ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ನಿನ್ನೆ ನಡೆದ ಘಟನೆ ಕುರಿತು ಇದೀಗ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಡೀ ದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಅದ್ಭುತ ಜಯಂತಿ ಹಿಂದೂ ಸಮಾಜಕ್ಕೆ ಪ್ರೇರಣೆಯಾದಂತದ್ದು ಎಂದು ಅವರು ಹೇಳಿದ್ದಾರೆ. ಶಿವಾಜಿ ಮಹಾರಾಜರ ಜೀವನ ಮತ್ತು ಹೋರಾಟವು ಹಿಂದೂಸ್ತಾನದ ಉಳಿವಿಗೆ ಕಾರಣವಾಗಿದೆ ಎಂದು ಮುತಾಲಿಕ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗಲಕೋಟೆ ನಗರದಲ್ಲಿ ನಡೆದ ಮೆರವಣಿಗೆಯ ವೇಳೆ ಒಂದು ಮಸೀದಿಯ ಎದುರಿನಲ್ಲಿ ಕಲ್ಲು ಹಾಗೂ ಚಪ್ಪಲಿ ಎಸೆಯುವ ಘಟನೆ ನಡೆದಿದೆ. ಇದನ್ನು ಪ್ರಮೋದ ಮುತಾಲಿಕ್ ಅವರು ಅತ್ಯಂತ ಹೀನವಾದ ಕೃತ್ಯ ಎಂದು ಖಂಡಿಸಿದರು. ಅವರ ಮಾತಿನಲ್ಲಿ, ಇದು ಕೇವಲ ಮಸೀದಿಗೆ ಕಲ್ಲು ಎಸೆದ ಘಟನೆ ಅಲ್ಲ, ಹಿಂದೂ ಸಮಾಜದ ಮೇಲೆ ನಡೆದ ದ್ರೋಹ ಎಂದು ತೀವ್ರವಾಗಿ ಅವರು ಮಾಡಿದಂತಹ ಕೃತ್ಯವನ್ನು ಖಂಡಿಸಿ ಹೇಳಿದರು.
ಈ ಘಟನೆ ವೇಳೆಯೇ ಒಂದು ಕಲ್ಲು ಎಸ್‌ಪಿ ಅವರ ಮೇಲೆ ಬಿದ್ದಿದೆ ಎಂದು ವರದಿಯಾಗಿದೆ. ಮುತಾಲಿಕ್ ಅವರು ಹೇಳುವಂತೆ, ಅದು ಬೇರೆ ಕಡೆ ಬಿದ್ದಿದ್ದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೇ “ಏನೂ ಆಗಿಲ್ಲ” ಎಂದು ಹೇಳುತ್ತಿತ್ತು. ಈ ರೀತಿಯ ಘಟನೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಅವರು ಆರೋಪಿಸಿದರು.
ಮುತಾಲಿಕ್ ಅವರು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ, ಜೀಹಾದಿಗಳಿಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು. ಶಿವಾಜಿ ಮಹಾರಾಜರ ಮೇಲೆ ಕಲ್ಲು ಎಸೆಯುವುದು ಎಂದರೆ ಹಿಂದೂ ಸಮಾಜದ ಮೇಲೆ ಕಲ್ಲು ಎಸೆದಂತೆಯೇ ಆಗಿದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.
ಹಿಂದೂ ಸಮಾಜ ಒಟ್ಟಾಗಿ ಒಂದಾಗಿ ಈ ರೀತಿಯ ಮಾನಸಿಕತೆಗೆ ಉತ್ತರ ಕೊಡಬೇಕಾಗಿದೆ ಎಂದು ಮುತಾಲಿಕ್ ಕರೆ ನೀಡಿದರು. ಕಲ್ಲು ಎಸೆಯುವ ಕೈಗಳಿಗೆ ಬಲ ನೀಡಿರುವುದು ಹಿಂದೂ ಸಮಾಜವೇ ಆಗಿದೆ, ಆದ್ದರಿಂದ ಇಂತಹವರನ್ನು ಬಹಿಷ್ಕಾರ ಮಾಡುವ ಪ್ರಕ್ರಿಯೆ ನಡೆಯಬೇಕು ಎಂದು ಅವರು ಒತ್ತಿ ಹೇಳಿದರು.
ಶಿವಾಜಿಗೆ ಅವಮಾನವಾದರೆ ಅದು ಹಿಂದೂ ಸಮಾಜಕ್ಕೆ ಹಾಗೂ ದೇಶಕ್ಕೆ ಅವಮಾನವಾದಂತೆಯೇ. ಆದ್ದರಿಂದ ಪ್ರತಿಯೊಬ್ಬರೂ ಈ ಘಟನೆಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು, ವಿರೋಧಿಸಬೇಕು ಎಂದು ಮುತಾಲಿಕ್ ಅವರು ಹೇಳಿದ್ದಾರೆ ಎನ್ನಲಾಗಿದೆ. ಜೀಹಾದಿ ಮಾನಸಿಕತೆ ಹೊಂದಿರುವವರನ್ನು ಸಮಾಜದಿಂದ ದೂರ ಮಾಡಬೇಕು ಎಂದು ಅವರು ಹೇಳಿದರು.
ಮುತಾಲಿಕ್ ಅವರ ಹೇಳಿಕೆಯ ಪ್ರಕಾರ, ಇದು ಕೇವಲ ಎಸ್‌ಪಿಗೆ ಕಲ್ಲು ಹೊಡೆದ ಘಟನೆ ಅಲ್ಲ, ಹಿಂದೂ ಸಮಾಜಕ್ಕೆ ಅವಮಾನ ಮಾಡಿದ ಕೃತ್ಯ. ಇಂತಹ ಘಟನೆಗಳನ್ನು ಸುಮ್ಮನೆ ಬಿಡಬಾರದು, ಪ್ರತಿಯೊಬ್ಬರೂ ಖಂಡಿಸಬೇಕು, ವಿರೋಧಿಸಬೇಕು ಎಂದು ಅವರು ಮತ್ತೆ ಮತ್ತೆ ಸಾರಿ ಹೇಳಿದರು. ಈ ಹೇಳಿಕೆ ಧಾರವಾಡದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಕೃತ್ಯದ ಬೆಳವಣಿಗೆ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕು. ಕೃತ್ಯ ಎಸಗಿದವ್ರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ.