ತುಮಕೂರು ಜಿಲ್ಲೆಯಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಭೋಜನಕ್ಕೆ ಆಗಮಿಸಿದರು. ಬೈ ರೋಡ್ ಮೂಲಕ ಆಗಮಿಸಿದ ಸಿಎಂ, ನೇರವಾಗಿ ರಾಜಣ್ಣ ಅವರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದರು. ಹೌದು ರಾಜಣ್ಣ ಅವರ ಮನೆಯಲ್ಲಿ ಸಿಎಂಗೆ ನಾಟಿಕೋಳಿ ಸಾರು, ಮುದ್ದೆ ಸೇರಿದಂತೆ ಹಲವು ವಿಶೇಷ ಆಹಾರ ಸಿದ್ಧಪಡಿಸಲಾಗಿತ್ತು. ಆತಿಥ್ಯವನ್ನು ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯನವರು, ಭೋಜನವನ್ನು ಸವಿದು ಸಂತೋಷ ವ್ಯಕ್ತಪಡಿಸಿದರು.
ಸ್ಥಳೀಯವಾಗಿ ಪ್ರಸಿದ್ಧವಾದ ಔತಣವನ್ನು ಸಿಎಂಗೆ ನೀಡಲು ರಾಜಣ್ಣ ಕುಟುಂಬವೇ ವಿಶೇಷ ಸಿದ್ಧತೆ ಮಾಡಿಕೊಂಡಿತ್ತು. ಹೌದು ಊಟದ ನಂತರ ಸಿಎಂ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಲು ತೆರಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಸಚಿವ ಪರಮೇಶ್ವರ್ ಹಾಗೂ ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೊವಿಂದ ರಾಜು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಶುಭಕಲ್ಯಾಣ್, ಕೇಂದ್ರವಲಯ ಐಜಿಪಿ ಲಾಬೂರಾಮ್ ಹಾಗೂ ಎಸ್‌ಪಿ ಅಶೋಕ್ ಕೆ. ವೆಂಕಟ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಿಎಂ ಆಗಮನದ ಹಿನ್ನೆಲೆಯಲ್ಲಿ ರಾಜಣ್ಣ ಮನೆಯಲ್ಲಿ ಭರ್ಜರಿ ಸಿದ್ಧತೆ ನಡೆದಿದ್ದು, ಆತಿಥ್ಯದಲ್ಲಿ ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಲಾಗಿ ಕಂಡು ಬಂದಿತು. ಸಿಎಂ ಸಿದ್ದರಾಮಯ್ಯ ಅವರ ಈ ಭೇಟಿ ಸ್ಥಳೀಯವಾಗಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮಾಜಿ ಸಚಿವ ರಾಜಣ್ಣ ಅವರ ಆತಿಥ್ಯ ಸ್ವೀಕರಿಸಿದ ಸಿಎಂಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಊಟದ ನಂತರ ನಡೆಯಲಿರುವ ಒಲಂಪಿಕ್ಸ್ ಕ್ರೀಡಾ ಕೂಟವು ತುಮಕೂರು ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಹೌದು ಒಟ್ಟಿನಲ್ಲಿ, ತುಮಕೂರಿನಲ್ಲಿ ನಡೆದ ಈ ಘಟನೆ ಸಿಎಂ ಸಿದ್ದರಾಮಯ್ಯ ಅವರ ಆತಿಥ್ಯ ಸ್ವೀಕಾರ ಹಾಗೂ ಕ್ರೀಡಾ ಕೂಟಕ್ಕೆ ಚಾಲನೆ ಇವೆಲ್ಲಾ ಇದೀಗ ಜಿಲ್ಲೆಯಲ್ಲಿ ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.