ಆರ್ ಸಿಬಿ ಅಭಿಮಾನಿಗಳು ಸರಿ ಇಲ್ಲ - ಚೇಪಾಕ್ ನಲ್ಲಿ ಕೋಲ್ಕತ್ತಾ ಅಭಿಮಾನಿಯ ವಿಡಿಯೋ ಬಾರಿ ವೈರಲ್!!

ಐಪಿಎಲ್ ಅಂದ್ರೆ ಬರೀ ಮೈದಾನದಲ್ಲಿ ನಡೆಯೋ ಸಿಕ್ಸ್-ಫೋರ್‌ಗಳ ಆಟ ಮಾತ್ರ ಅಲ್ವೇ ಅಲ್ಲ. ಗ್ಯಾಲರಿಯಲ್ಲಿ ಕೂತು ಅರಚೋ ಅಭಿಮಾನಿಗಳು ಮತ್ತು ಸೋಶಿಯಲ್ ಮೀಡಿಯಾದಲ್ಲಿ ನಡೆಯೋ ಅಭಿಮಾನಿಗಳ ಕಿತ್ತಾಟವೇ ಅಸಲಿ ಮಜಾ. ಆದ್ರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೆಕೆಆರ್ (Kolkata Knight Riders) ಅಭಿಮಾನಿಯೊಬ್ಬ ಮಾಡಿರೋ ಕಮೆಂಟ್ ಈಗ ದೊಡ್ಡ ಸಂಚಲನ ಮೂಡಿಸಿದೆ. ಇದು ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಚೆನ್ನೈನ ಚೇಪಾಕ್ ಸ್ಟೇಡಿಯಂ ನಡುವಿನ ಅಭಿಮಾನಿಗಳ ನಡವಳಿಕೆಯ ಬಗ್ಗೆ ಕೇಳಿಬಂದಿದೆ. 

ಕೆಕೆಆರ್ ಫ್ಯಾನ್ ಹೇಳಿದ ಮಾತು – RCB ಅಭಿಮಾನಿಗಳು ಶಾಕ್!! | Photo Credit: https://x.com/WorshipDhoni
ಕೆಕೆಆರ್ ಫ್ಯಾನ್ ಹೇಳಿದ ಮಾತು – RCB ಅಭಿಮಾನಿಗಳು ಶಾಕ್!! | Photo Credit: https://x.com/WorshipDhoni

ಸಂಗತಿ ಇಷ್ಟೇ - ಸಿಎಸ್‌ಕೆ ಮತ್ತು ಕೆಕೆಆರ್ ಮ್ಯಾಚ್ ನಡೆದ ಸಂದರ್ಭದಲ್ಲಿ ಒಬ್ಬ ಕೆಕೆಆರ್ ಫ್ಯಾನ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಆತ ಹೇಳಿರೋ ಪ್ರಕಾರ, "ನಾನು ಚೆನ್ನೈನ ಚೇಪಾಕ್ ಸ್ಟೇಡಿಯಂಗೆ ಮ್ಯಾಚ್ ನೋಡೋಕೆ ಹೋದ್ರೆ, ನನ್ನ ಟೀಮ್ ಗೆದ್ದರೂ ಅಥವಾ ಸೋತರೂ ಅಲ್ಲಿನ ಸಿಎಸ್‌ಕೆ ಅಭಿಮಾನಿಗಳು ಬಂದು ಅಭಿನಂದಿಸುತ್ತಾರೆ. ತುಂಬಾ ಗೌರವದಿಂದ ನಡೆದುಕೊಳ್ತಾರೆ. ಆದ್ರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋದ್ರೆ ಕಥೆಯೇ ಬೇರೆ. ಅಲ್ಲಿ ನಾವು ಗೆದ್ದರೂ ಟ್ರೋಲ್ ಮಾಡ್ತಾರೆ, ಸೋತರೂ ಕೆಟ್ಟದಾಗಿ ರೇಗಿಸ್ತಾರೆ"

ಚೆನ್ನೈ ಅಭಿಮಾನಿಗಳು 'ಕ್ರಿಕೆಟ್ ಜ್ಞಾನ' ಹೆಚ್ಚಿರೋರು ಅಂತ ಮೊದಲಿನಿಂದಲೂ ಹೆಸರಾದವರು. ಎದುರಾಳಿ ತಂಡದವರು ಚೆನ್ನಾಗಿ ಆಡಿದ್ರೆ ಎದ್ದು ನಿಂತು ಚಪ್ಪಾಳೆ ತಟ್ಟೋ ಸಂಪ್ರದಾಯ ಅಲ್ಲಿನ ಚೇಪಾಕ್ ಮೈದಾನದಲ್ಲಿದೆ. ಆದ್ರೆ ನಮ್ಮ ಆರ್‌ಸಿಬಿ (RCB) ಅಭಿಮಾನಿಗಳು ಅಂದ್ರೆ ಅವರಿಗೆ ತಮ್ಮ ಟೀಮ್ ಮೇಲೆ ಇರೋದು ಪ್ರೀತಿಯಲ್ಲ, ಅದು ಒಂಥರಾ ಎಮೋಷನಲ್ ಹುಚ್ಚು.

"ಈ ಸಲ ಕಪ್ ನಮ್ದೇ" ಅನ್ನೋ ಹಠದಲ್ಲಿರೋ ಬೆಂಗಳೂರು ಫ್ಯಾನ್ಸ್, ಮೈದಾನದಲ್ಲಿ ಎದುರಾಳಿ ಟೀಮ್ ಜರ್ಸಿ ಹಾಕೊಂಡು ಹೋದ್ರೆ ಸಾಕು, ಅವರನ್ನ ರೇಗಿಸೋದು, ಕಿರುಚೋದು ಮಾಡ್ತಾರೆ ಅನ್ನೋದು ಅನೇಕರ ಆರೋಪ. ಇದು ಬರೀ ಮೈದಾನದಲ್ಲಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲೂ ಈ ಟಾಕ್ಸಿಕ್ ಕಲ್ಚರ್ ಅತಿರೇಕಕ್ಕೆ ಹೋಗ್ತಿದೆ ಅಂತ ಆ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದಾನೆ.

ಇನ್ನೊಂದು ಶಾಕಿಂಗ್ ವಿಚಾರ ಅಂದ್ರೆ, ಈ ರೀತಿಯ ಅಸಭ್ಯ ನಡವಳಿಕೆಗೆ ಸ್ಟೇಡಿಯಂನಲ್ಲಿರೋ ಕೆಲವು ಅಧಿಕಾರಿಗಳ ಅಥವಾ ಮ್ಯಾನೇಜ್‌ಮೆಂಟ್‌ನ ಮೌನ ಸಮ್ಮತಿ ಕೂಡ ಇದೆ ಅನ್ನೋದು ಈ ಪೋಸ್ಟ್‌ನ ಸಾರಾಂಶ. ಎದುರಾಳಿ ಅಭಿಮಾನಿಗಳಿಗೆ ಸರಿಯಾದ ಭದ್ರತೆ ಅಥವಾ ಗೌರವ ಸಿಗುತ್ತಿಲ್ಲ ಅನ್ನೋದು ಕಹಿ ಸತ್ಯವಾಗಿ ಹೊರಹೊಮ್ಮುತ್ತಿದೆ.

ಕ್ರಿಕೆಟ್ ಅನ್ನೋದು ಕೊನೆಗೆ ಒಂದು ಆಟ ಅಷ್ಟೇ. ಗೆಲುವು-ಸೋಲು ಎರಡನ್ನೂ ಸಮನಾಗಿ ಸ್ವೀಕರಿಸೋದು ಕ್ರೀಡಾ ಮನೋಭಾವ. ನಮ್ಮ ಆರ್‌ಸಿಬಿ ಟೀಮ್ ಅಂದ್ರೆ ನಮಗೂ ಪ್ರಾಣವೇ, ಆದ್ರೆ ಆ ಪ್ರೀತಿ ಬೇರೆಯವರನ್ನ ಅವಮಾನ ಮಾಡೋ ಮಟ್ಟಕ್ಕೆ ಹೋಗಬಾರದು ಅಲ್ವಾ? ಬೆಂಗಳೂರು ಕನ್ನಡಿಗರು ಅಂದ್ರೆ ಅತಿಥಿ ಸತ್ಕಾರಕ್ಕೆ ಮತ್ತು ಶಾಂತ ಸ್ವಭಾವಕ್ಕೆ ಹೆಸರಾದವರು. ಆ ಹೆಸರು ಕ್ರೀಡಾ ಮೈದಾನದಲ್ಲೂ ಉಳಿಯಲಿ.

ಚೆನ್ನೈ ಅಭಿಮಾನಿಗಳಿಂದ ನಾವು ಕಲಿಯಬೇಕಿರೋದು ಒಂದೇ - "ಆಟವನ್ನ ಪ್ರೀತಿಸಿ, ಆಟಗಾರರನ್ನ ಗೌರವಿಸಿ." ಬರೀ ಕಿರುಚಾಟದಿಂದ ಅಥವಾ ಟ್ರೋಲ್ ಮಾಡೋದ್ರಿಂದ ಕಪ್ ಸಿಗಲ್ಲ, ಬದಲಿಗೆ ಅಭಿಮಾನಿಗಳ ಗೌರವ ಕೂಡ ಕಡಿಮೆಯಾಗುತ್ತೆ ಅಷ್ಟೇ. ಈ ಕೆಕೆಆರ್ ಅಭಿಮಾನಿ ಹೇಳಿರೋದು ನಿಜಾನಾ? ಅಥವಾ ಆರ್‌ಸಿಬಿ ಫ್ಯಾನ್ಸ್ ಅಂದ್ರೆ ಹೀಗೇನಾ? ಕಮೆಂಟ್ ಮಾಡಿ ತಿಳಿಸಿ.

Latest News