May 1, 2026 Languages : ಕನ್ನಡ | English

ತಿರುಪತಿ ಭಕ್ತರಿಗೆ ಟಿಟಿಡಿ ನೀಡಿದ 3 ಭರ್ಜರಿ ಸಿಹಿ ಸುದ್ದಿಗಳು - ಈಗ ತಿಮ್ಮಪ್ಪನ ದರ್ಶನ ಇನ್ನಷ್ಟು ಸುಲಭ!!

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಒಂದಲ್ಲ ಎರಡಲ್ಲ, ಮೂರು ಭರ್ಜರಿ ಸಿಹಿ ಸುದ್ದಿಗಳನ್ನು ನೀಡಿದೆ. ಲಗೇಜ್ ನಿರ್ವಹಣೆ, ಪಾದಚಾರಿಗಳ ಸೌಲಭ್ಯ ಮತ್ತು ಪ್ರಸಾದದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಟಿಟಿಡಿ ಕೈಗೊಂಡಿರುವ ಪ್ರಮುಖ ನಿರ್ಧಾರಗಳು ಇಲ್ಲವೆ.

ತಿರುಮಲ ಲಡ್ಡು ಪ್ರಸಾದಕ್ಕೆ ಈಗ ಹೈಟೆಕ್ ಕಾವಲು
ತಿರುಮಲ ಲಡ್ಡು ಪ್ರಸಾದಕ್ಕೆ ಈಗ ಹೈಟೆಕ್ ಕಾವಲು

1. 24 ಗಂಟೆಯೂ ಲಗೇಜ್ ಕೌಂಟರ್ ಸೇವೆ
ತಿರುಮಲಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಈಗ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ದಿನದ 24 ಗಂಟೆಯೂ ತೆರೆದಿಡಲು ನಿರ್ಧರಿಸಲಾಗಿದೆ.

ಈ ಕೇಂದ್ರಗಳಲ್ಲಿ ಸುಮಾರು 394 ಸಿಬ್ಬಂದಿ ಮೂರು ಪಾಳಿಗಳಲ್ಲಿ (Shifts) ನಿರಂತರವಾಗಿ ಕೆಲಸ ಮಾಡಲಿದ್ದಾರೆ.

ರಜಾ ದಿನಗಳು ಮತ್ತು ಹಬ್ಬದ ಸಮಯದಲ್ಲಿ ಉಂಟಾಗುವ ವಿಪರೀತ ದಟ್ಟಣೆಯನ್ನು ನಿಯಂತ್ರಿಸಲು ಈ ಕ್ರಮ ಸಹಕಾರಿಯಾಗಲಿದೆ.

2. ಪಾದಚಾರಿ ಭಕ್ತರಿಗೆ ವಿಶೇಷ ವ್ಯವಸ್ಥೆ
ಅಲಿಪಿರಿ ಮತ್ತು ಶ್ರೀವರಿ ಮೆಟ್ಟು ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಭಕ್ತರಿಗೆ ಲಗೇಜ್ ಹೊರಲಾರದ ಹೊರೆಯಾಗಬಾರದು ಎಂದು ವಿಶೇಷ ವ್ಯವಸ್ಥೆ ಮಾಡಲಾಗಿದೆ:

ಅಲಿಪಿರಿ ಮಾರ್ಗ: ಇಲ್ಲಿ 7 ಕೌಂಟರ್‌ಗಳಿದ್ದು, 46 ಸಿಬ್ಬಂದಿ ಇರುತ್ತಾರೆ.

ಶ್ರೀವರಿ ಮೆಟ್ಟು ಮಾರ್ಗ: ಇಲ್ಲಿ 2 ಕೌಂಟರ್‌ಗಳಿದ್ದು, 10 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.

ಭಕ್ತರು ಬೆಟ್ಟದ ಕೆಳಭಾಗದಲ್ಲಿ ತಮ್ಮ ಲಗೇಜ್‌ಗಳನ್ನು ನೀಡಿ, ಬೆಟ್ಟ ಹತ್ತಿದ ನಂತರ ತಿರುಮಲದ ನಿಗದಿತ ವಿತರಣಾ ಕೇಂದ್ರಗಳಲ್ಲಿ ಅವುಗಳನ್ನು ಸುಲಭವಾಗಿ ಮರಳಿ ಪಡೆಯಬಹುದು.

3. ತಿರುಮಲದ ಪ್ರಮುಖ ಸ್ಥಳಗಳಲ್ಲಿ ಕೌಂಟರ್ ವಿಸ್ತರಣೆ
ದರ್ಶನಕ್ಕೆ ಹೋಗುವ ಮುನ್ನ ಭಕ್ತರು ತಮ್ಮ ಸಾಮಾನುಗಳನ್ನು ಸುರಕ್ಷಿತವಾಗಿ ಇರಿಸಲು ತಿರುಮಲದಾದ್ಯಂತ ಕೌಂಟರ್‌ಗಳನ್ನು ಹೆಚ್ಚಿಸಲಾಗಿದೆ:

ಉಚಿತ ಸಭಾಂಗಣದಲ್ಲಿ 10, ನಾರಾಯಣಗಿರಿ ಶೆಡ್‌ನಲ್ಲಿ 8 ಮತ್ತು 300 ರೂ. ದರ್ಶನ ಟಿಕೆಟ್ ಹಾಲ್‌ನಲ್ಲಿ 5 ಕೌಂಟರ್‌ಗಳನ್ನು ತೆರೆಯಲಾಗಿದೆ.

ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮತ್ತು ಕಲ್ಯಾಣ ಕಟ್ಟಾ ಪ್ರದೇಶಗಳಲ್ಲೂ ಈ ಸೌಲಭ್ಯ ಲಭ್ಯವಿದೆ.

4. ಲಡ್ಡು ಪ್ರಸಾದದ ಗುಣಮಟ್ಟಕ್ಕೆ ಅತ್ಯಾಧುನಿಕ ಲ್ಯಾಬ್
ಇತ್ತೀಚಿನ ವಿವಾದಗಳ ಬೆನ್ನಲ್ಲೇ ಲಡ್ಡು ಪ್ರಸಾದದ ಪವಿತ್ರತೆ ಕಾಪಾಡಲು ಟಿಟಿಡಿ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಕೇಂದ್ರ ಸರ್ಕಾರದ ನೆರವಿನೊಂದಿಗೆ ತಿರುಮಲದಲ್ಲಿ ಅತ್ಯಾಧುನಿಕ ‘ಎಫ್‌ಎಸ್‌ಎಸ್‌ಎಐ’ (FSSAI) ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ.

ಈ ತಿಂಗಳ ಮಾರ್ಚ್ 21 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಲ್ಯಾಬ್ ಅನ್ನು ಉದ್ಘಾಟಿಸಲಿದ್ದಾರೆ.

ಇದರಿಂದ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪ ಸೇರಿದಂತೆ ಎಲ್ಲಾ ಪದಾರ್ಥಗಳ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷಿಸಿ, ಭಕ್ತರಿಗೆ ಕಲಬೆರಕೆ ರಹಿತ ಪ್ರಸಾದ ಸಿಗುವಂತೆ ನೋಡಿಕೊಳ್ಳಲಾಗುವುದು.

ತಿರುಪತಿ ಯಾತ್ರೆಯನ್ನು ಮತ್ತಷ್ಟು ಸುಗಮ ಮತ್ತು ಸುರಕ್ಷಿತವಾಗಿಸಲು ಟಿಟಿಡಿ ಈ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

Latest News