ಆಂಧ್ರಪ್ರದೇಶದ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಇದೀಗ ಮಹತ್ವದ ಮಾಹಿತಿಯೊಂದು ಹೊರ ಬಿದ್ದಿದೆ. ದೇವರ ದರ್ಶನ ಟಿಕೆಟ್ ವ್ಯವಸ್ಥೆಯಲ್ಲಿ ದೇವಸ್ಥಾನ ಆಡಳಿತ ದೊಡ್ಡ ಬದಲಾವಣೆ ಜಾರಿಗೆ ತಂದಿದೆ ನೋಡಿ. ಹೌದು ಪ್ರತಿದಿನ ಸಾವಿರಾರು ಭಕ್ತರು ತಿರುಪತಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ದೇವರ ದರ್ಶನ ಪಡೆಯುತ್ತಾರೆ. ಇದುವರೆಗೆ ದರ್ಶನಕ್ಕಾಗಿ ಟಿಕೆಟ್‌ಗಳನ್ನು ಆನ್‌ಲೈನ್ ಜೊತೆಗೆ ತಿರುಮಲದಲ್ಲಿರುವ ಕೌಂಟರ್‌ಗಳಲ್ಲೂ ನೀಡಲಾಗುತ್ತಿತ್ತು. ಆದರೆ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಫ್‌ಲೈನ್ ಟಿಕೆಟ್ ಮಾರಾಟವನ್ನು ಇದೀಗ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆಯಂತೆ.
ಹೌದು ಇಂದಿನಿಂದ ತಿರುಮಲದಲ್ಲಿ ನೇರವಾಗಿ ನೀಡಲಾಗುತ್ತಿದ್ದ ದಿನಕ್ಕೆ 800 ಆಫ್‌ಲೈನ್ ಟಿಕೆಟ್‌ಗಳ ಕೌಂಟರ್ ಬಂದ್ ಮಾಡಲಾಗಿದೆ. ದರ್ಶನ ಟಿಕೆಟ್‌ಗಳು ಇನ್ನು ಮುಂದೆ ಕೇವಲ ಆನ್‌ಲೈನ್ ಮೂಲಕವೇ ಲಭ್ಯವಿರಲಿವೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದೀಗ ಭಕ್ತರು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದ ಭಕ್ತರಿಗೆ ಅದೇ ದಿನ ಸಂಜೆ 4 ಗಂಟೆಗೆ ದರ್ಶನ ಮಾಡುವ ಅವಕಾಶ ನೀಡಲಾಗುತ್ತದೆ. ಇದರೊಂದಿಗೆ ಶ್ರೀವಾಣಿ ಟ್ರಸ್ಟ್‌ನ ವಿಐಪಿ ದರ್ಶನ ಟಿಕೆಟ್ ಪಡೆಯುವ ವಿಧಾನದಲ್ಲೂ ಬದಲಾವಣೆ ಮಾಡಲಾಗಿದೆ.
ವಿಐಪಿ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಸುಗಮಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಭಕ್ತರಿಗೆ ಸಂತಸದ ಸುದ್ದಿಯೆಂದರೆ ಉಚಿತ ದರ್ಶನವನ್ನು ಜನವರಿ 2ರಿಂದಲೇ ಪುನರಾರಂಭ ಮಾಡಲಾಗಿದೆ. ಸಾಮಾನ್ಯ ಭಕ್ತರು ಈ ಸೇವೆಯನ್ನು ಮತ್ತೆ ಪಡೆಯಬಹುದಾಗಿದೆ. ಈ ಹೊಸ ದರ್ಶನ ಟಿಕೆಟ್ ವ್ಯವಸ್ಥೆಯನ್ನು ಒಂದು ತಿಂಗಳ ಪ್ರಾಯೋಗಿಕ ಅವಧಿಗೆ ಜಾರಿಗೊಳಿಸಲಾಗಿದೆ. ಭಕ್ತರ ಪ್ರತಿಕ್ರಿಯೆಗಳ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ. ಭಕ್ತರು ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ದರ್ಶನಕ್ಕೆ ಯೋಜನೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು.