯಗಳು ಒಂದು ರೀತಿಯಲ್ಲಿ ಕಂಡುಬಂದರೆ, ಸದ್ಯ ಹಣ ಮತ್ತು ಅಧಿಕಾರಕ್ಕೆ ಕುರಿತಾಗಿ ಮುನ್ನೆಲೆಗೆ ಬಂದಿದೆ. ಈ ರಾಶಿ ಚಕ್ರಗಳು ಕೆಲವರ ಅಧ್ಯಯನ ಪ್ರಕಾರ ಮುಂದಿನ ವರ್ಷ ಅತಿ ಹೆಚ್ಚು ಯಶಸ್ಸು ಬೃಹತ್ ಹಣಗಳಿಕೆ ಕಾಣಲಿದ್ದಾರೆ. 

ಬಾಬಾ ವಾಂಗಾ ಅವರ ಭವಿಷ್ಯವಾಣಿಯಂತೆ "ಕೋಟಿಯರ ರಾಶಿಚಕ್ರ ಚಿಹ್ನೆ" ಭವಿಷ್ಯವಾಣಿ ಈ ಕೆಳಗಿನಂತಿದೆ. 

ಮೇಷ: ಮೇಷ ರಾಶಿಯ ಜನರು ಅತಿ ಹೆಚ್ಚು ಧೈರ್ಯಶಾಲಿಗಳಾಗುತ್ತಾರೆ. ಇವರ ಒಂದು ನಿರ್ಧಾರದಿಂದ ಹೊಸದಾದ ವ್ಯವಹಾರಿಕ ಸಾಹಸಕ್ಕೆ ಅತಿ ಹೆಚ್ಚು ಯಶಸ್ಸು ಸಿಗುವ ಸಾಧ್ಯತೆ ಇದೆಯಂತೆ. 

ವೃಷಭ: ಈ ರಾಶಿಯವರಲ್ಲೂ ಕೂಡ ಅಧಿಕ ಧೈರ್ಯ ಜೊತೆಗೆ  ದೀರ್ಘಕಾಲಿಕ ಹೂಡಿಕೆಯಿಂದ ಶ್ರೀಮಂತರು ಆಗುವ ಸಾಧ್ಯತೆ ಹೆಚ್ಚು. ಇಂತಹ ಸಾಧನೆ ಮಾಡುವುದು ಈ ವೃಷಭ ರಾಶಿಯವರ ಕ್ಷಮತೆ ಎನ್ನಲಾಗಿದೆ. 

ಮಿಥುನ: ಇವರಿಗೆ ಅತೀವ ಜ್ಞಾನ ಇರುತ್ತದೆ. ಇವರು ಬುದ್ದಿಶಾಲಿಗಳಾಗಿದ್ದೂ, ಬೌದ್ಧಿಕ ಚುರುಕಿನಿಂದ ಜೊತೆಗೆ  ಬೇರೆ ಅಪರಿಚಿತ ವ್ಯಕ್ತಿ ಅಥವಾ ಅವರ ಅವಕಾಶಗಳಿಂದ ಇನ್ನಷ್ಟು ಯಶಸ್ಸು ಕಾಣುತ್ತಾರೆ. 

ಸಿಂಹ: ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡು,  ಹೊಸ ಉದ್ಯಮಗಳು ಅಥವಾ ಸೃಜನಾತ್ಮಕ ಯೋಜನೆಗಳನ್ನು ಆರಂಭ ಮಾಡುವ ಮುಕಾಂತರ ಹಣಕಾಸು ವಿಚಾರದಲ್ಲಿ ಬೆಳವಣಿಗೆ ಕಾಣುತ್ತಾರೆ ಎಂದು ಅಧ್ಯಯನ ಮಾಡಿದವರ ಮೂಲಕ ಕೇಳಿಬಂದಿದೆ.    

ಗಮನಿಸಿ: ಈ ಸುದ್ದಿ ವಿವಿಧ ಮಾಧ್ಯಮ ವರದಿಗಳ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಜ್ಯೋತಿಷ್ಯಶಾಸ್ತ್ರದ ವ್ಯಾಖ್ಯಾನಗಳ ಆಧಾರದ ಮೇಲೆ ಇದೆ. ಸಪ್ತಶ್ವ ಟಿವಿ ನ್ಯೂಸ್ ಈ ಭವಿಷ್ಯವಾಣಿಗಳನ್ನು ಯಾವ ರೀತಿಯ ಅಭಿಪ್ರಾಯವನ್ನು ಅಥವಾ ಅಭಿಪ್ರೇರಣೆಯನ್ನು ನೀಡುವುದಿಲ್ಲ.