Jan 25, 2026 Languages : ಕನ್ನಡ | English

ಅಸಭ್ಯ ವರ್ತನೆ ಮಾಡಿದನೆಂದು ವಿಡಿಯೋ ಹರಿಬಿಟ್ಟ ಯುವತಿ - ವೈರಲ್ ಆಗ್ತಿದ್ದಂತೆಯೇ ದೊಡ್ಡ ದುರಂತ

ಕೇರಳದಲ್ಲಿ ನಡೆದ ಒಂದು ಘಟನೆ ಈಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಬಸ್‌ನಲ್ಲಿ ನಡೆದ ಅಸಭ್ಯ ವರ್ತನೆ ಆರೋಪದ ವಿಡಿಯೋ ವೈರಲ್ ಆದ ಬಳಿಕ, ದೀಪಕ್ ಎಂಬ ಯುವಕ ಜೀವಹಾನಿಗೆ ಕೆಲಸಕ್ಕೆ ಶರಣಾಗಿರುವುದು ಜನರಲ್ಲಿ ಆಘಾತ ಮೂಡಿಸಿದೆ. ಹೌದು ಕಳೆದ ಶುಕ್ರವಾರ ಖಾಸಗಿ ಬಸ್‌ನಲ್ಲಿ ಕಣ್ಣೂರಿಗೆ ತೆರಳುತ್ತಿದ್ದ 35 ವರ್ಷದ ಸೋಷಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಶಂಜಿತಾ ಮುಸ್ತಫಾ, ದೀಪಕ್ ಜೊತೆ ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿ ಹೆಚ್ಚಿನ ಜನಸಂದಣಿ ಇದ್ದ ಕಾರಣ ಇಬ್ಬರೂ ಪಕ್ಕಪಕ್ಕ ನಿಂತಿದ್ದರು. ಈ ವೇಳೆ ದೀಪಕ್ ಕೈ ಶಂಜಿತಾ ಮೈಗೆ ತಾಗಿದ ಘಟನೆ ನಡೆದಿದೆ ಎನ್ನಲಾಗಿದೆ. 

ವೈರಲ್ ವಿಡಿಯೋ ಪರಿಣಾಮ – ದೀಪಕ್ ಜೀವಹಾನಿ, ಜನರಲ್ಲಿ ಆಕ್ರೋಶ
ವೈರಲ್ ವಿಡಿಯೋ ಪರಿಣಾಮ – ದೀಪಕ್ ಜೀವಹಾನಿ, ಜನರಲ್ಲಿ ಆಕ್ರೋಶ

ಈ ಘಟನೆಯನ್ನು ಶಂಜಿತಾ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು, ಬಳಿಕ ಅಸಭ್ಯ ವರ್ತನೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿ, 20 ಲಕ್ಷಕ್ಕೂ ಜನರ ಮೂಲಕ ಹೆಚ್ಚು ವೀಕ್ಷಣೆ ಕಂಡಿತು. ವಿಡಿಯೋ ವೈರಲ್ ಆದ ಬಳಿಕ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆದವು. ಶಂಜಿತಾ ನಡೆಗೆ ಆಕ್ರೋಶ ವ್ಯಕ್ತಪಡಿಸಿದವರ ಸಂಖ್ಯೆ ಹೆಚ್ಚಾಗಿತ್ತು.  

ಹೌದು ವಿಡಿಯೋ ವೈರಲ್ ಆದ ಬಳಿಕ ಮುಜುಗರ ತಾಳಲಾರದೇ ದೀಪಕ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೀವ ಹಾನಿ ಮಾಡಿಕೊಂಡರು ಎಂದು ತಿಳಿದುಬಂದಿದೆ. ಈ ಘಟನೆ ಜನರಲ್ಲಿ ದುಃಖ ಮತ್ತು ಆಕ್ರೋಶ ಮೂಡಿಸಿದೆ. “ಒಂದು ವಿಡಿಯೋ ಕಾರಣಕ್ಕೆ ಜೀವ ಕಳೆದುಕೊಳ್ಳುವುದು ದುಃಖಕರ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.  

ದೀಪಕ್ ಪೋಷಕರು ಶಂಜಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರು ಆಧರಿಸಿ ಶಂಜಿತಾ ವಿರುದ್ಧ ಜೀವಹಾನಿ ಪ್ರಚೋದನೆ ಆರೋಪದಡಿ FIR ದಾಖಲಾಗಿದೆಯಂತೆ. ಈ ಪ್ರಕರಣ ಕೇರಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.  

ಶಂಜಿತಾ ನಡೆಗೆ ವಿರೋಧವಾಗಿ ಕೇರಳದಲ್ಲಿ ಜನರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಭಾಗವಾಗಿ ರಟ್ಟಿನ ಡಬ್ಬಿಗಳನ್ನು ದೇಹಕ್ಕೆ ಹಿಡಿದುಕೊಂಡು ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. “ಅಸಭ್ಯ ವರ್ತನೆ ಆರೋಪವನ್ನು ತಪ್ಪಾಗಿ ಬಿಂಬಿಸಿ, ಒಬ್ಬರ ಜೀವ ಕಳೆದುಕೊಂಡಿದ್ದಾರೆ” ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಹೌದು ಈ ಘಟನೆ ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ಮತ್ತೊಮ್ಮೆ ನೆನಪಿಸಿದೆ. ಒಂದು ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ, ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಬಹುದು ಎಂಬುದನ್ನು ಈ ಘಟನೆ ತೋರಿಸಿದೆ. ಅಸಭ್ಯ ವರ್ತನೆ ಆರೋಪದ ವಿಡಿಯೋದಿಂದ ದೀಪಕ್ ಜೀವ ಕಳೆದುಕೊಂಡಿದ್ದು, ಸಾಮಾಜಿಕ ಜವಾಬ್ದಾರಿಯ ಅಗತ್ಯವನ್ನು ಮತ್ತೊಮ್ಮೆ ಒತ್ತಿ ಹೇಳಿದೆ.    

Latest News