Apr 22, 2026 Languages : ಕನ್ನಡ | English

ಹೋಂ ಸ್ಟೇನಲ್ಲಿ ಅಮೆರಿಕ ಪ್ರವಾಸಿಗೆ ನರಕ ದರ್ಶನ - ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೃತ್ಯ ಎಸಗಿದ್ದ ಕಾಮುಕ ಅಂದರ್!!

ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರು ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ವಾಷಿಂಗ್ಟನ್‌ನಿಂದ ಕೊಡಗಿಗೆ ಪ್ರವಾಸ ಬಂದಿದ್ದ ಅಮೆರಿಕ ಮೂಲದ ಮಹಿಳೆಯ ಮೇಲೆ ಅ*ತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಕುಟ್ಟ ಗ್ರಾಮದ 'ದೇವಿ ವಿಲ್ಲಾ' ಹೋಂ ಸ್ಟೇನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿದ ಕಾಮುಕ; | Photo Credit: https://x.com/mid_day
ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿದ ಕಾಮುಕ; | Photo Credit: https://x.com/mid_day

ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿದ ಕಾಮುಕ

ಸಂತ್ರಸ್ತ ಮಹಿಳೆ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇನಲ್ಲಿ ತಂಗಿದ್ದರು. ಅಲ್ಲಿನ ಸಿಬ್ಬಂದಿ, ಜಾರ್ಖಂಡ್ ಮೂಲದ ವ್ರುಜೇಶ್ ಕುಮಾರ್ ಎಂಬಾತ ಈ ಕೃತ್ಯದ ಮುಖ್ಯ ಆರೋಪಿ. ಈತ ಮಹಿಳೆ ಕುಡಿಯುವ ಪಾನೀಯಕ್ಕೆ ನಿದ್ದೆ ಮಾತ್ರೆ ಅಥವಾ ಯಾವುದೋ ಅಮಲು ಪದಾರ್ಥವನ್ನು ಬೆರೆಸಿದ್ದ ಎನ್ನಲಾಗಿದೆ. ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದಾಗ ಆಕೆಯ ಮೇಲೆ ಅ*ತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮೂರು ದಿನಗಳ ಕಾಲ ಗೃಹಬಂಧನ!

ಘಟನೆಯ ನಂತರ ಮಹಿಳೆ ಪೊಲೀಸರಿಗೆ ದೂರು ನೀಡದಂತೆ ಹೋಂ ಸ್ಟೇ ಮಾಲೀಕ ವಿಶಾಲ್ ಭಯಾನಕ ಸ್ಕೆಚ್ ಹಾಕಿದ್ದ.

ಸಂಪರ್ಕ ಕಡಿತ: ಮಹಿಳೆಯ ಫೋನ್ ಕಿತ್ತುಕೊಂಡು, ಹೋಂ ಸ್ಟೇಯ ವೈಫೈ (WiFi) ಸಂಪರ್ಕವನ್ನು ಕಡಿತಗೊಳಿಸಿದ್ದ.

ಧಮಕಿ: ಯಾರಿಗಾದರೂ ವಿಷಯ ತಿಳಿಸಿದರೆ ಕೊ*ಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಹೀಗೆ ಸತತ ಮೂರು ದಿನಗಳ ಕಾಲ ಆಕೆಯನ್ನು ಅಲ್ಲಿಯೇ ಕೂಡಿ ಹಾಕಿ, ಘಟನೆಯನ್ನು ಮುಚ್ಚಿಹಾಕಲು ಮಾಲೀಕ ಪ್ರಯತ್ನಿಸಿದ್ದಾನೆ.

ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ!

ಆರೋಪಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಮಹಿಳೆ ನೇರವಾಗಿ ಮೈಸೂರಿಗೆ ಬಂದಿದ್ದಾರೆ. ಅಲ್ಲಿಂದ ಅಮೆರಿಕ ರಾಯಭಾರ ಕಚೇರಿಯ (US Embassy) ಅಧಿಕಾರಿಗಳನ್ನು ಸಂಪರ್ಕಿಸಿ ತನಗಾದ ಅನ್ಯಾಯವನ್ನು ವಿವರಿಸಿದ್ದಾರೆ. ತಕ್ಷಣ ಎಚ್ಚೆತ್ತ ರಾಯಭಾರ ಕಚೇರಿಯು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿತು. ಮಾಹಿತಿ ಸಿಕ್ಕ ತಕ್ಷಣ ಕೊಡಗು ಪೊಲೀಸರು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಿಂಚಿನ ಕಾರ್ಯಾಚರಣೆ ನಡೆಸಿದರು.

ಇಬ್ಬರು ಆರೋಪಿಗಳು ಈಗ ಜೈಲು ಪಾಲು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅ*ತ್ಯಾಚಾರ ಎಸಗಿದ ವ್ರುಜೇಶ್ ಕುಮಾರ್ ಮತ್ತು ಕೃತ್ಯಕ್ಕೆ ಸಾಥ್ ನೀಡಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಮಾಲೀಕ ವಿಶಾಲ್ ಇಬ್ಬರನ್ನೂ ಬಂಧಿಸಿದ್ದಾರೆ. ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರವಾಸಿಗರ ಗಮನಕ್ಕೆ ಕೆಲವು ಎಚ್ಚರಿಕೆಗಳು:

ಕೊಡಗಿನಂತಹ ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ನಡೆಯುವುದು ಪ್ರವಾಸೋದ್ಯಮಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿದೆ. ಪ್ರವಾಸಿಗರು ಕೆಲವು ಮುನ್ನೆಚ್ಚರಿಕೆ ವಹಿಸುವುದು ಮುಖ್ಯ:

  • ನೋಂದಾಯಿತ ಹೋಂ ಸ್ಟೇ: ಯಾವಾಗಲೂ ಸರ್ಕಾರದಿಂದ ಮಾನ್ಯತೆ ಪಡೆದ ಹೋಂ ಸ್ಟೇಗಳಲ್ಲಿ ಮಾತ್ರ ತಂಗಿರಿ.
  • ಸ್ಥಳೀಯ ಪೊಲೀಸರ ಮಾಹಿತಿ: ನೀವು ತಂಗುವ ಏರಿಯಾದ ಪೊಲೀಸ್ ಠಾಣೆಯ ನಂಬರ್ ಅನ್ನು ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಿ.
  • ಅಪರಿಚಿತರ ಬಗ್ಗೆ ಎಚ್ಚರ: ಹೋಂ ಸ್ಟೇ ಸಿಬ್ಬಂದಿ ನೀಡುವ ಆಹಾರ ಅಥವಾ ಪಾನೀಯದ ಬಗ್ಗೆ ಯಾವಾಗಲೂ ಒಂದು ಕಣ್ಣಿರಲಿ.

ನಮ್ಮ ರಾಜ್ಯಕ್ಕೆ ಬಂದ ಅತಿಥಿಯ ಮೇಲೆ ನಡೆದ ಈ ದೌರ್ಜನ್ಯ ನಿಜಕ್ಕೂ ಖಂಡನೀಯ. ಪೊಲೀಸರು ಶೀಘ್ರವಾಗಿ ಕ್ರಮ ಕೈಗೊಂಡಿರುವುದು ಪ್ರಶಂಸನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂಬುದೇ ಎಲ್ಲರ ಆಶಯ.

Latest News