Mar 28, 2026 Languages : ಕನ್ನಡ | English

ಅಂಕಿ-ಅಂಶಗಳಲ್ಲಿ ಯಾರಿದ್ದಾರೆ ಬಲಿಷ್ಠ? ಆರ್​ಸಿಬಿ vs ಎಸ್‌ಆರ್‌ಹೆಚ್ ಹಳೇ ರೆಕಾರ್ಡ್ಸ್ ಇಲ್ಲಿದೆ ನೋಡಿ!!

ಕ್ರಿಕೆಟ್ ಪ್ರೇಮಿಗಳೇ! ಕಾಯುವಿಕೆ ಮುಗಿದಿದೆ. ಇವತ್ತಿನಿಂದ (ಮಾರ್ಚ್ 28) ಐಪಿಎಲ್ 19ನೇ ಸೀಸನ್ ಅಧಿಕೃತವಾಗಿ ಶುರುವಾಗ್ತಿದೆ. ಬೆಂಗಳೂರಿನ ನಮ್ಮ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಬಲಿಷ್ಠ ಸನ್​​ರೈಸರ್ಸ್ ಹೈದರಾಬಾದ್ (SRH) ಮುಖಾಮುಖಿಯಾಗುತ್ತಿವೆ.

ಐಪಿಎಲ್ 19ರ ಮೊದಲ ಸಂಘರ್ಷ
ಐಪಿಎಲ್ 19ರ ಮೊದಲ ಸಂಘರ್ಷ

ಒಂದೆಡೆ ವಿರಾಟ್ ಕೊಹ್ಲಿ ಅವರ ಆರ್​ಸಿಬಿ, ಇನ್ನೊಂದೆಡೆ ಹೊಡಿಬಡಿ ಆಟಗಾರರ ಹೈದರಾಬಾದ್ - ಈ ಎರಡು ಮದಗಜಗಳ ಕಾಳಗದಲ್ಲಿ ಗೆಲ್ಲೋದು ಯಾರು? ಅಂಕಿ-ಅಂಶಗಳು ಏನು ಹೇಳ್ತವೆ? ಇಲ್ಲಿದೆ ಕಂಪ್ಲೀಟ್ ಅನಾಲಿಸಿಸ್.

ಬ್ಯಾಟಿಂಗ್ ಅಬ್ಬರ: ಇಬ್ಬರೂ ಸಮಬಲ!

ಚಿನ್ನಸ್ವಾಮಿ ಸ್ಟೇಡಿಯಂ ಅಂದ್ರೆನೇ ಬ್ಯಾಟರ್‌ಗಳ ಸ್ವರ್ಗ. ಇವತ್ತು ಕೂಡ ರನ್ ಮಳೆ ಗ್ಯಾರಂಟಿ.

ಆರ್​ಸಿಬಿ ಶಕ್ತಿ: ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಓಪನಿಂಗ್‌ಗೆ ಬಂದ್ರೆ ಬೌಲರ್‌ಗಳಿಗೆ ಬೆವರಿಳಿಯೋದು ಪಕ್ಕಾ. ಇವರಿಗೆ ಸಾಥ್ ನೀಡಲು ರಜತ್ ಪಾಟಿದಾರ್, ಟಿಮ್ ಡೇವಿಡ್ ಮತ್ತು ಜಿತೇಶ್ ಶರ್ಮಾ ಅವರಂತಹ ಫಿನಿಶರ್‌ಗಳ ದಂಡೇ ಇದೆ.

ಎಸ್​ಆರ್​ಹೆಚ್ ಶಕ್ತಿ: ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಜೋಡಿ ಕಳೆದ ಸೀಸನ್‌ನಲ್ಲಿ ಎಂತಹ ರಾದ್ಧಾಂತ ಮಾಡಿತ್ತು ಅಂತ ನಮಗೆಲ್ಲಾ ಗೊತ್ತೇ ಇದೆ. ಇನ್ನು ಮಿಡಲ್ ಆರ್ಡರ್‌ನಲ್ಲಿ ಹೆನ್ರಿಕ್ ಕ್ಲಾಸೆನ್ ಮತ್ತು ಹೊಸದಾಗಿ ಸೇರ್ಪಡೆಯಾಗಿರೋ ಲಿಯಾಮ್ ಲಿವಿಂಗ್​ಸ್ಟೋನ್ ಪವರ್ ಕೂಡ ಸೇರಿಕೊಂಡಿದೆ.

ಬೌಲಿಂಗ್ ವಿಭಾಗ: ಇಬ್ಬರಿಗೂ ಇದೆ ತಲೆನೋವು!
ಬ್ಯಾಟಿಂಗ್ ವಿಷಯದಲ್ಲಿ ಇಬ್ಬರೂ ಸ್ಟ್ರಾಂಗ್ ಆಗಿದ್ರೂ, ಬೌಲಿಂಗ್ ವಿಷಯಕ್ಕೆ ಬಂದ್ರೆ ಎರಡು ಟೀಮ್‌ಗಳು ಸ್ವಲ್ಪ ವೀಕ್ ಅನಿಸ್ತಿವೆ.

ಆರ್​ಸಿಬಿಯಲ್ಲಿ ಭುವನೇಶ್ವರ್ ಕುಮಾರ್ ಬಿಟ್ಟರೆ ಎಕ್ಸ್ಪೀರಿಯನ್ಸ್ ಇರೋ ವೇಗಿಗಳ ಕೊರತೆ ಇದೆ. ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ ಅವರನ್ನೇ ನಂಬಿಕೊಂಡಿದೆ.

ಹೈದರಾಬಾದ್ ತಂಡದಲ್ಲಿ ಆರ್​ಸಿಬಿ ಮಾಜಿ ಬೌಲರ್ ಹರ್ಷಲ್ ಪಟೇಲ್ ಅವರೇ ಈಗ ಪ್ರಮುಖ ಅಸ್ತ್ರ. ಸ್ಪಿನ್ ಜವಾಬ್ದಾರಿ ಲಿವಿಂಗ್‌ಸ್ಟೋನ್ ಹೆಗಲೇರಿದೆ.

ಇಬ್ಬರು ಸ್ಟಾರ್ ಪ್ಲೇಯರ್ಸ್ ಮಿಸ್ಸಿಂಗ್!

ಇವತ್ತಿನ ಪಂದ್ಯದಲ್ಲಿ ಇಬ್ಬರು ಮೇನ್ ಬೌಲರ್‌ಗಳು ಇಲ್ಲದಿರೋದು ಆಯಾ ತಂಡಗಳಿಗೆ ದೊಡ್ಡ ಹೊಡೆತ.

ಜೋಶ್ ಹೇಝಲ್​ವುಡ್ (RCB): ಫಿಟ್ನೆಸ್ ಕಾರಣದಿಂದ ಮೊದಲ ಪಂದ್ಯದಿಂದ ಇವರು ಹೊರಗುಳಿದಿದ್ದಾರೆ. ಇದು ಆರ್​ಸಿಬಿ ಬೌಲಿಂಗ್ ಶಕ್ತಿಯನ್ನ ಕುಂದಿಸಿದೆ.

ಪ್ಯಾಟ್ ಕಮಿನ್ಸ್ (SRH): ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಕೂಡ ಫಿಟ್ನೆಸ್ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ತಂಡವನ್ನ ಮುನ್ನಡೆಸಲಿದ್ದಾರೆ.

ಮುಖಾಮುಖಿ ದಾಖಲೆ (Head to Head)

ಹಳೆಯ ರೆಕಾರ್ಡ್ಸ್ ನೋಡಿದ್ರೆ ಹೈದರಾಬಾದ್ ಸ್ವಲ್ಪ ಮುಂದೆ ಇದೆ. ಇಬ್ಬರೂ 26 ಬಾರಿ ಆಡಿದ್ದು, ಅದರಲ್ಲಿ ಹೈದರಾಬಾದ್ 13 ಗೆದ್ದಿದ್ರೆ, ಆರ್​ಸಿಬಿ 11 ರಲ್ಲಿ ಜಯ ಸಾಧಿಸಿದೆ. ಆದರೆ, ಇತ್ತೀಚಿನ 5 ಪಂದ್ಯಗಳನ್ನ ನೋಡಿದ್ರೆ ಆರ್​ಸಿಬಿ 3 ಬಾರಿ ಗೆದ್ದು ಮೇಲುಗೈ ಸಾಧಿಸಿದೆ.

ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇವರಿಬ್ಬರು 8 ಬಾರಿ ಎದುರಾಗಿದ್ದಾರೆ. ಅದರಲ್ಲಿ ನಮ್ಮ ಆರ್​ಸಿಬಿ 5 ಬಾರಿ ಗೆದ್ದಿದೆ. ಅಂದ್ರೆ ತವರು ಮೈದಾನದಲ್ಲಿ ಆರ್​ಸಿಬಿಗೆ ಲಕ್ ಸ್ವಲ್ಪ ಜಾಸ್ತಿನೇ ಇದೆ!

ಎಲ್ಲಾ ಲೆಕ್ಕಾಚಾರಗಳನ್ನು ನೋಡಿದ್ರೆ ಇಂದಿನ ಪಂದ್ಯಕ್ಕೆ ಆರ್​ಸಿಬಿ ಫೇವರೆಟ್ ಅನ್ನಿಸ್ತಿದೆ. ಆದರೆ ಹೈದರಾಬಾದ್‌ನ ಬಿರುಸಿನ ಬ್ಯಾಟಿಂಗ್ ಅನ್ನ ಕಡೆಗಣಿಸುವಂತಿಲ್ಲ. ಇವತ್ತು ರಾತ್ರಿ ಚಿನ್ನಸ್ವಾಮಿಯಲ್ಲಿ ಕೆಂಪು ಬಣ್ಣದ ಹವಾ ಇರುತ್ತಾ ಅಥವಾ ಆರೆಂಜ್ ಆರ್ಮಿ ಮಿಂಚುತ್ತಾ ಅಂತ ಕಾದು ನೋಡೋಣ!

Latest News