May 9, 2026 Languages : ಕನ್ನಡ | English

ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳ 'ಓವರ್ ಸ್ಮಾರ್ಟ್' ಆಟ - ಪೊಲೀಸರ ಮೇಲೆ ಕೈ ಮಾಡಿದ ಘಟನೆ!! ಕಾರಣವೇನು?

ವಿದ್ಯಾಭ್ಯಾಸ ಮಾಡಿ ಬುದ್ಧಿವಂತರಾಗಬೇಕಿದ್ದ ವಿದ್ಯಾರ್ಥಿಗಳು ಈಗ ಅಡ್ಡಾದಿಡ್ಡಿ ಪುಂಡಾಟಿಕೆ ಮಾಡಿ ಪೊಲೀಸರ ಅತಿಥಿಯಾಗುವ ಹಂತಕ್ಕೆ ತಲುಪಿದ್ದಾರೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬೈಕ್ ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೇ ಹ*ಲ್ಲೆ ಮಾಡಿರುವ ಘಟನೆ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಪೊಲೀಸರ ಮೇಲೆ ದರ್ಪ;
ಪೊಲೀಸರ ಮೇಲೆ ದರ್ಪ;

ಏನಿದು ಘಟನೆ? ಬೈಕ್ ಸೈಲೆನ್ಸರ್ ಕಿರಿಕ್!

ನಾಗಾರ್ಜುನ ಕಾಲೇಜಿನ ಬಳಿ ಕೆಲವು ವಿದ್ಯಾರ್ಥಿಗಳು ತಮ್ಮ ಬೈಕ್‌ಗಳಿಗೆ ಆಲ್ಟರ್‌ ಮಾಡಿಸಿದ ಸೈಲೆನ್ಸರ್ ಹಾಕಿಕೊಂಡು ಕರ್ಕಶ ಶಬ್ದ ಮಾಡಾಕೊಂಡು ಓಡಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ಗಮನಿಸಿದ ನಂದಿಗಿರಿಧಾಮ ಪೊಲೀಸ್ ಠಾಣೆಯ ಎಎಸ್ಐ ಗಂಗರಾಜು ಮತ್ತು ಪಿಸಿ ಗಂಗರಾಜು ಅವರು, "ಈ ರೀತಿ ಸೌಂಡ್ ಮಾಡಬೇಡಿ, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ" ಎಂದು ಬುದ್ಧಿ ಹೇಳಿ ವಾರ್ನ್ ಮಾಡಲು ಹೋಗಿದ್ದಾರೆ.

ಪೊಲೀಸರ ಮೇಲೇ ದರ್ಪ ತೋರಿಸಿದ ವಿದ್ಯಾರ್ಥಿಗಳು!

ಪೊಲೀಸರು ಬುದ್ಧಿ ಹೇಳಿದ್ದನ್ನೇ ತಪ್ಪಾಗಿ ಭಾವಿಸಿದ ರಾಜೇಶ್, ಜಸ್ವಂತ್ ಮತ್ತು ಅವರ ಏಳೆಂಟು ಜನ ಸ್ನೇಹಿತರು ಗುಂಪು ಕಟ್ಟಿಕೊಂಡು ಪೊಲೀಸರ ಮೇಲೆ ತಿರುಗಿಬಿದ್ದಿದ್ದಾರೆ. ಖಾಕಿ ಡ್ರೆಸ್‌ನಲ್ಲಿದ್ದ ಎಎಸ್ಐ ಮತ್ತು ಪಿಸಿ ಮೇಲೆ ದರ್ಪ ತೋರಿಸಿದ್ದಷ್ಟೇ ಅಲ್ಲದೆ, ಅವರ ಮೇಲೆ ಹ*ಲ್ಲೆ ಕೂಡ ಮಾಡಿದ್ದಾರೆ. "ನಮ್ಮನ್ನೇ ಪ್ರಶ್ನೆ ಮಾಡ್ತೀರಾ?" ಎಂಬ ಹುಂಬತನ ಈ ವಿದ್ಯಾರ್ಥಿಗಳ ತಲೆಗೇರಿದ್ದು, ಕಾನೂನು ರಕ್ಷಕರ ಮೇಲೇ ಕೈ ಮಾಡೋ ಮಟ್ಟಕ್ಕೆ ಹೋಗಿದ್ದಾರೆ.

ನಂದಿಗಿರಿಧಾಮ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಈ ಪುಂಡಾಟಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ನಂದಿಗಿರಿಧಾಮ ಪೊಲೀಸರು, ಈಗ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮುಖ್ಯವಾಗಿ ರಾಜೇಶ್ ಮತ್ತು ಜಸ್ವಂತ್ ಎಂಬ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದು, ಹ*ಲ್ಲೆ ಮಾಡಿದ ಇತರ ವಿದ್ಯಾರ್ಥಿಗಳಿಗೂ ಪೊಲೀಸರು ಬಲೆ ಬೀಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಮತ್ತು ಪೊಲೀಸರ ಮೇಲೆ ಹ*ಲ್ಲೆ ಮಾಡಿದ ಗಂಭೀರ ಆರೋಪ ಇವರ ಮೇಲಿದೆ.

ಕೆರಿಯರ್ ಹಾಳು ಮಾಡಿಕೊಳ್ಳುತ್ತಿರುವ ಯುವಜನತೆ!

ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳು ಶೋಕಿಗಾಗಿ ಬೈಕ್ ಶಬ್ದ ಮಾಡುವುದು ಮತ್ತು ಅದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಹ*ಲ್ಲೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಒಮ್ಮೆ ಎಫ್‌ಐಆರ್ ದಾಖಲಾದರೆ ಮುಂದಿನ ಕೆರಿಯರ್ ಮತ್ತು ಕೆಲಸ ಸಿಗುವುದು ಎಷ್ಟು ಕಷ್ಟ ಎಂಬ ಅರಿವಿಲ್ಲದೆ ಈ ವಿದ್ಯಾರ್ಥಿಗಳು ಇಂತಹ ಕೃತ್ಯಕ್ಕೆ ಕೈ ಹಾಕಿದ್ದಾರೆ.

ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಮೇಲೆಯೇ ಕೈ ಮಾಡಿದ ಇವರಿಗೆ ಕಾನೂನಿನ ಬಿಸಿ ತಾಕಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಯುವಕರಲ್ಲಿ ಮನವಿ: ಶೋಕಿಗಾಗಿ ಅಥವಾ ಅಹಂಕಾರಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಒಂದು ತಪ್ಪು ನಿರ್ಧಾರ ನಿಮ್ಮ ಇಡೀ ಭವಿಷ್ಯವನ್ನೇ ಕತ್ತಲೆಗೆ ತಳ್ಳಬಹುದು! 

Latest News