Mar 1, 2026 Languages : ಕನ್ನಡ | English

ವಯಸ್ಸು ಮೂವತ್ತಾದರೂ ಇನ್ನೂ ಮದ್ವೆ ಆಗಿಲ್ವಾ - ಇಲ್ಲಿದೆ ಗುಡ್ ನ್ಯೂಸ್!!

ಕಾಂಗ್ರೆಸ್ ಸರಕಾರ ಈಗಾಗಲೇ ಪಂಚ ಗ್ಯಾರೆಂಟಿಗಳ ಮೂಲಕ ಆಡಳಿತ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಾಜ್ಯ ಸರಕಾರ ಎಲ್ಲ ಚಟುವಟಿಕೆಗಳನ್ನು ತೂಗಿಸಿಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಹೀಗೆ ತನ್ನ 'ಐದು  ಗ್ಯಾರೆಂಟಿ' ಯೋಜನೆಗಳ ಮೂಲಕ ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎಲ್ಲವನ್ನು ನಿಭಾಯಿಸ್ಕೊಂಡು ಹೋಗುತ್ತಿದೆ. ಇದರ ನಡುವೆ ಇನ್ನೊಂದು ವಿಷಯ ಚರ್ಚೆಗೆ ಬಂದಿದ್ದು, ಪಂಚ ಗ್ಯಾರೆಂಟಿಗಳ ನಡುವೆ ಕಲ್ಯಾಣ ಯೋಜನೆಗೆ ಸಹ ಅಸ್ತು ಅಂತ ಹೇಳಿ ಎಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಡಿ ರಂಗನಾಥ್ ಅವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. 

ರೈತರ ಮಕ್ಕಳ ಮದುವೆ ಸಮಸ್ಯೆ – ಕುಣಿಗಲ್ ಶಾಸಕರ ಮನವಿ
ರೈತರ ಮಕ್ಕಳ ಮದುವೆ ಸಮಸ್ಯೆ – ಕುಣಿಗಲ್ ಶಾಸಕರ ಮನವಿ

ಇತ್ತೀಚಿಗೆ ಗ್ರಾಮೀಣ ಭಾಗದ ಪುರುಷರಿಗೆ ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲ, ಅದಕ್ಕೆ ಕಾರಣ ಎಲ್ಲಿ ನೋಡಿದರೂ ಹೆಣ್ಣು ಹೆತ್ತ ತಂದೆ ತಾಯಿ ಸರಕಾರಿ ನೌಕರಿ ಮಾಡುವ ಅಥ್ವಾ ಒಂದೊಳ್ಳೆ ಜಾಬ್ ಮಾಡುವ ಹುಡುಗರಿಗೆ ಮಾತ್ರ ಹೆಣ್ಣುಮಕ್ಕಳ ಧಾರೆ ಎರೆಯುತ್ತಿದ್ದಾರೆ. ಆದರೆ ರೈತಾಪಿ ಕುಟುಂಬದ, ವ್ಯವಸಾಯ ನಂಬಿ ಜೀವನ ಮಾಡುವ ಹುಡುಗರಿಗೆ ಹೆಣ್ಣು ನೀಡಲು, ಅಥ್ವಾ ಮದುವೆಗೆ ನಿರಾಕರಿಸುತ್ತಿರುವ ಘಟನೆಗಳೇ ಹೆಚ್ಚು ಕಂಡು ಬರುತ್ತಿವೆ. ವಯಸ್ಸು ಮೂವತ್ತು ಆದರೂ ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಹಾಗಾಗಿ ಇದರ ಕುರಿತು ಶಾಸಕ ಎಚ್ ಡಿ ರಂಗನಾಥ್ ಅವರು ಪತ್ರದ ಮೂಲಕವೇ ಮದುವೆ ಆಗದೆ ಇರುವ ರೈತರ ಮಕ್ಕಳ ಪರವಾಗಿ ಇದೊಂದು ಯೋಜನೆ ಜಾರಿಗೆ ತನ್ನಿ ಎಂದು ಕೇಳಿಕೊಂಡಿದ್ದಾರೆ. ಅಸಲಿಗೆ ಶಾಸಕರು ಪತ್ರದ ಮೂಲಕ ಯಾವ ರೀತಿ ಮನವಿ ಮಾಡಿದ್ದಾರೆ ಗೊತ್ತಾ? ಮುಂದೆ ಓದಿ. 

ರೈತರ ಮಕ್ಕಳಿಗೆ ಹೆಣ್ಣು ಕೊಡಿಸುವ ವಿಚಾರಕ್ಕೆ ಶಾಸಕ ಪತ್ರದಲ್ಲಿ ಬರೆದಿರೋದೇನು?

ಎಚ್ ಡಿ ರಂಗನಾಥ್ ಶಾಸಕರು ವಿಷಯ ಪ್ರಸ್ತಾಪಿಸಿದಂತೆ 'ಮಾನ್ಯರೆ, ಕುಣಿಗಲ್ ವಿಧಾನಸಭಾ ಕ್ಷೇತ್ರ ಗ್ರಾಮಗಳಲ್ಲಿ ವಾಸವಿದ್ದು ವ್ಯವಸಾಯ ಮಾಡುವ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಭತ್ಯೆ ಹಾಗೂ ಸ್ಥಾನಮಾನ ಘೋಷಿಸುವುದರ ಬಗ್ಗೆ' ಎಂದು ವಿಷಯದ ಆರಂಭದಲ್ಲಿ ಹೇಳಿಕೊಂಡಿದ್ದಾರೆ.

'ನನ್ನ ಮತಕ್ಷೇತ್ರ ಕುಣಿಗಲ್ ತಾಲೂಕು ಗ್ರಾಮೀಣ ಪ್ರದೇಶವಾಗಿದ್ದು, ವ್ಯವಸಾಯ ಅವಲಂಬನೆ ಹೆಚ್ಚಿರುತ್ತದೆ, ಹಾಗೂ ಗ್ರಾಮಗಳಲ್ಲಿ ಹೆಚ್ಚಿನ ಯುವಕರು ವಾಸವಿದ್ದು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿದ್ದು, ಇವರನ್ನು ಮದುವೆಯಾಗಲು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದು, 30 ವರ್ಷ ದಾಟಿದರೂ ಮದುವೆ ಆಗದೆ ತೊಂದರೆಯಲ್ಲಿ ಇರುತ್ತಾರೆ. ಆದ್ದರಿಂದ ತಾವುಗಳು ಹಳ್ಳಿಗಳಲ್ಲಿ ವಾಸವಿದ್ದು ವ್ಯವಸಾಯ ಮಾಡಿಕೊಂಡಿರುವ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಮುಂಬರುವ ಅಧಿವೇಶನದಲ್ಲಿ ವಿಶೇಷ ಸ್ಥಾನಮಾನವನ್ನು ಘೋಷಿಸಬೇಕಾಗಿ ಕೋರುತ್ತೇನೆ' ಎಂದು ಪತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ. 

ಈ ವಿಚಾರಕ್ಕೆ ಗ್ಯಾರೆಂಟಿ ಸರಕಾರ ಹೇಗೆ ಸ್ಪಂದಿಸುತ್ತೆ ಕಾದು ನೋಡಬೇಕು. ಮುಂಬರುವ ದಿನಗಳಲ್ಲಿ ಪಂಚ ಯೋಜನೆ ಮೂಲಕ ಈ 'ಕಲ್ಯಾಣ ಯೋಜನೆ' ಸಹ ಜಾರಿಗೆ ಬರುತ್ತಾ ಕಾಂಗ್ರೆಸ್ ಸರಕಾರದಿಂದ ಎಂದು ಕಾಯಬೇಕು. ಇದು ಕೂಡ ಒಳ್ಳೆಯ ವಿಷಯ ರೈತರ ಮಕ್ಕಳಿಗೆ ಹೆಣ್ಣೇ ಸಿಗದೇ ಹೋದರೆ ಮುಂದೆ ವ್ಯವಸಾಯ ಮಾಡುವವರೇ ಇಲ್ಲದಂತೆ ಆಗುತ್ತದೆ. ಇದು ವಿವಾಹ ಆಗದೆ ಇರುವವರಿಗೆ ಒಳ್ಳೆಯ ಸುದ್ದಿ ಆಗಿದೆ ಎಂದು ಹೇಳಬಹುದು. ಶಾಸಕ ರಂಗನಾಥ್ ಅವರ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡೋಣ. 

Latest News