Feb 16, 2026 Languages : ಕನ್ನಡ | English

'ಹೇಡಿ ಪುಕ್ಕಲ ಮುಖ್ಯಮಂತ್ರಿ' ಎಂದ ಪ್ರತಾಪ್ ಸಿಂಹ - ತೇಜಸ್ವಿ ಸೂರ್ಯ ಬಂಧನ ಬಳಿಕ ಹೇಳಿದ್ದೇನು?

ಬೆಲೆ ಏರಿಕೆ ವಿರುದ್ದ ಧ್ವನಿ ಎತ್ತಿದ್ದ ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಕಾರಣ ಮೆಟ್ರೋ ದರ ಏರಿಕೆ ವಿರುದ್ದ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಕೇಳಿ ಬಂದಿದೆ. ಜನರ ಪರವಾಗಿ ಹೋರಾಟ ಮಾಡುತ್ತಿದ್ದ ಯುವ ಸಂಸದನನ್ನು ಬಂಧಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ತೀವ್ರ ಟೀಕೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ತೀವ್ರ ಟೀಕೆ

ಹೌದು, ಈ ಘಟನೆಯ ಕುರಿತು ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಸಿದ್ದರಾಮಯ್ಯ ಎಷ್ಟು ಪುಕ್ಕಲ, ಹೇಡಿ ಸಿಎಂ ಎಂದು ಟೀಕಿಸಿದರು. ಪ್ರತಾಪ್ ಸಿಂಹ ಅವರು ಒಂದು ವರ್ಷದಲ್ಲಿ ಎರಡು ಬಾರಿ ಮೆಟ್ರೋ ದರ ಏರಿಕೆ ಮಾಡಿರುವುದನ್ನು ಪ್ರಶ್ನಿಸಿದರು. ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುಧಾನ ಬರುತ್ತಿದ್ದರೂ, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುಧಾನ ನೀಡದೆ ದರ ಏರಿಕೆ ಮಾಡಿದೆ ಎಂದು ಆರೋಪಿಸಿದರು.

ತೇಜಸ್ವಿ ಸೂರ್ಯ ಅವರ ಹೋರಾಟದಿಂದ ಜನರಿಗೆ ನ್ಯಾಯ ದೊರಕಿದೆ ಎಂದು ಪ್ರತಾಪ್ ಸಿಂಹ ಹೇಳಿದರು. ಆದರೆ ಸರ್ಕಾರವು ವೈಫಲ್ಯವನ್ನು ತೋರಿಸಿದವರನ್ನು ಹತ್ತಿಕ್ಕುತ್ತಿದೆ ಎಂಬುದಕ್ಕೆ ಈ ಬಂಧನವೇ ಸಾಕ್ಷಿ ಎಂದು ಅವರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಅವರು 17 ಬಜೆಟ್ ಮಂಡನೆ ಮಾಡಿದರೂ, ಅರ್ಥಿಕ ವ್ಯವಸ್ಥೆಯ ಗಂಧ ಗಾಳಿ ಗೊತ್ತಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು. ಬರೀ ಸಭೆ ಸಮಾರಂಭಗಳಲ್ಲಿ ಉಡಾಫೆ ಮಾತನಾಡುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈ ಘಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ತೇಜಸ್ವಿ ಸೂರ್ಯ ಬಂಧನ ಮತ್ತು ಪ್ರತಾಪ್ ಸಿಂಹ ವಾಗ್ದಾಳಿ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಹಿ ಮಾಡಿದೆ.

Latest News