Apr 17, 2026 Languages : ಕನ್ನಡ | English

ಟೀಮ್ ಇಂಡಿಯಾ ವೇಗಿ ಅರ್ಶ್ದೀಪ್ ಸಿಂಗ್ 'ಕ್ಲೀನ್ ಬೌಲ್ಡ್': ಯಾರು ಈ ನಿಗೂಢ ಸುಂದರಿ? ಹಚ್ಚೆಯಿಂದ ಬಯಲಾಯ್ತು ಲವ್ ಸ್ಟೋರಿ!!

ಮೈದಾನದಲ್ಲಿ ಬ್ಯಾಟರ್‌ಗಳ ವಿಕೆಟ್ ಉಡಾಯಿಸೋ ಆರ್ಶದೀಪ್ ಸಿಂಗ್ ಈಗ ತಾವೇ ಕ್ಲೀನ್ ಬೌಲ್ಡ್ ಆಗಿದ್ದಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದೆ. ಇತ್ತೀಚೆಗೆ ಅರ್ಶ್ದೀಪ್ ಅವರ ಫೋಟೋವೊಂದು ಸಖತ್ ವೈರಲ್ ಆಗ್ತಿದ್ದು, ಅದರಲ್ಲಿ ಅವರು ಒಬ್ಬ ಯುವತಿಯ ಕೈ ಹಿಡಿದು ಕುಳಿತಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು, "ನಮ್ಮ ಅರ್ಶ್ದೀಪ್ ಅವರು ಲವ್ವಲ್ಲಿ ಬಿದ್ದಿದ್ದಾರೆ" ಅಂತ ಚರ್ಚೆ ಶುರು ಮಾಡಿದ್ದಾರೆ.

"ಹಚ್ಚೆಯ ಸುಳಿವು: ಸಮ್ರೀನ್ ಕೌರ್ ಜೊತೆ ಅರ್ಶ್ದೀಪ್?" | Photo Credit: insta @samreenkaur__ and @_arshdeep.singh

ಹಚ್ಚೆಯ ಗುಟ್ಟು ರಟ್ಟಾಯ್ತಾ?

ಈ ವೈರಲ್ ಫೋಟೋದಲ್ಲಿ ಆ ಯುವತಿಯ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೆ, ಆಕೆಯ ಕೈ ಮೇಲಿರುವ ಒಂದು ವಿಶೇಷವಾದ ಹಚ್ಚೆ (Tattoo) ಈಗ ಎಲ್ಲವನ್ನೂ ಬಿಟ್ಟುಕೊಟ್ಟಿದೆ ಎನ್ನಲಾಗುತ್ತಿದೆ. ನೆಟ್ಟಿಗರು ಈ ಹಚ್ಚೆಯನ್ನು ಪಂಜಾಬಿ ನಟಿ ಸಮ್ರೀನ್ ಕೌರ್ ಅವರ ಫೋಟೋಗಳ ಜೊತೆ ಮ್ಯಾಚ್ ಮಾಡಿ ನೋಡಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ, ಹಚ್ಚೆ ಒಂದೇ ರೀತಿ ಇರೋದ್ರಿಂದ ಅರ್ಶ್ದೀಪ್ ಜೊತೆ ಇರೋದು ನಟಿ ಸಮ್ರೀನ್ ಕೌರ್ ಅವರೇ ಇರಬಹುದು ಅಂತ ಜನ ಫಿಕ್ಸ್ ಆಗಿಬಿಟ್ಟಿದ್ದಾರೆ.

ಐಪಿಎಲ್ ಮೈದಾನದಲ್ಲೂ ಕಾಣಿಸಿಕೊಂಡಿದ್ದರು ಈ ನಟಿ!

ಸಮ್ರೀನ್ ಕೌರ್ ಅವರು ಕೇವಲ ಹಚ್ಚೆಯಿಂದ ಅಷ್ಟೇ ಅಲ್ಲ, ಐಪಿಎಲ್ ಪಂದ್ಯಗಳಲ್ಲೂ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಅರ್ಶ್ದೀಪ್ ಸಿಂಗ್ ಆಡುವ ಪಂಜಾಬ್ ಕಿಂಗ್ಸ್ ತಂಡವನ್ನು ಬೆಂಬಲಿಸಲು ಸಮ್ರೀನ್ ಮೈದಾನಕ್ಕೆ ಬಂದಿದ್ದರು. ಅರ್ಶ್ದೀಪ್ ಚೆನ್ನಾಗಿ ಆಡಿದಾಗಲೆಲ್ಲಾ ಇವರು ಸಂಭ್ರಮ ಪಡೋದು ನೋಡಿ ಅಭಿಮಾನಿಗಳಿಗೆ ಮೊದಲೇ ಡೌಟ್ ಬಂದಿತ್ತು. ಈಗ ಈ ಫೋಟೋ ವೈರಲ್ ಆದ ಮೇಲೆ ಆ ಡೌಟ್ ಇನ್ನಷ್ಟು ಗಟ್ಟಿಯಾಗಿದೆ.

ಯಾರು ಈ ಸಮ್ರೀನ್ ಕೌರ್?

ಸಮ್ರೀನ್ ಕೌರ್ ಪಂಜಾಬಿ ಚಿತ್ರರಂಗದಲ್ಲಿ ಈಗ ತಾನೇ ಬೆಳೆಯುತ್ತಿರುವ ಪ್ರತಿಭೆ. ಈಗಾಗಲೇ ಎಷ್ಟೋ ಫೇಮಸ್ ಪಂಜಾಬಿ ಮ್ಯೂಸಿಕ್ ವಿಡಿಯೋಗಳಲ್ಲಿ ಇವರು ನಟಿಸಿದ್ದಾರೆ. ವಿಶೇಷ ಅಂದ್ರೆ, ರಣವೀರ್ ಸಿಂಗ್ ಅಭಿನಯದ '83' ಸಿನಿಮಾದಲ್ಲೂ ಇವರು ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರೋ ಸಮ್ರೀನ್, ತಮ್ಮ ಹಾಟ್ ಫೋಟೋಗಳ ಮೂಲಕವೇ ದೊಡ್ಡ ಮಟ್ಟದ ಫಾಲೋವರ್ಸ್ ಹೊಂದಿದ್ದಾರೆ.

ಅಧಿಕೃತ ಮಾಹಿತಿ ಯಾವಾಗ?

ಅಂದಹಾಗೆ, ಈ ಡೇಟಿಂಗ್ ಸುದ್ದಿಗಳ ಬಗ್ಗೆ ಅರ್ಶ್ದೀಪ್ ಸಿಂಗ್ ಆಗಲಿ ಅಥವಾ ಸಮ್ರೀನ್ ಕೌರ್ ಆಗಲಿ ಇದುವರೆಗೂ ತುಟಿ ಬಿಚ್ಚಿಲ್ಲ. "ನಾವು ಜಸ್ಟ್ ಫ್ರೆಂಡ್ಸ್" ಅಂತಾರಾ ಅಥವಾ "ನಮ್ ಲವ್ ನಿಜ" ಅಂತ ಒಪ್ಪಿಕೊಳ್ತಾರಾ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ಅರ್ಶ್ದೀಪ್ ಸಿಂಗ್ ಹಾಗೂ ಪಂಜಾಬಿ ನಟಿಯ ನಡುವಿನ ಈ 'ಲವ್ ಗುಗ್ಲಿ' ಈಗ ಕ್ರಿಕೆಟ್ ಲೋಕದಲ್ಲಿ ಸಖತ್ ಸೌಂಡ್ ಮಾಡ್ತಿದೆ. 

Latest News