ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈದರಾಬಾದ್ ವಿರುದ್ಧ RCB ಕಾದಾಟ: ಗೆಲುವಿನ ಲೆಕ್ಕಾಚಾರ ಬದಲಿಸುತ್ತಾ ಹೊಸ ರೂಲ್ಸ್?

ಕ್ರಿಕೆಟ್ ಪ್ರೇಮಿಗಳೇ ರೆಡಿಯಾಗಿ! ಐಪಿಎಲ್ 19ನೇ ಸೀಸನ್ ಶುರುವಾಗೋಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮೊದಲ ಪಂದ್ಯದಲ್ಲೇ ನಮ್ಮ ಆರ್​ಸಿಬಿ (RCB) ಮತ್ತು ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿವೆ. ಈ ಬಾರಿ ಬರೀ ಸಿಕ್ಸರ್, ಫೋರ್‌ಗಳ ಅಬ್ಬರ ಅಷ್ಟೇ ಅಲ್ಲ, ಮೈದಾನದಲ್ಲಿ ಬಿಸಿಸಿಐ (BCCI) ತಂದಿರೋ ಹೊಸ ರೂಲ್ಸ್‌ಗಳದ್ದೇ ಹವಾ ಜೋರಾಗಿರಲಿದೆ.

ಆರ್​ಸಿಬಿ ಫ್ಯಾನ್ಸ್ ಗಮನಿಸಿ: ಮೊದಲ ಪಂದ್ಯಕ್ಕೂ ಮುನ್ನವೇ ಮೈದಾನದಲ್ಲಿ ಬದಲಾದವು ನಿಯಮಗಳು!
ಆರ್​ಸಿಬಿ ಫ್ಯಾನ್ಸ್ ಗಮನಿಸಿ: ಮೊದಲ ಪಂದ್ಯಕ್ಕೂ ಮುನ್ನವೇ ಮೈದಾನದಲ್ಲಿ ಬದಲಾದವು ನಿಯಮಗಳು!

ಯಾವಾಗ್ಲೂ ಒಂದಲ್ಲ ಒಂದು ಹೊಸತನ ತರೋ ಐಪಿಎಲ್, ಈ ಬಾರಿ ಆಟಗಾರರ ಶಿಸ್ತು ಮತ್ತು ಮೈದಾನದ ಮ್ಯಾನೇಜ್‌ಮೆಂಟ್‌ಗೆ ಫುಲ್ ಸ್ಟ್ರಿಕ್ಟ್ ಆಗಿದೆ. ಆ ಹೊಸ ನಿಯಮಗಳು ಏನೇನು ಅಂತ ಸಿಂಪಲ್ ಆಗಿ ನೋಡಿಬಿಡೋಣ:

ಈ ಬಾರಿ ಆಟಗಾರರು ಮನಬಂದಂತೆ ಅಭ್ಯಾಸ ಮಾಡೋ ಹಾಗಿಲ್ಲ. ಪಂದ್ಯ ನಡೆಯುವ ದಿನ ಮೈದಾನದಲ್ಲಿ ಯಾವುದೇ ವಾರ್ಮ್-ಅಪ್ ಅಥವಾ ಎಕ್ಸ್ಟ್ರಾ ಪ್ರಾಕ್ಟೀಸ್‌ಗೆ ಅವಕಾಶವಿಲ್ಲ. ಇನ್ನು ನೆಟ್ಸ್ ಅಭ್ಯಾಸದ ವಿಷಯಕ್ಕೆ ಬಂದ್ರೆ, ಪ್ರತಿ ತಂಡಕ್ಕೂ ಎರಡೇ ಎರಡು ನೆಟ್ಸ್ ಕೊಡಲಾಗುತ್ತೆ. ಒಂದು ತಂಡದ ಕೆಲಸ ಮುಗಿತು ಅಂದ್ಕೊಳ್ಳಿ, ಆಗ ಆ ನೆಟ್ಸ್ ಅನ್ನು ಇನ್ನೊಂದು ತಂಡ ಬಳಸೋ ಹಾಗಿಲ್ಲ. ಅಷ್ಟೇ ಅಲ್ಲ, ಹೋಮ್ ಗ್ರೌಂಡ್‌ನಲ್ಲಿ ಮ್ಯಾಚ್ ಇರೋ ನಾಲ್ಕು ದಿನ ಮುಂಚೆ ಮುಖ್ಯ ಪಿಚ್ ಮೇಲೆ ಪ್ರಾಕ್ಟೀಸ್ ಮಾಡೋದನ್ನ ನಿಷೇಧಿಸಲಾಗಿದೆ. ಅಂದ್ರೆ ಮೈದಾನವನ್ನ ಫ್ರೆಶ್ ಆಗಿ ಇಡೋದು ಬಿಸಿಸಿಐ ಪ್ಲಾನ್!

ಫ್ಯಾಮಿಲಿ ಮೆಂಬರ್ಸ್‌ಗೆ ನೋ ಎಂಟ್ರಿ!

ಇದು ಸ್ವಲ್ಪ ಬೇಸರದ ವಿಷಯ ಅನಿಸಬಹುದು, ಆದ್ರೆ ಶಿಸ್ತಿನ ದೃಷ್ಟಿಯಿಂದ ಬಿಸಿಸಿಐ ಈ ಹೆಜ್ಜೆ ಇಟ್ಟಿದೆ. ಆಟಗಾರರು ಕಡ್ಡಾಯವಾಗಿ ತಂಡದ ಬಸ್ಸಿನಲ್ಲೇ ಓಡಾಡಬೇಕು, ಖಾಸಗಿ ಕಾರುಗಳನ್ನ ಬಳಸೋ ಹಾಗಿಲ್ಲ. ಈ ಬಸ್ಸಿನಲ್ಲಿ ಆಟಗಾರರ ಕುಟುಂಬದವರು ಅಥವಾ ಫ್ರೆಂಡ್ಸ್‌ಗೆ ಜಾಗವಿಲ್ಲ. ಅಷ್ಟೇ ಅಲ್ಲ, ಅಭ್ಯಾಸದ ವೇಳೆ ಮೈದಾನದ ಒಳಗೆ ಫ್ಯಾಮಿಲಿ ಮೆಂಬರ್ಸ್ ಬರೋ ಹಾಗಿಲ್ಲ.

ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು 'ಸ್ಟೈಲ್' ಮಾಡೋ ಹಾಗಿಲ್ಲ. ಅಂದ್ರೆ ಸ್ಲೀವ್‌ಲೆಸ್ ಜೆರ್ಸಿ ಅಥವಾ ದೊಡ್ಡ ಫ್ಲಾಪಿ ಹ್ಯಾಟ್ ಹಾಕಿಕೊಂಡು ಅವಾರ್ಡ್ ತಗೊಳ್ಳೋ ಹಾಗಿಲ್ಲ. ಇನ್ನು ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಇರೋ ಆಟಗಾರರು ಫೀಲ್ಡಿಂಗ್ ಮಾಡುವಾಗ ಕಡ್ಡಾಯವಾಗಿ ಆ ಕ್ಯಾಪ್ ಹಾಕಿಕೊಳ್ಳಲೇಬೇಕು.

ಆಟದ ನಡುವಿನ ಬದಲಾವಣೆಗಳು

ಬಾಲ್ ಚೇಂಜ್: ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ (Dew) ಜಾಸ್ತಿಯಾಗಿ ಬೌಲರ್‌ಗಳಿಗೆ ಕಷ್ಟವಾದ್ರೆ, 10 ಓವರ್‌ಗಳ ನಂತರ ಬಾಲ್ ಬದಲಾಯಿಸಲು ಬೌಲಿಂಗ್ ಟೀಮ್ ರಿಕ್ವೆಸ್ಟ್ ಮಾಡಬಹುದು.

ಸ್ಮಾರ್ಟ್ ರಿಪ್ಲೇ: ಈಗ ಅಂಪೈರ್‌ಗಳು ಇನ್ನು ಚುರುಕಾಗಲಿದ್ದಾರೆ. ಎಂಟು ಹೈ-ಸ್ಪೀಡ್ ಕ್ಯಾಮೆರಾಗಳು ಸ್ಟಂಪಿಂಗ್ ಮತ್ತು ರನ್ ಔಟ್ ನಿರ್ಧಾರಗಳನ್ನ ಕ್ಷಣಾರ್ಧದಲ್ಲಿ ಕೊಡಲಿವೆ.

ಕ್ಯಾಚ್ ರೂಲ್: ಇದು ಸ್ವಲ್ಪ ವಿಭಿನ್ನವಾಗಿದೆ. ಆಟಗಾರ ಕ್ಯಾಚ್ ಹಿಡಿದ ತಕ್ಷಣ ಕುಣಿದು ಕುಪ್ಪಳಿಸುವಂತಿಲ್ಲ. ಬಾಲ್ ಮೇಲೆ ಫುಲ್ ಕಂಟ್ರೋಲ್ ಸಿಕ್ಕ ಮೇಲೆ ಸಂಭ್ರಮಿಸಬೇಕು, ಇಲ್ಲದಿದ್ರೆ ಅದು ಔಟ್ ಅಂತ ಪರಿಗಣಿಸಲ್ಲ!

ಹಳೇ ರೂಲ್ಸ್ ಮುಂದುವರಿಕೆ

ಇಷ್ಟೆಲ್ಲಾ ಹೊಸ ನಿಯಮಗಳ ನಡುವೆ, ಇಂಪ್ಯಾಕ್ಟ್ ಪ್ಲೇಯರ್ ರೂಲ್ 2027 ರವರೆಗೆ ಇರುತ್ತೆ. ಹಾಗೆಯೇ ಒಂದು ಓವರ್‌ನಲ್ಲಿ ಎರಡು ಬೌನ್ಸರ್ ಹಾಕೋ ಅವಕಾಶ ಬೌಲರ್‌ಗಳಿಗೆ ಈ ಬಾರಿಯೂ ಇರಲಿದೆ.

ಈ ಬಾರಿ ಐಪಿಎಲ್ ಬರೀ ಎಂಟರ್ಟೈನ್‌ಮೆಂಟ್ ಮಾತ್ರವಲ್ಲ, ಫುಲ್ ಡಿಸಿಪ್ಲಿನ್ ಇರೋ ಟೂರ್ನಿ ಆಗಲಿದೆ. ಒಂದು ವೇಳೆ ಈ ರೂಲ್ಸ್ ಮೀರಿದ್ರೆ ದಂಡ ಫಿಕ್ಸ್ ಅಂತ ಬಿಸಿಸಿಐ ಎಚ್ಚರಿಕೆ ಕೊಟ್ಟಿದೆ. ಈ ಬಾರಿ ನಿಮ್ಮ ಬೆಂಬಲ ಯಾವ ತಂಡಕ್ಕೆ?

Latest News