May 4, 2026 Languages : ಕನ್ನಡ | English

ತ್ರಿಷಾ ಹುಟ್ಟುಹಬ್ಬಕ್ಕೆ ವಿಜಯ್ ಮನೆಯಲ್ಲಿ ಭರ್ಜರಿ ತಯಾರಿ? ಪನೈಯೂರ್‌ನಲ್ಲಿ ಹೂವಿನ ಘಮಲು, ಫ್ಯಾನ್ಸ್‌ನಲ್ಲಿ ಕುತೂಹಲ!!

ತಮಿಳು ಸಿನಿಮಾದ ಬಾಕ್ಸ್ ಆಫೀಸ್ ಕಿಂಗ್ ದಳಪತಿ ವಿಜಯ್ ಮನೆಯಲ್ಲಿ ಇವತ್ತು ಫುಲ್ ಹಬ್ಬದ ಅಟ್ಮಾಸ್ಪಿಯರ್! ಚೆನ್ನೈನ ಪನೈಯೂರ್‌ನಲ್ಲಿರೋ ಅವರ ಮನೆ ಮದುವೆ ಮಂಟಪದ ತರಹ ಸಿಂಗಾರಗೊಂಡಿದೆ. ಗೇಟ್ ಮುಂದೆ ಸಾಲು ಸಾಲು ಹೂವಿನ ಹಾರಗಳು, ಡೆಕೋರೇಷನ್ ಐಟಂಗಳು ಬರ್ತಿರೋದು ನೋಡಿದ್ರೆ, ಇವತ್ತು ವಿಜಯ್ ಮನೆಯಲ್ಲಿ ಏನೋ ದೊಡ್ಡ ಫಂಕ್ಷನ್ ನಡೆಯೋದು ಪಕ್ಕಾ ಅನಿಸ್ತಿದೆ.

ವಿಜಯ್ ನಿವಾಸ ಮದುವೆ ಮಂಟಪದಂತೆ ಶೃಂಗಾರ | Photo Credit: www.amazon.in/Thalapathy-Vijay-Poster-Wall-Sticker
ವಿಜಯ್ ನಿವಾಸ ಮದುವೆ ಮಂಟಪದಂತೆ ಶೃಂಗಾರ | Photo Credit: www.amazon.in/Thalapathy-Vijay-Poster-Wall-Sticker

ವಿಜಯ್ ಮನೆಯಲ್ಲಿ ಪುಟ್ಟ ಆಚರಣೆ ಅಂದ್ರೂ ಸಾಕು, ಸಾವಿರಾರು ಫ್ಯಾನ್ಸ್ ಅಲ್ಲಿ ಗುಂಪು ಸೇರೋದು ಮಾಮೂಲಿ. ಇವತ್ತು ನಡೀತಿರೋ ಈ ಗ್ರಾಂಡ್ ತಯಾರಿ ನೋಡಿ ಅಭಿಮಾನಿಗಳು ಮುಗಿಬೀಳಬಹುದು ಅನ್ನೋ ಭಯ ಇದೆ. ಅದಕ್ಕೆ ಯಾವುದೇ ಗಲಾಟೆ ಆಗಬಾರದು ಅಂತ ಪೊಲೀಸ್ ಇಲಾಖೆ ಈಗಲೇ ಫುಲ್ ಅಲರ್ಟ್ ಆಗಿದೆ. ವಿಜಯ್ ಮನೆ ಸುತ್ತ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಭದ್ರತೆ ಮಾಡಿದ್ದಾರೆ.

ಸಂಭ್ರಮಕ್ಕೆ ಕಾರಣವೇನು? ಇಲ್ಲಿವೆ ನೋಡಿ 3 ಗೆಸ್ಸಿಂಗ್‌ಗಳು!

ವಿಜಯ್ ಮನೆ ಯಾಕೆ ಇಷ್ಟೊಂದು ಕಲರ್‌ಫುಲ್ ಆಗಿ ರೆಡಿ ಆಗ್ತಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ನಡೀತಿದೆ. ಫ್ಯಾನ್ಸ್ ಪ್ರಕಾರ ಇದಕ್ಕೆ ಮೇನ್ ಆಗಿ ಈ ಮೂರು ಕಾರಣಗಳಿರಬಹುದು:

ತ್ರಿಶಾ ಹುಟ್ಟುಹಬ್ಬದ ಸಂಭ್ರಮ: ಇವತ್ತು ನಟಿ ತ್ರಿಶಾ ಅವರ 43ನೇ ಹುಟ್ಟುಹಬ್ಬ. ಈಗಾಗಲೇ ವಿಜಯ್ ಮತ್ತು ತ್ರಿಶಾ ಮದುವೆ ಆಗ್ತಾರೆ ಅನ್ನೋ ರೂಮರ್ಸ್ ಜೋರಾಗಿದೆ. ತ್ರಿಶಾ ಹುಟ್ಟುಹಬ್ಬದ ನಿಮಿತ್ತ ವಿಜಯ್ ಮನೆಯಲ್ಲಿ ಏನಾದರೂ ಸ್ಪೆಷಲ್ ಪಾರ್ಟಿ ಆಯೋಜಿಸಿದ್ದಾರಾ ಅನ್ನೋದು ಒಂದು ದೊಡ್ಡ ಸಸ್ಪೆನ್ಸ್.

ರಾಜಕೀಯ ಗೆಲುವಿನ ಕುತೂಹಲ: ಇಂದು ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಬರ್ತಿದೆ. ವಿಜಯ್ ಅವರ 'ಟಿವಿಕೆ' ಪಕ್ಷ ಆರಂಭಿಕ ಟ್ರೆಂಡ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡ್ತಿರೋದ್ರಿಂದ, ಈ ವಿಜಯದ ಸಂಭ್ರಮಕ್ಕೆ ತಯಾರಿ ನಡೀತಿದೆ ಅನ್ನೋದು ಇನ್ನೊಂದು ಲೆಕ್ಕಾಚಾರ.

ಫ್ಯಾನ್ಸ್ ಜೊತೆ ಮೀಟಿಂಗ್: ಚುನಾವಣೆಯಲ್ಲಿ ಗೆದ್ದ ಮೇಲೆ ಅಥವಾ ಜನ್ಮದಿನದ ಅಂಗವಾಗಿ ವಿಜಯ್ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡೋ ಪ್ಲಾನ್ ಇಟ್ಕೊಂಡಿರಬಹುದು. ಅದಕ್ಕಾಗಿಯೇ ಇಷ್ಟೆಲ್ಲಾ ಡೆಕೋರೇಷನ್ ಮತ್ತು ಸೆಕ್ಯೂರಿಟಿ ಅಂತನೂ ಮಾತುಗಳು ಕೇಳಿಬರ್ತಿವೆ.

ಕುತೂಹಲದ ಕಡಲಲ್ಲಿ ಅಭಿಮಾನಿಗಳು!

ವಿಜಯ್ ಅವರ ಮನೆ ಮುಂದೆ ಗಾಡಿಗಳಲ್ಲಿ ಹೂವು ಬರುತ್ತಿರೋ ವಿಡಿಯೋಗಳು ಈಗ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗ್ತಿವೆ. "ಇವತ್ತು ನಮ್ಮ ದಳಪತಿ ಮದುವೆ ಅನೌನ್ಸ್ ಮಾಡ್ತಾರಾ?" ಅಂತ ಕೆಲವರು ಕೇಳ್ತಿದ್ರೆ, ಇನ್ನು ಕೆಲವರು "ಇದು ರಾಜಕೀಯ ಜಯಭೇರಿಯ ಸಂಭ್ರಮ" ಅಂತಿದ್ದಾರೆ.

ವಿಜಯ್ ಸೈಲೆಂಟ್ ಆಗಿದ್ರೂ ಅವರ ಸುತ್ತಲಿನ ಸುದ್ದಿಗಳು ಮಾತ್ರ ಯಾವಾಗಲೂ ವೈಲೆಂಟ್ ಆಗಿರ್ತವೆ. ಇವತ್ತಿನ ಈ ಹೂವು ಮತ್ತು ಹಸಿರಿನ ಅಲಂಕಾರದ ಹಿಂದೆ ಇರೋ ನಿಜವಾದ ಕಥೆ ಏನು ಅನ್ನೋದು ಸಂಜೆ ಹೊತ್ತಿಗೆ ಹೊರಬೀಳಲಿದೆ. ಅಲ್ಲಿಯವರೆಗೂ ದಳಪತಿ ಫ್ಯಾನ್ಸ್ ಮಾತ್ರ ವಿಜಯ್ ಮನೆ ಮುಂದೆ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಇರೋದಂತೂ ಗ್ಯಾರಂಟಿ!

Latest News