ಅಂಡರ್–19 ವಿಶ್ವಕಪ್ ಫೈನಲ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಹೊಚ್ಚ ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು ಸ್ಫೋಟಕವಾಗಿ ಆಡಿದ್ದು 175 ರನ್‌ಗಳನ್ನು ಬಾರಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ, ಪುರುಷ ಹಾಗೂ ಮಹಿಳೆ ಮತ್ತು ಎಲ್ಲಾ ವಯೋಮಾನದ ವಿಭಾಗಗಳಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ದಾಖಲೆಗೆ ಪಾತ್ರರಾದರು.
ಇದಕ್ಕೂ ಮುನ್ನ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಬಾರಿಸಿದ್ದ 163 ರನ್‌ಗಳು ಅತ್ಯುತ್ತಮ ದಾಖಲಾಗಿತ್ತು. ಆ ದಾಖಲೆಯನ್ನು ಸೂರ್ಯವಂಶಿ ಮೀರಿಸಿದ್ದಾರೆ. ವೈಭವ್ ತಮ್ಮ ಬ್ಯಾಟಿಂಗ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದ್ದು, ಅವರ ನಿದ್ದೆಗೆಡುವಂತೆ ಮಾಡಿದರು. ಅವರ ಆಟವನ್ನು ನೋಡಿದ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಭವಿಷ್ಯದ ಭಾರತೀಯ ಸ್ಟಾರ್ ಕ್ರಿಕೆಟಿಗ ಎಂದು ಪ್ರಶಂಸಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ ಅವರ ಇನಿಂಗ್ಸ್ ತಂಡಕ್ಕೆ ದೊಡ್ಡ ಬಲ ನೀಡಿತು ಎನ್ನಬಹುದು. ಇಂತಹ ಪ್ರದರ್ಶನವು ಅಂಡರ್–19 ಮಟ್ಟದಲ್ಲೇ ವಿಶ್ವದ ಗಮನ ಸೆಳೆಯುವಂತಾಗಿದೆ. ಕ್ರಿಕೆಟ್ ಲೋಕದಲ್ಲಿ ಫೈನಲ್ ಪಂದ್ಯಗಳಲ್ಲಿ ಒಬ್ಬ ಆಟಗಾರ ಇಷ್ಟು ದೊಡ್ಡ ಸ್ಕೋರ್ ಮಾಡುವುದು ಅಪರೂಪ. ವೈಭವ್ ಸೂರ್ಯವಂಶಿ ಅವರ ಹೆಸರು ಈಗ ವಿಶ್ವದಾಖಲೆ ಪಟ್ಟಿಯಲ್ಲಿ ಸೇರಿದೆ. ಅವರ ಸಾಧನೆ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ಗೆ ಹೊಸ ಶಕ್ತಿ ನೀಡಲಿದೆ.
ಅಂಡರ್–19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಬಾರಿಸಿದ 175 ರನ್‌ಗಳು ಕೇವಲ ದಾಖಲೆ ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಭವಿಷ್ಯದ ಹೊಸ ಅಧ್ಯಾಯವನ್ನು ಬರೆದಿವೆ. ಮುಂಬರುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿ ವೈಭವ್ ಹೊರ ಹೊಮ್ಮಿದರು.