Dec 12, 2025 Languages : ಕನ್ನಡ | English

ರಾತ್ರಿ ತವರು ಮನೆಗೆ ಹೊರಟ ಮಹಿಳೆ ಮೇಲೆ ಅಟ್ಯಾಕ್ ಮಾಡಿದ ರಾಟ್‌ವೀಲರ್ ನಾಯಿ!! ಮುಂದಾಗಿದ್ದು ದುರಂತ

ದಾವಣಗೆರೆ ಜಿಲ್ಲೆಯ ಗೊಲ್ಲರಹಟ್ಟಿ ಹೊರವಲಯದಲ್ಲಿ ನಡೆದ ಭಯಾನಕ ಘಟನೆ ಒಂದು ಗ್ರಾಮಸ್ಥರ ಮನಸ್ಸು ಕಲುಷಿತಗೊಳಿಸಿದೆ. 38 ವರ್ಷದ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಎಂಬ ಮಹಿಳೆ ರಾಟ್‌ವೀಲರ್ ನಾಯಿಗಳ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನಿತಾ ರಾತ್ರಿ 11.30ರ ಸುಮಾರಿಗೆ ಮಕ್ಕಳೊಂದಿಗೆ ಜಗಳವಾಡಿ ತವರು ಮನೆಗೆ ಹೊರಟಿದ್ದರು. ಈ ವೇಳೆ ಗೊಲ್ಲರಹಟ್ಟಿಯ ಹೊರವಲಯದಲ್ಲಿ ಏಕಾಏಕಿ ಎರಡು ರಾಟ್‌ವೀಲರ್ ನಾಯಿಗಳು ದಾಳಿ ನಡೆಸಿದವು. ಸುಮಾರು 50 ಕಡೆ ಕಚ್ಚಿದ ಪರಿಣಾಮ ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಿಳೆ ಮೇಲೆ ಅಟ್ಯಾಕ್ ಮಾಡಿದ ರಾಟ್‌ವೀಲರ್ ನಾಯಿ!! ಮುಂದಾಗಿದ್ದು ದುರಂತ
ಮಹಿಳೆ ಮೇಲೆ ಅಟ್ಯಾಕ್ ಮಾಡಿದ ರಾಟ್‌ವೀಲರ್ ನಾಯಿ!! ಮುಂದಾಗಿದ್ದು ದುರಂತ

ಈ ನಾಯಿಗಳನ್ನು ಗ್ರಾಮದ ಹೊರಗೆ ಬಿಟ್ಟು ಹೋಗಿದ್ದಾಗುಂತುಕರು ಎಂದು ಶಂಕಿಸಲಾಗಿದೆ. ದಾಳಿಯ ನಂತರ ಗ್ರಾಮಸ್ಥರು ನಾಯಿಗಳನ್ನು ಸೆರೆಹಿಡಿದು ಹಗ್ಗ ಬಿಗಿದು ಕೋಲಿಗೆ ಕಟ್ಟಿದರು. ನಂತರ ಗ್ರಾಮದ ಬೀದಿಗಳಲ್ಲಿ ನಾಯಿಗಳನ್ನು ಎಳೆದುಕೊಂಡು ಹೋಗಿ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಿನ ಜಾವ 3.30ರ ವೇಳೆಗೆ ಗ್ರಾಮಸ್ಥರಿಗೆ ಈ ಘಟನೆ ಕುರಿತು ಮಾಹಿತಿ ದೊರಕಿತು. ತಕ್ಷಣ ಅನಿತಾರನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ ಶಿರಾ ಬಳಿ ಅವರು ಮೃತಪಟ್ಟರು. ಮೃತದೇಹವನ್ನು ತುಮಕೂರು ಜಿಲ್ಲೆಯ ಶಿರಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಈ ಘಟನೆ ಗ್ರಾಮಸ್ಥರಲ್ಲಿ ಭಾರೀ ಆಕ್ರೋಶ ಮೂಡಿಸಿದ್ದು, ಅಪಾಯಕಾರಿಯಾದ ನಾಯಿಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ. ಅನಿತಾರ ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ದಾವಣಗೆರೆಗೆ ರವಾನಿಸುವ ಸಾಧ್ಯತೆ ಇದೆ. ಈ ದುರಂತವು ಸಾರ್ವಜನಿಕ ಸುರಕ್ಷತೆ, ಪಶು ನಿಯಂತ್ರಣ ಮತ್ತು ಸಾರ್ವಜನಿಕ ಜವಾಬ್ದಾರಿಯ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

Latest News