ಕ್ರಿಕೆಟ್ ನಮ್ಮ ಭಾರತದಲ್ಲಿ ಒಂದು ವಿಭಿನ್ನ ವಿಷಯ ಹಾಗೆ ಹೆಚ್ಚು ಜನಪ್ರಿಯತೆ ಹೊಂದಿರುವ ಆಟ ಆಗಿದೆ. ಪುರುಷರ ಐಪಿಎಲ್‌ಗೆ ಸಮಾನವಾಗಿ, ಮಹಿಳೆಯರ ಟಿ20 ಲೀಗ್ ಕ್ರಿಕೆಟ್ ಪ್ರಿಯರಲ್ಲಿ ತೀವ್ರ ಉತ್ಸಾಹವನ್ನು ಉಂಟುಮಾಡಿದೆ. ಮೂರು ಯಶಸ್ವಿ ಆವೃತ್ತಿಗಳ ನಂತರ, ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ತನ್ನ ನಾಲ್ಕನೇ ಸುತ್ತಿಗೆ ಸಿದ್ಧವಾಗಿದೆ. ಈ ಲೀಗ್ ನಾಳೆ ಆರಂಭವಾಗಲಿದ್ದು, ಅನೇಕ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ನಾಳೆ, ಪ್ರಸ್ತುತ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಮ್ಮ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಆಡಲಿದ್ದಾರೆ.
ಈ ಪಂದ್ಯವು ಲೀಗ್ ಆರಂಭಕ್ಕೂ ಮುನ್ನ ಉತ್ತಮ ಆರಂಭವಾಗಲಿದೆ. ಆರ್‌ಸಿಬಿ ತಂಡವು ಈ ಸೀಸನ್‌ನಲ್ಲಿ ಶಕ್ತಿಶಾಲಿ ಆಟಗಾರರೊಂದಿಗೆ ಕಣಕ್ಕಿಳಿಯುತ್ತಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪರ್ಧೆಯನ್ನು ಆರಂಭಿಸುತ್ತಿದೆ. ಅವರು ಕಳೆದ ಆವೃತ್ತಿಯಲ್ಲಿ ಚಾಂಪಿಯನ್‌ಗಳಾಗಿ ಹೊರ ಹೊಮ್ಮಿದ್ದರು. ಹೌದು ಈ ಆವೃತ್ತಿಯಲ್ಲಿ ಒಟ್ಟು ಐದು ತಂಡಗಳು ಸ್ಪರ್ದಿಸುತ್ತಿವೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್, ಜೊತೆಗೆ ಗುಜರಾತ್ ಜೈಂಟ್ಸ್ ಈ ಹೊಸ ಸೀಸನ್‌ನ ರೋಮಾಂಚಕ ಟೂರ್ನಮೆಂಟ್ ಅನ್ನು ಒದಗಿಸುತ್ತವೆ.
ಪ್ರತಿ ತಂಡವು ತನ್ನ ಉತ್ತಮ ಆಟಗಾರರೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಒಟ್ಟು 22 ಪಂದ್ಯಗಳು ಈ 28 ದಿನಗಳ ಲೀಗ್‌ನಲ್ಲಿ ನಡೆಯಲಿವೆ. ಮತ್ತು ಪ್ರತಿ ಪಂದ್ಯವು ಎಲ್ಲಾ ಅಭಿಮಾನಿಗಳ ಉತ್ಸಾಹಕ್ಕೆ ಸಾಕಾಗುತ್ತದೆ. ಲೀಗ್ ನಂತರ ಪ್ಲೇಆಫ್ ಪಂದ್ಯಗಳು ಮತ್ತು ಅಂತಿಮ ಪಂದ್ಯಗಳು ನಡೆಯಲಿವೆ. ಈ ಬಾರಿ ಟೂರ್ನಮೆಂಟ್‌ಗೆ ಎರಡು ದೊಡ್ಡ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆಯಂತೆ. ನೇವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣ ಮತ್ತು ವಡೋದರದ ಬಿಸಿಎ ಕ್ರೀಡಾಂಗಣ ಅಭಿಮಾನಿಗಳ ಮಹಾ ಅನುಭವವಾಗಲಿದೆ ಎಂದು ಹೇಳಬಹುದು.
ಈ ಸ್ಥಳಗಳು ಈಗಾಗಲೇ ಅನೇಕ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದು, ಮುಂಬರುವ ವುಮೆನ್ಸ್ ಐಪಿಎಲ್ ಪಂದ್ಯಗಳಿಗೆ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿರುವುದು ವಿಶೇಷ ಹಾಗೂ ಕ್ರಿಕೆಟ್ ಒಂದು ಹಬ್ಬದಂತಾಗಿರುತ್ತದೆ. ಮಹಿಳಾ ಕ್ರಿಕೆಟ್ ಮಹಿಳೆಯರ ಪ್ರೀಮಿಯರ್ ಲೀಗ್ ಆರಂಭದಿಂದಲೇ ಹೊಸ ಜೀವ ಪಡೆದಿದೆ. ಇದು ಯುವ ಆಟಗಾರರಿಗೆ ಪ್ರದರ್ಶನ ನೀಡಲು ದೊಡ್ಡ ವೇದಿಕೆ ಎನ್ನಬಹುದು.
ಅಂತಾರಾಷ್ಟ್ರೀಯ ಆಟಗಾರರು ಮತ್ತು ಭಾರತೀಯ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಆಡಲಿದ್ದು, ಸ್ಪರ್ಧೆ ಇನ್ನಷ್ಟು ರೋಮಾಂಚಕವಾಗಲಿದೆ. ಮಹಿಳೆಯರ ಪ್ರೀಮಿಯರ್ ಲೀಗ್‌ನ ನಾಲ್ಕನೇ ಹಂತ ಇನ್ನಷ್ಟೇ ಆರಂಭ ಅಗಲಿದ್ದು, ಈ 22 ಪಂದ್ಯಗಳ ಲೀಗ್ ಮಹಿಳಾ ಕ್ರಿಕೆಟ್‌ಗೆ ಹೊಸ ಆಸಕ್ತಿ ನೀಡುತ್ತದೆ ಮತ್ತು ಯುವ ಪ್ರತಿಭೆಗಳಿಗೆ ಅಂತಾರಾಷ್ಟ್ರೀಯ ಪ್ರಚಾರವನ್ನು ನೀಡುತ್ತದೆ. ಮುಂಬೈ ಮತ್ತು ವಡೋದರದಲ್ಲಿ ನಡೆಯುವ ಪಂದ್ಯಗಳು ಹೇಗಿರಬಹುದು ಎಂದು ಈಗಾಗಾಲೇ ಅಭಿಮಾನಿಗಳು ಊಹಿಸಿದ್ದು ಒಂದೊಳ್ಳೆ ಅನುಭವ ಈ ಸಾರಿ ಪಡೆಯಲು ಕಾಯುತ್ತಿದ್ದಾರೆ ಎಂದು ಹೇಳಬಹುದು. ನಿಮ್ಮ ನೆಚ್ಚಿನ ಮಹಿಳಾ ತಂಡ ಯಾವುದು ಕಾಮೆಂಟ್ ಮಾಡಿ, ಧನ್ಯವಾದಗಳು..