Dec 16, 2025 Languages : ಕನ್ನಡ | English

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ನಿಧನ : ರಾಜಕೀಯ, ಶಿಕ್ಷಣ ಮತ್ತು ಸಮಾಜ ಸೇವೆಯ ದಿಗ್ಗಜ

ಹಿರಿಯ ಕಾಂಗ್ರೆಸ್ ನಾಯಕ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು 95ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ, ಡಿಸೆಂಬರ್ 14, 2025ರಂದು ನಿಧನರಾದರು.  ಶಾಮನೂರು ಶಿವಶಂಕರಪ್ಪ ಅವರು 1931ರ ಜೂನ್ 16ರಂದು ಶಾಮನೂರು ಕಲ್ಲಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಅವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದು, 95ನೇ ವಯಸ್ಸಿನಲ್ಲೂ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಏಕೈಕ ರಾಜಕಾರಣಿಯಾಗಿದ್ದಾರೆ.

95ನೇ ವಯಸ್ಸಿನಲ್ಲೂ ಶಾಸಕರಾದ ಶಾಮನೂರು ಶಿವಶಂಕರಪ್ಪ – ದಾವಣಗೆರೆ ಧಣಿ ಜೀವನ ಪಯಣ
95ನೇ ವಯಸ್ಸಿನಲ್ಲೂ ಶಾಸಕರಾದ ಶಾಮನೂರು ಶಿವಶಂಕರಪ್ಪ – ದಾವಣಗೆರೆ ಧಣಿ ಜೀವನ ಪಯಣ

ವ್ಯಕ್ತಿಗತ ಜೀವನ

  • ಜನನ: 1931ರ ಜೂನ್ 16ರಂದು, ಶಾಮನೂರು ಕಲ್ಲಪ್ಪ ಮತ್ತು ಸಾವಿತ್ರಮ್ಮ ದಂಪತಿಗಳ ಪುತ್ರ.
  • ಕುಟುಂಬ: ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳೊಂದಿಗೆ ದೊಡ್ಡ ಕುಟುಂಬ.
  • ಪುತ್ರರು: ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ, ಕೈಗಾರಿಕೋದ್ಯಮಿ ಎಸ್.ಎಸ್‌. ಬಕ್ಕೇಶ್, ಎಸ್.ಎಸ್‌. ಗಣೇಶ್
  • ಪುತ್ರಿಯರು: ಡಾ. ಮಂಜುಳಾ ಶಿವಶಂಕರ್, ಸುಧಾ ರಾಜೇಂದ್ರ ಪಾಟೀಲ್, ಡಾ. ಶೈಲಜಾ ಭಟ್ಟಾಚಾರ್ಯ, ಮೀನಾ ಡಾ. ಶರಣ ಪಾಟೀಲ್
  • ಸೊಸೆ: ಸಂಸದೆಯಾಗಿರುವ ಪ್ರಭಾ ಮಲ್ಲಿಕಾರ್ಜುನ
  • ಪತ್ನಿ: ಪಾರ್ವತಮ್ಮ, 2007ರ ನವೆಂಬರ್ 29ರಂದು ಅನಾರೋಗ್ಯದಿಂದ ನಿಧನ.

ರಾಜಕೀಯ ಜೀವನ

  • 1970: ಅವಿಭಜಿತ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ ನಗರಸಭೆ ಸದಸ್ಯರು, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜಕೀಯಕ್ಕೆ ಪಾದಾರ್ಪಣೆ.
  • 1980: ದೇವರಾಜ ಅರಸು ಕಾಂಗ್ರೆಸ್ ಸೇರ್ಪಡೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು.
  • 1994: ಮೊದಲ ಬಾರಿಗೆ ದಾವಣಗೆರೆ ಕ್ಷೇತ್ರದ ಶಾಸಕರಾಗಿ ಆಯ್ಕೆ.

ಆಯ್ಕೆಗಳು

  • 1994, 2004 – ದಾವಣಗೆರೆ ಕ್ಷೇತ್ರದ ಶಾಸಕರು
  • 2008, 2013, 2018, 2023 – ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರು
  • 1997 – ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ
  • 1999 – ಲೋಕಸಭಾ ಚುನಾವಣೆಯಲ್ಲಿ ಸೋಲು

ಸೇವೆಗಳು

  • 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ತೋಟಗಾರಿಕೆ, ಎಪಿಎಂಸಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು
  • ಕೆಪಿಸಿಸಿ ಖಾಯಂ ಖಜಾಂಚಿ

ಸಮಾಜ ಸೇವೆ ಮತ್ತು ನಾಯಕತ್ವ

  • ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ.
  • ಪದವಿಗಳು: ಅಜಾತ ಶತ್ರು, ದಾವಣಗೆರೆ ಧಣಿ, ಶಿಕ್ಷಣ ಪ್ರೇಮಿ, ಜನಾನುರಾಗಿ ಉದ್ಯಮಿ, ಕೊಡಗೈ ದಾನಿ.
  • ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು.
  • ಸಂದೇಶ: “ರಾಜಕೀಯವೇ ಬೇರೆ, ಸ್ನೇಹ-ಸಂಬಂಧಗಳೇ ಬೇರೆ” ಎಂಬ ತತ್ವದ ಮೂಲಕ ಜಾತ್ಯತೀತ ಮನೋಭಾವ ಬೆಳೆಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ

  • ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ.

ಸಂಸ್ಥೆಗಳು

  • 2 ವೈದ್ಯಕೀಯ ಕಾಲೇಜು
  • 2 ದಂತ ವೈದ್ಯಕೀಯ ಕಾಲೇಜು
  • 1 ಇಂಜಿನಿಯರಿಂಗ್ ಕಾಲೇಜು
  • ನರ್ಸಿಂಗ್, ಎಂಬಿಎ ಸೇರಿದಂತೆ ಹಲವಾರು ಶೈಕ್ಷಣಿಕ ಸಂಸ್ಥೆಗಳ ಆಧಾರಸ್ತಂಭ.

ಪ್ರಶಸ್ತಿಗಳು ಮತ್ತು ಗೌರವಗಳು

  • ರೋಟರಿ ಇಂಟರ್ ನ್ಯಾಷನಲ್‌ ಪಾಲ್ ಹ್ಯಾರಿಸ್ ಪೆಲೋ
  • ಶಿರೋಮಣಿ ವಿಕಾಸ್ ಪ್ರಶಸ್ತಿ
  • ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ
  • ಇಂಡಿಯನ್ ಕೌನ್ಸಿಲ್ ಆಫ್ ಮ್ಯಾನೇಜ್‌ಮೆಂಟ್ ಎಕ್ಸಿಕ್ಯೂಟಿವ್ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ
  • ದೆಹಲಿಯ ಗ್ಲೋಬಲ್ ರಂನ ಎಕ್ಸೆಲೆನ್ಸ್ ಪುರಸ್ಕಾರ
  • ಎನ್‌ಆರ್‌ಐ ಇನ್ಸಟಿಟ್ಯೂಟ್ – ಇಂಟರ್ ನ್ಯಾಷನಲ್ ಬಿಸಿನೆಸ್ ಅಕ್ಯುಮೆನ್ ಪ್ರಶಸ್ತಿ
  • ಭಾರತ್ ಗೌರವ್ ಪ್ರಶಸ್ತಿ
  • ದಾವಣಗೆರೆ ಮಹಾ ಜನತೆಯಿಂದ “ವಿದ್ಯಾಶ್ರೀ” ಬಿರುದು
  • ಅಭಿಮಾನಿ ಸಂಘದಿಂದ “ನಿತ್ಯ ಸೇವಾ ಯಜ್ಞಧಾರಿ” ಬಿರುದು
  • ನೂರಾರು ಪ್ರತಿಷ್ಠಿತ ಪ್ರಶಸ್ತಿಗಳು

ಸಾರಾಂಶ

ಶಾಮನೂರು ಶಿವಶಂಕರಪ್ಪ – 95ನೇ ವಯಸ್ಸಿನಲ್ಲೂ ಶಾಸಕರಾಗಿದ್ದ ಅಜಾತ ಶತ್ರು, ರಾಜಕೀಯ, ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆ ನೀಡಿದವರು. ದಾವಣಗೆರೆ ಧಣಿ, ಜನಾನುರಾಗಿ ಉದ್ಯಮಿ, ಕೊಡಗೈ ದಾನಿಯಾಗಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Latest News