Jan 25, 2026 Languages : ಕನ್ನಡ | English

ಅವಧಿ ಮುಗಿಯೋತನಕ ಸಿದ್ದರಾಮಯ್ಯನವರೇ ಸಿ ಎಂ - ಡಿಕೆಶಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಜಮೀರ್ ಅಹ್ಮದ್

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಸಿ ಎಂ ಸಿದ್ದರಾಮಯ್ಯ ಅವ್ರು ಮುಂದುವರೆಯಬೇಕಾ ಅಥವಾ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕಾ ಎನ್ನುವ ವಿಚಾರ ಕಳೆದ ಎರಡು ತಿಂಗಳಿನಿಂದ ರಾಜ್ಯದ ರಾಜಕೀಯದಲ್ಲಿ ಕೇಳಿ ಬರುತ್ತಲೇ ಇದೆ. ಅದರ ವಿಚಾರವಾಗಿ ಇದೀಗ ಜಮೀರ್ ಅಹ್ಮದ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೌದು ಸಿಎಂ ಸಿದ್ದರಾಮಯ್ಯ ಅವರೇ  2028 ರವರೆಗೆ ಪೂರ್ಣ ಸಮಯಕ್ಕೂ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ಜಮೀರ್ ಅಹ್ಮದ್ ಖಾನ್ ಅವರು ಹೇಳಿದ್ದಾರೆ ಎಂದು ತಿಳಿದುಬಂದಿದೆ. 

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಜಮೀರ್ ಅಹ್ಮದ್ ನಿಲುವು ಸ್ಪಷ್ಟ
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಜಮೀರ್ ಅಹ್ಮದ್ ನಿಲುವು ಸ್ಪಷ್ಟ

ಹೌದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ನಂತರವೇ ಮುಖ್ಯಮಂತ್ರಿಯಾಗಬೇಕು ಎಂದು ಅವರು ಹೇಳಿದರು. ಜಮ್ಮಿರ್ ಅಹ್ಮದ್ ಅವರು ಕೋಲಾರದೊಳಗಿನ ಶ್ರೀನಿವಾಸಪುರದ ಲಕ್ಷ್ಮಿಪುರದಲ್ಲಿ ನೂರಾನಿ ಮಸೀದಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ಅವರು, 'ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಆದರೆ ಸಿದ್ದರಾಮಯ್ಯ ನಂತರವೇ ಅವರು ಆಗಬೇಕು, ಅದು ನಮ್ಮ ಬೇಡಿಕೆ' ಎಂದು ಹೇಳಿಕೊಂಡರು. 

ಕಾಂಗೇಸ್ ನಲ್ಲಿ ಕೆಲಸ ಮಾಡುತ್ತಲೇ ಬಂದಿರುವ ಡಿ ಕೆ ಶಿವಕುಮಾರ್ ಅವರ ಕಾಂಗ್ರೆಸ್ ನಿಷ್ಠೆಯ ಬಗ್ಗೆ ಮಾತನಾಡಿದ ಸಚಿವರು, ಶಿವಕುಮಾರ್ ಅವರ ರಕ್ತದಲ್ಲಿ ಕಾಂಗ್ರೆಸ್ ಹರಿಯುತ್ತದೆ. ನಮ್ಮಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳು ಬೇರೆ ಬೇರೆ ಪಕ್ಷಗಳಿಂದ ಬಂದಿದ್ದೇವೆ, ಆದರೆ ಕಾಂಗ್ರೆಸ್ ಡಿ ಕೆ ಶಿವಕುಮಾರ್ ಅವರ ರಕ್ತದಲ್ಲಿಯೇ ಇದೆ . ರಕ್ತವನ್ನು ಬದಲಾಯಿಸಲು ನಿಜ ಸಾಧ್ಯವಿಲ್ಲ ಎಂದು ಹೇಳಿಕೊಂಡರು ಎಂದು ತಿಳಿದುಬಂದಿದೆ. 

ಜೊತೆಗೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪಟ್ಟದ  ನಾಯಕತ್ವ ಬದಲಾವಣೆ ಮಾಡಬೇಕು ಎನ್ನುವ ಮಾತು,ಅದರ ಬಗ್ಗೆ  ಪದೇ ಪದೇ ಕೇಳಿ ಬಂದಂತಹ ವದಂತಿಗಳ ಚರ್ಚೆ ನೋಡಿದಾಗ, ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಹಾಗೆ ಈಗ ಜನವರಿ ಸಂಕ್ರಾಂತಿ ಬಗ್ಗೆ ಮಾತನಾಡಿದವರು ಏನೂ ಆಗೋದಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಸಿದ್ದರಾಮಯ್ಯನವರ ಜೊತೆ ಅತ್ತ ಹೈಕಮಾಂಡ್ ಇದೆ  ಎಂದು ಅಭಿಪ್ರಾಯ ಪಟ್ಟರು. 

Latest News