Apr 9, 2026 Languages : ಕನ್ನಡ | English

ಮತ್ತೆ ಒಂದಾಗ್ತಾರಾ ಸ್ಮೃತಿ ಮಂಧಾನ - ಪಲಾಶ್ ಮುಚ್ಚಲ್? ಮದುವೆ ಮುರಿದು ಬಿದ್ದ ಮೇಲೆ ರೆಸ್ಟೋರೆಂಟ್ ಹೊರಗೆ ಫ್ಯಾಮಿಲಿ ವಿಡಿಯೋ!!

ಕ್ರಿಕೆಟ್ ಲೋಕದ ನ್ಯಾಷನಲ್ ಕ್ರಶ್ ಸ್ಮೃತಿ ಮಂಧಾನ ಮತ್ತು ಮ್ಯೂಸಿಕ್ ಡೈರೆಕ್ಟರ್ ಪಲಾಶ್ ಮುಚ್ಚಲ್ ಅವರ ಲವ್ ಸ್ಟೋರಿ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಕಳೆದ ನವೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಆದ್ರೆ ತಾಳಿ ಕಟ್ಟೋ ಟೈಮ್‌ನಲ್ಲೇ ದೊಡ್ಡ ರಾದ್ಧಾಂತ ನಡೆದು ಮದುವೆ ನಿಂತು ಹೋಗಿತ್ತು. ಇವಾಗ ಇವರಿಬ್ಬರು ಮತ್ತೆ ಒಂದಾಗ್ತಿದ್ದಾರಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಯಾಕಂದ್ರೆ ಮುಂಬೈನ ಐಷಾರಾಮಿ ರೆಸ್ಟೋರೆಂಟ್ ಒಂದರ ಮುಂದೆ ಇತ್ತೀಚೆಗೆ ನಡೆದ ಒಂದು ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

ವೈರಲ್ ವಿಡಿಯೋ: ಮಂಧಾನ-ಮುಚ್ಚಲ್ ಕುಟುಂಬ ಆತ್ಮೀಯತೆ!!
ವೈರಲ್ ವಿಡಿಯೋ: ಮಂಧಾನ-ಮುಚ್ಚಲ್ ಕುಟುಂಬ ಆತ್ಮೀಯತೆ!!

ನಿಜ ಹೇಳಬೇಕಂದ್ರೆ, 2025ರ ನವೆಂಬರ್ 23ರಂದು ಸ್ಮೃತಿ ಮತ್ತು ಪಲಾಶ್ ಮದುವೆ ನಡೆಯಬೇಕಿತ್ತು. ಹಳದಿ, ಮೆಹಂದಿ ಅಂತ ಎಲ್ಲಾ ಸಂಭ್ರಮ ಮುಗಿದಿತ್ತು. ಆದ್ರೆ ಮದುವೆ ದಿನವೇ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಹದಗೆಟ್ಟು ಅವರನ್ನ ಆಸ್ಪತ್ರೆಗೆ ದಾಖಲಿಸಲಾಯ್ತು. ಆ ಬೆನ್ನಲ್ಲೇ ಈ ಜೋಡಿಯ ನಡುವೆ ಕಹಿ ಇರೋದು ಹೊರಬಂತು.

ಸ್ಮೃತಿ ಫ್ರೆಂಡ್ ವಿಜ್ಞಾನ್ ಮಾನೆ ಅವರು ಪಲಾಶ್ ಮುಚ್ಚಲ್ ವಿರುದ್ಧ ಶಾಕಿಂಗ್ ಆರೋಪ ಮಾಡಿದ್ರು. ಪಲಾಶ್ ಮತ್ತೊಬ್ಬ ಮಹಿಳೆ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ, ಅದಕ್ಕೇ ಮದುವೆ ನಿಂತಿದೆ ಅಂತ ಸುದ್ದಿ ಹಬ್ಬಿತ್ತು. ಈ ಗಲಾಟೆಯಲ್ಲಿ ಪಲಾಶ್‌ಗೆ ಏಟು ಬಿದ್ದಿದೆ ಅನ್ನೋ ಮಾತುಗಳು ಕೂಡ ಕೇಳಿಬಂದಿದ್ವು. ಐದು ವರ್ಷದ ಪ್ರೀತಿ ಹೀಗೆ ವಿವಾದಾತ್ಮಕವಾಗಿ ಮುಗಿದು ಹೋಯ್ತಲ್ಲ ಅಂತ ಫ್ಯಾನ್ಸ್ ಬೇಸರದಲ್ಲಿದ್ರು.

ಇದೆಲ್ಲಾ ಆದಮೇಲೆ ಈಗೊಂದು ಹೊಸ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಮುಂಬೈನ ಒಂದು ದೊಡ್ಡ ರೆಸ್ಟೋರೆಂಟ್ ಹೊರಗೆ ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಅವರ ಜೊತೆ ಪಲಾಶ್ ಮುಚ್ಚಲ್ ಅವರ ಸಿಸ್ಟರ್, ಫೇಮಸ್ ಸಿಂಗರ್ ಪಲಾಕ್ ಮುಚ್ಚಲ್ ಮತ್ತು ಅವರ ಹಸ್ಬೆಂಡ್ ಮಿಥುನ್ ಕೂಡ ಇದ್ದಾರೆ.

ಈ ವಿಡಿಯೋದಲ್ಲಿ ಪಲಾಕ್ ಮುಚ್ಚಲ್ ಅವರು ಸ್ಮೃತಿಯ ತಂದೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಎರಡು ಕುಟುಂಬಗಳ ನಡುವೆ ಇರೋ ಈ ಆತ್ಮೀಯತೆ ನೋಡಿದ್ರೆ, ಹಳೇ ಜಗಳವೆಲ್ಲಾ ಮರೆತು ಇವರು ಮತ್ತೆ ಒಂದಾಗ್ತಿದ್ದಾರಾ? ಮದುವೆ ಮಾತುಕತೆ ಮತ್ತೆ ಶುರುವಾಗಿದ್ಯಾ? ಅನ್ನೋ ಅನುಮಾನ ನೆಟ್ಟಿಗರಲ್ಲಿ ಶುರುವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿ ಜನ ತರಹೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಸ್ಮೃತಿ ಮಂಧಾನ ಮತ್ತೆ ಖುಷಿಯಾಗಿರಲಿ, ಅವರಿಬ್ಬರು ಒಂದಾದ್ರೆ ನಮಗೂ ಖುಷಿನೇ ಅಂತ ಕೆಲವರು ಹೇಳ್ತಿದ್ದಾರೆ. ಇನ್ನು ಕೆಲವರು 'ಇದು ಹಳೆಯ ವಿಡಿಯೋ ಇರಬಹುದು, ಸುಮ್ಮನೆ ವದಂತಿ ಹಬ್ಬಿಸಬೇಡಿ' ಅಂತ ಡೌಟ್ ಪಡ್ತಿದ್ದಾರೆ.

ಒಟ್ಟಿನಲ್ಲಿ ಸ್ಮೃತಿ ಮಂಧಾನ ಅವರ ಪರ್ಸನಲ್ ಲೈಫ್ ಈಗ ಮತ್ತೆ ಚರ್ಚೆಯಲ್ಲಿದೆ. ಆರ್‌ಸಿಬಿ ಅಭಿಮಾನಿಗಳಂತೂ ತಮ್ಮ ನೆಚ್ಚಿನ ಕ್ಯಾಪ್ಟನ್ ಜೀವನದಲ್ಲಿ ಅಪ್ಸ್ ಅಂಡ್ ಡೌನ್ಸ್ ಮುಗಿದು ಎಲ್ಲವೂ ಪಾಸಿಟಿವ್ ಆಗಲಿ ಅಂತ ಹಾರೈಸ್ತಿದ್ದಾರೆ. ಪ್ರೀತಿಯಲ್ಲಿ ಜಗಳ, ಮನಸ್ತಾಪ ಸಹಜ. ಆದ್ರೆ ಐದು ವರ್ಷದ ಸಂಬಂಧ ಅಷ್ಟು ಬೇಗ ಮುರಿದು ಹೋಗಲ್ಲ ಅನ್ನೋದು ಈ ವಿಡಿಯೋ ನೋಡಿದ್ರೆ ಅನ್ಸುತ್ತೆ. ಎರಡು ಫ್ಯಾಮಿಲಿಗಳು ಒಟ್ಟಿಗೆ ಕಾಣಿಸಿಕೊಂಡಿರೋದು ನೋಡಿದ್ರೆ ಶುಭ ಸಮಾಚಾರ ಹತ್ತಿರದಲ್ಲೇ ಇರಬಹುದು. 

Latest News