ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಚಿವರು ಕೆಂಡಾಮಂಡಲವಾಗಿ ತೀವ್ರ ವಾಗ್ದಾಳಿ ನಡೆಸಿದರು. ಹೌದು ಸಚಿವರು ಅಧಿಕಾರಿಗಳತ್ತ ಮುಖ ಮಾಡಿ, “ಬಾಯಿ ಬಿಟ್ಟರೆ ಸುಳ್ಳು ಹೇಳ್ತೀರಾ, ಈ ವಯಸ್ಸಿಗೆ ಇದೇನಾ ನಿಮ್ಮ ಆರ್ಗನೈಜೇಷನ್ ಕೃಷ್ಣ ಬೈರೇಗೌಡ ಕಲ್ಚರ್?” ಎಂದು ಪ್ರಶ್ನೆ ಕೇಳಿದರು.
9 ಕಿ.ಮೀ ರಸ್ತೆ ಕಾಮಗಾರಿಯಲ್ಲಿ ಕೇವಲ 1 ಕಿ.ಮೀ ಭಾಗದಲ್ಲಿ ಮರ ಇರುವುದರಿಂದ ಬಾಕಿ ಕೆಲಸ ಮುಗಿಸಬಹುದಾಗಿದ್ದರೂ, ಇನ್ನೂ ಕೆಲಸ ಆರಂಭಿಸದಿರುವುದಕ್ಕೆ ಸಚಿವರು ಗರಂ ಆಗಿರೋದಾಗಿ ಕಂಡು ಬಂದಿದೆ. ಹೌದು ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿರುವುದಾಗಿ ಸಚಿವರು ಆರೋಪಿಸಿದರು. “ನಿಮ್ಮಂತಹ ಕೆಲಸಕ್ಕೆ ಬಾರದವರ ಜೊತೆ ಬಂದು ಮಾತನಾಡಬೇಕಾಗಿರುವುದು ನಮ್ಮ ದೌರ್ಭಾಗ್ಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳಲ್ಲಿ ಜವಾಬ್ದಾರಿಯಿಲ್ಲ, ಕನಿಷ್ಠ ಉತ್ತರದಾಯಿತ್ವವೂ ಇಲ್ಲ ಎಂದು ಸಚಿವರು ಹರಿಹಾಯ್ದರು.
ಅಧಿಕಾರಿಗಳ ಸುಳ್ಳು ಹೇಳುವ ನಡವಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಕೃಷ್ಣ ಬೈರೇಗೌಡ, “ಬೇರೆಯವರಾಗಿದ್ದರೆ ಕಪಾಳಕ್ಕೆ ಹೊಡೆಯುತ್ತಿದ್ದರು” ಎಂದು ಕಿಡಿ ಉಗಿದರು. ಕಾಮಗಾರಿ ವಿಳಂಬದಿಂದ ಜನತೆ ಸಂಕಷ್ಟ ಅನುಭವಿಸುತ್ತಿರುವುದನ್ನು ಸಚಿವರು ಸ್ಪಷ್ಟಪಡಿಸಿದರು. ಸಚಿವರ ಈ ಆಕ್ರೋಶ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕೆಂಬ ಒತ್ತಾಯವನ್ನು ಸಚಿವರು ಅಧಿಕಾರಿಗಳ ಮುಂದೆ ಸ್ಪಷ್ಟವಾಗಿ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಹೇಳುವವದಾದರೆ, ಹಾಸನದಲ್ಲಿ ನಡೆದ ಈ ಘಟನೆ ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಸಚಿವ ಕೃಷ್ಣ ಬೈರೇಗೌಡ ಅವರ ಆಕ್ರೋಶ ಜನರ ಮನಸ್ಸಿನಲ್ಲಿ ಪ್ರತಿಧ್ವನಿಸಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಹೇಗೆ ಬದಲಾವಣೆ ತರುತ್ತಾರೋ ಕಾದು ನೋಡಬೇಕು.