Mar 7, 2026 Languages : ಕನ್ನಡ | English

ರಸ್ತೆಗಿಳಿದು ಅತ್ತೆ-ಮಾವನ ವಿರುದ್ಧ ಸೊಸೆಯ ಬಾರಿ ಪ್ರತಿಭಟನೆ - ವೈರಲ್ ವಿಡಿಯೋದ ಹಿಂದಿನ ಸತ್ಯ!! ಈಗ ವೈರಲ್;

ಸೋಷಿಯಲ್ ಮೀಡಿಯಾದಲ್ಲಿ ಇಂದು ಉತ್ತರಾಖಂಡದ ಹಲ್ದ್ವಾನಿಯ ವಿಡಿಯೋ ಭಾರಿ ಸಂಚಲನ ಮೂಡಿಸುತ್ತಿದೆ. ಗೌಲಾಪರ್ ಮೂಲದ ದೀಕ್ಷಾ ಪಲಾರಿಯಾ ಎಂಬ ಮಹಿಳೆ ಸಾರ್ವಜನಿಕವಾಗಿ ಪಾರ್ಕ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವುದು ಮತ್ತು ತನ್ನ ಅತ್ತೆ ಮಾವನ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವುದು ಈ ವಿಡಿಯೋದಲ್ಲಿದೆ. ಈ ಘಟನೆಯು ಸ್ಥಳೀಯರಲ್ಲಿ ಮತ್ತು ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪಾರ್ಕ್‌ನಲ್ಲಿ ಮಹಿಳೆಯ ಪ್ರತಿಭಟನೆ ವೈರಲ್!! | Photo Credit: X/HateDetector
ಪಾರ್ಕ್‌ನಲ್ಲಿ ಮಹಿಳೆಯ ಪ್ರತಿಭಟನೆ ವೈರಲ್!! | Photo Credit: X/HateDetector

ಹಲ್ದ್ವಾನಿಯ ಪ್ರಸಿದ್ಧ ಬುದ್ಧ ಪಾರ್ಕ್‌ನಲ್ಲಿ ದೀಕ್ಷಾ ಪಲಾರಿಯಾ ಎಂಬಾಕೆ ಏಕಾಂಗಿಯಾಗಿ ಪ್ರತಿಭಟನೆಗೆ ಕುಳಿತಿದ್ದರು. ತನ್ನ ಅತ್ತೆ ಮಾವ, ಮನೆಯವರು ತನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮಹಿಳೆಯೊಬ್ಬರು ಸಾರ್ವಜನಿಕವಾಗಿ ಹೀಗೆ ಪ್ರತಿಭಟನೆಗೆ ಕುಳಿತಿದ್ದನ್ನ ಕಂಡು ಸ್ಥಳೀಯರು ಅಲ್ಲಿ ಜಮಾಯಿಸಿದರು. ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಷಯ ತಿಳಿದ ದೀಕ್ಷಾ ಅವರ ಕುಟುಂಬಸ್ಥರು ಕೂಡ ಹಲ್ದ್ವಾನಿಯ ಕೊತ್ವಾಲಿ ಪೊಲೀಸ್ ಠಾಣೆಗೆ ಧಾವಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನ್ಯಾಯಕ್ಕಾಗಿ ಪಾರ್ಕ್‌ನಲ್ಲಿ ಕುಳಿತಿದ್ದ ದೀಕ್ಷಾ ಅವರು ಅಶಕ್ತತೆಯಿಂದ ಪ್ರಜ್ಞೆ ತಪ್ಪಿ ಬಿದ್ದ ದೃಶ್ಯ ಮನಕಲಕುವಂತಿತ್ತು. ಮನಸ್ಸಿನ ಮೇಲಿನ ಭಾರ ಮತ್ತು ದೈಹಿಕ ಅಸ್ವಸ್ಥತೆ ಅವರನ್ನು ಹೈರಾಣಾಗಿಸಿತ್ತು. ಅದೃಷ್ಟವಶಾತ್, ಪೊಲೀಸರು ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದರು. ಈಗ ಅವರು ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಲಿ ಎಂದು ಹಾರೈಸಲಾಗುತ್ತಿದೆ.

ದೀಕ್ಷಾ ಅವರು ಮಾಡಿರುವ ಆರೋಪಗಳು ಅತ್ಯಂತ ಗಂಭೀರವಾಗಿದ್ದು, ಕೌಟುಂಬಿಕ ದೌರ್ಜನ್ಯದ ಮುಖವನ್ನ ತೋರಿಸುತ್ತಿವೆ. ಮದುವೆ ನಂತರ ಹೆಣ್ಣುಮಕ್ಕಳು ಎದುರಿಸುವ ಕಿರುಕುಳದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸತ್ಯಾಸತ್ಯತೆಯನ್ನ ಅರಿಯುವುದು ಬಹಳ ಮುಖ್ಯ. ಪೊಲೀಸರು ಈಗ ದೀಕ್ಷಾ ಅವರ ಹೇಳಿಕೆ ಪಡೆದು, ಅವರ ಅತ್ತೆ ಮಾವನ ವಿಚಾರಣೆ ನಡೆಸಬೇಕಿದೆ. ಎರಡೂ ಕಡೆಯ ವಾದಗಳ ಆಲಿಸಿ, ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಸಂಕಷ್ಟಕ್ಕೆ ಸಿಲುಕಿದ ಮಹಿಳೆಯ ಕೂಗು ಎಂದು ಕೆಲವರು ಇದನ್ನು ಕರೆಯುತ್ತಿದ್ದರೆ, 'ಸಂಪೂರ್ಣ ತನಿಖೆಯ ನಂತರವಷ್ಟೇ ಸತ್ಯ ಹೊರಬರಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಕೌಟುಂಬಿಕ ಕಲಹಗಳು ಹಾದಿರಂಪವಾಗಿ ಕೊನೆಗೆ ಆಕೆ ಆಸ್ಪತ್ರೆಯ ಹಾಸಿಗೆ ಹಿಡಿಯುವಂತಾದ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ.

Latest News