Jan 25, 2026 Languages : ಕನ್ನಡ | English

ಚಡ್ಡಿ ಹಾಕಿಕೊಂಡು ತಿರುಗಾಡ್ಬೇಡಮ್ಮ ಎಂದು ಬುದ್ದಿ ಹೇಳಿದ್ದೆ ತಪ್ಪಾಯ್ತು - ಯುವತಿಯಿಂದ ತಳಿತಕೊಳ್ಳಗಾದ ಘಟನೆ!!

ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಏನು ಹೇಳಬಾರದು ಎಂಬಂತೆಯೇ ನಡೆದುಕೊಳ್ಳುತ್ತಾರೆ. ಹಿರಿಯ ವಯಸ್ಸಿನವರು ಅವರಿಗೆ ಏನು ಹೇಳಿದರೂ ಕೂಡ ಕಷ್ಟ ಅನ್ನೋ ಪರಿಸ್ಥಿತಿ ಇದೀಗ ಮತ್ತೊಮ್ಮೆ ನಿರ್ಮಾಣವಾಗಿದೆ. ಒಂದು ಮಾತು ಆಡಿದ್ರೂ ತಪ್ಪು, ಸ್ವಲ್ಪ ಬುದ್ದಿವಾದ ಹೇಳಿದ್ರೂ ತಪ್ಪು ಎನ್ನುವಂತಾಗಿದೆ ನೋಡಿ ಸ್ನೇಹಿತರೆ. ಕೆಲವರು ದೊಡ್ಡವರ ಮಾತಿನಿಂದ ಮನನೊಂದು ಜೀವಹಾನಿಯಂತಹ ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಕೈಗೊಂಡು ದುಡುಕುವ ಘಟನೆಗಳು ನಡೆಯುತ್ತಿವೆ. 

ಬಟ್ಟೆ ವಿವಾದದಿಂದ ವೈರಲ್ ಆದ ಹೋಂ ಗಾರ್ಡ್ ಘಟನೆ!!
ಬಟ್ಟೆ ವಿವಾದದಿಂದ ವೈರಲ್ ಆದ ಹೋಂ ಗಾರ್ಡ್ ಘಟನೆ!!

ಹೌದು ಅನಂತಹದೇ ಒಂದು ಘಟನೆ ನಡೆದಿದ್ದು ವಯಸ್ಸಿನಲ್ಲಿ ಹಿರಿಯ ಮಹಿಳೆಯೊಬ್ಬರು, ಒಬ್ಬ ಯುವತಿಗೆ ‘ಬಟ್ಟೆ ಸರಿಯಾಗಿ ಹಾಕಿಕೊಳ್ಳಮ್ಮ’ ಎಂದು ಹೇಳಿದ್ದಕ್ಕೆ, ಶಿಸ್ತು ಪಾಲನೆ ಮಾಡುತ್ತಿದ್ದ ಹೋಂ ಗಾರ್ಡ್ ಮಹಿಳೆಯ ಮೇಲೆಯೇ ಕೈ ಮಾಡಿದ ಘಟನೆ ಆತಂಕ ಮೂಡಿಸಿದೆ. ಶಿಸ್ತು ಮತ್ತು ಸ್ವಾತಂತ್ರ್ಯದ ನಡುವಿನ ಗಡಿ ಎಲ್ಲಿ ಅಂತ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಎದುರಾಗಿದೆ. ಆ ಅಮ್ಮ ಈ ರೀತಿ ಹೇಳಿದ್ದು ನಿಜಕ್ಕೂ ತಪ್ಪಾ, ಅಸಲಿಗೆ ಅಂತಹ ಕೆಟ್ಟ ಉದ್ದೇಶ ಏನಿತ್ತು ಅವರ ಮಾತಲ್ಲಿ ಎಂದು ಗಂಭೀರ ಪ್ರಶ್ನೆ ಎದ್ದಿದೆ. ಹಾಗೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಕೈ ಮಾಡಿದ ಯುವತಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ವಿಡಿಯೋ ನೋಡಿದ ಪ್ರತಿಯೊಬ್ಬರೂ ಆಗ್ರಹಿಸಿದ್ದರು. 
 
ಹೌದು ಸಾರ್ವಜನಿಕ ಸ್ಥಳದಲ್ಲಿ  ಚಡ್ಡಿ ಹಾಕಿಕೊಂಡು ತಿರುಗಾಡುತ್ತಿದ್ದ ಯುವತಿಯೋರ್ವಳಿಗೆ ಬುದ್ಧಿ ಹೇಳಿದ್ದಕ್ಕೆ ಹೋಂ ಗಾರ್ಡ್‌ಗೆ ಯುವತಿಯೋರ್ವಳು ಥಳಿಸಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರದಲ್ಲಿ ನಡೆದಿದೆ. ಹೋಂ ಗಾರ್ಡ್ ಲಕ್ಷ್ಮೀನರಸಮ್ಮಗೆ ಮೋಹಿನಿ ಎಂಬಾಕೆ ತೀವ್ರವಾಗಿ ಥಳಿಸಿದ್ದಾಳೆ. ಶಾರ್ಟ್ ಬಟ್ಟೆಗಳನ್ನು ಧರಿಸಿ ಮೋಹಿನಿ ಓಡಾಡುತ್ತಿದ್ದಳು. ಮೋಹಿನಿಯನ್ನು ನೋಡಿದ ಕೆಲ ಯುವಕರು ಚುಡಾಯಿಸಿದ್ದರು. ಆಗಾಗಿ  ಇದನ್ನು ಗಮನಿಸಿದ ಹೋಂ ಗಾರ್ಡ್ ಲಕ್ಷ್ಮೀನರಸಮ್ಮ ಯುವತಿಯನ್ನು ಕರೆದು ವಿಚಾರಿಸಿದರು. 

ಅಲ್ಲದೆ ಈ ರೀತಿ ಶಾರ್ಟ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದರೆ ಪುಂಡ ಪೋಕರಿಗಳು ಚುಡಾಯಿಸದೇ ಏನು ಮಾಡುತ್ತಾರೆ. ಮುಂದೆ ಈ ರೀತಿ  ಸಣ್ಣ ಪುಟ್ಟ ಬಟ್ಟೆಗಳ ಧರಿಸಿ ಓಡಾಡಬೇಡ ಎಂದು ಬುದ್ದಿವಾದ ಹೇಳಿದ್ದರು ಅಷ್ಟೇ. ಇದರಿಂದ ಕೋಪಗೊಂಡ ಆ ಯುವತಿ, ನನಗೆ ಬುದ್ಧಿ ಹೇಳಲು ನೀನ್ಯಾರು?  ಬಾಯಿಗೆ ಬಂದಂಗೆ ಬೈದು, ಕೂದಲು ಹಿಡಿದು  ಹೋಂ ಗಾರ್ಡ್ ಗೆ ಮನಬಂದಂತೆ ಹೊಡೆದು ಕೈ ಮಾಡಿದ್ದಾಳೆ. ನಂತರ ಅಲ್ಲಿಯೇ ಇದ್ದಂತಹ ಸ್ಥಳೀಯರು ಈ ಘಟನೆ ತಡೆದು, ಹೋಂ ಗಾರ್ಡ್ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಕೃತ್ಯ ಎಸಗಿದ ಯುವತಿ ಮೋಹಿನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

Latest News