Feb 16, 2026 Languages : ಕನ್ನಡ | English

ಚಿಕ್ಕಮಗಳೂರು: ದ್ವೇಷ ಭಾಷಣ ಕಾಯ್ದೆ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ಪ್ರತಿಕ್ರಿಯೆ!!

ಚಿಕ್ಕಮಗಳೂರು: ರಾಜ್ಯದಲ್ಲಿ ಜಾರಿಗೊಳಿಸಲು ಯತ್ನಿಸಲಾಗಿದ್ದ ದ್ವೇಷ ಭಾಷಣ ಕಾಯ್ದೆ ಕುರಿತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಅವರು ಚಿಕ್ಕಮಗಳೂರಿನಲ್ಲಿ ಮಾತನಾಡಿ, “ಈ ಕಾಯ್ದೆ ಪತ್ರಿಕಾ ಮಾಧ್ಯಮವನ್ನ ಕಟ್ಟಿ ಹಾಕುವಂತದ್ದು. ಪ್ರತಿಪಕ್ಷಗಳ ಹಕ್ಕನ್ನ ಸದೆಬಡಿಯುವ ಹುನ್ನಾರ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಮಸೂದೆ ಆಗುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ
ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ

ರಾಜ್ಯಪಾಲರು ಈ ಅಂಶಗಳನ್ನು ಗಮನಿಸಿ ಒಳ್ಳೆಯ ತೀರ್ಮಾನ ಕೈಗೊಂಡಿರುವುದನ್ನು ಅವರು ಸ್ವಾಗತಿಸಿದರು. “ರಾಜ್ಯಪಾಲರ ಘನತೆಯನ್ನ ತಗ್ಗಿಸುವ ಕೆಲಸ ಸರ್ಕಾರದಿಂದ ಆಗಬಾರದು. ಅವರನ್ನು ಮುಜುಗರಕ್ಕೆ ಸಿಲುಕಿಸುವ ಅಂಶಗಳನ್ನು ಸೇರಿಸುವುದು ಸರಿಯಲ್ಲ. ಅವರು ಒಂದು ವಾಕ್ಯ ಓದುತ್ತಾರೋ, ಒಂದು ಪ್ಯಾರಾ ಓದುತ್ತಾರೋ, ಅಥವಾ ಒಂದು ಪದದಲ್ಲಿ ಮುಗಿಸುತ್ತಾರೋ ಅದು ಅವರ ನಿರ್ಧಾರ. ಆದರೆ ಮುಜುಗರಕ್ಕೀಡು ಮಾಡುವ ಅಂಶಗಳನ್ನು ನೋಡಿದರೂ, ತಮ್ಮ ಘನತೆಯನ್ನು ಉಳಿಸಿಕೊಂಡಿದ್ದಾರೆ” ಎಂದು ನಿಖಿಲ್ ಹೇಳಿದರು.

ಅವರು ಮುಂದುವರಿದು, “ರಾಜ್ಯಪಾಲರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರವು ಇಂತಹ ನಿರ್ಧಾರಗಳನ್ನು ಒತ್ತಾಯಿಸುವ ಬದಲು, ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು” ಎಂದು ಹೇಳಿದರು. ಈ ಹೇಳಿಕೆ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಉಳಿಸುವ ಅಗತ್ಯವನ್ನು ನೆನಪಿಸುವಂತಿದೆ. ನಿಖಿಲ್ ಕುಮಾರಸ್ವಾಮಿ ಅವರ ಮಾತುಗಳು, ರಾಜ್ಯಪಾಲರ ನಿರ್ಧಾರಕ್ಕೆ ಬೆಂಬಲ ನೀಡುವುದರ ಜೊತೆಗೆ, ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತವೆ.

Latest News