Apr 9, 2026 Languages : ಕನ್ನಡ | English

ಗುರು-ಶಿಷ್ಯೆ ಸಂಬಂಧದ ನಡುವೆ ಹೊಸ ಚರ್ಚೆ - ಪ್ರೊಫೆಸರ್ ಮತ್ತು ಪಿಎಚ್‌ಡಿ ವಿದ್ಯಾರ್ಥಿನಿಯ ಫೋಟೋ ಬಾರಿ ವೈರಲ್!!

ಸೋಷಿಯಲ್ ಮೀಡಿಯಾ ಅಂದ ಮೇಲೆ ಅಲ್ಲಿ ದಿನಕ್ಕೊಂದು ವಿಚಿತ್ರ ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈಗ ಬಿಹಾರದ ಪೂರ್ಣಿಯಾ ಯೂನಿವರ್ಸಿಟಿಯಿಂದ ಬಂದಿರುವ ಒಂದು ಫೋಟೋ ಮಾತ್ರ ಇಡೀ ಇಂಟರ್ನೆಟ್ ಲೋಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡ್ತಿದೆ. ಒಬ್ಬ ವಯಸ್ಸಾದ ಪ್ರೊಫೆಸರ್ ಮತ್ತು ಅವರ ಕೈಕೆಳಗೆ ಪಿಎಚ್‌ಡಿ ಮಾಡುತ್ತಿರುವ ಯುವ ವಿದ್ಯಾರ್ಥಿನಿಯ ಫೋಟೋ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಗುರು-ಶಿಷ್ಯೆಯ ಫೋಟೋ ನೋಡಿ ನೆಟ್ಟಿಗರ ಆಕ್ರೋಶ; | Photo Credit: https://x.com/Nishakotac0
ಗುರು-ಶಿಷ್ಯೆಯ ಫೋಟೋ ನೋಡಿ ನೆಟ್ಟಿಗರ ಆಕ್ರೋಶ; | Photo Credit: https://x.com/Nishakotac0

'ಲೈವ್ ಸಿಟೀಸ್' ವರದಿ ಮಾಡಿರುವ ಪ್ರಕಾರ, ಈ ಪ್ರೊಫೆಸರ್ ಸಾಹೇಬರು ಮತ್ತು ವಿದ್ಯಾರ್ಥಿನಿ ಹೋಟೆಲ್‌ವೊಂದರಲ್ಲಿ ಆರಾಮವಾಗಿ ಕುಳಿತು ದೋಸೆ ಸವಿಯುತ್ತಿರುವ ಫೋಟೋ ಇದೀಗ ಹರಿದಾಡುತ್ತಿದೆ. ಫೋಟೋದಲ್ಲಿ ಇಬ್ಬರೂ ಸಖತ್ ಖುಷಿಯಾಗಿಯೇ ಕಾಣಿಸುತ್ತಿದ್ದಾರೆ. ಆದರೆ ಜನರನ್ನು ಕೆರಳಿಸಿರುವುದು ಅವರ ಕುಳಿತುಕೊಂಡಿರುವ ರೀತಿ. ಪ್ರೊಫೆಸರ್ ವಿದ್ಯಾರ್ಥಿನಿಯ ಹೆಗಲ ಮೇಲೆ ಕೈ ಹಾಕಿದ್ದರೆ, ವಿದ್ಯಾರ್ಥಿನಿಯು ಪ್ರೊಫೆಸರ್ ತೊಡೆಯ ಮೇಲೆ ಕೈ ಇಟ್ಟುಕೊಂಡು ಪೋಸ್ ನೀಡಿದ್ದಾರೆ. ನೋಡಲು ಇಬ್ಬರೂ ತುಂಬಾ ಆಪ್ತವಾಗಿದ್ದಾರೆ ಎಂಬುದು ಫೋಟೋ ನೋಡಿದ ಯಾರಿಗಾದರೂ ಅರ್ಥವಾಗುವಂತಿದೆ.

ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. "ಇದು ಗುರು ಮತ್ತು ಶಿಷ್ಯೆಯ ನಡುವೆ ಇರಬೇಕಾದ ಗೌರವದ ಸಂಬಂಧವೇ?" ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು, "ಮರಿಮೊಮ್ಮಕ್ಕಳ ಜೊತೆ ಆಟವಾಡಬೇಕಾದ ವಯಸ್ಸಿನಲ್ಲಿ, ಈ ಪ್ರೊಫೆಸರ್ ಸಾಹೇಬರಿಗೆ ರೊಮ್ಯಾಂಟಿಕ್ ಆಸೆಗಳು ಇನ್ನೂ ಜೀವಂತವಾಗಿವೆಯೇ?" ಎಂದು ವ್ಯಂಗ್ಯವಾಡುತ್ತಿದ್ದಾರೆ.

ಇವರಿಬ್ಬರ ನಡುವೆ ಕಳೆದ ಕೆಲವು ಸಮಯದಿಂದ ಆಪ್ತ ಸಂಬಂಧವಿದೆ ಎಂಬ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ. ಆದರೆ, ಯೂನಿವರ್ಸಿಟಿ ಕಡೆಯಿಂದಾಗಲಿ ಅಥವಾ ಇಬ್ಬರು ವ್ಯಕ್ತಿಗಳಿಂದಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

ಈ ಫೋಟೋ ನೋಡಿದ ಮೇಲೆ ಸಾರ್ವಜನಿಕ ವಲಯದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಪಿಎಚ್‌ಡಿ ಅಂತಹ ದೊಡ್ಡ ಮಟ್ಟದ ಪದವಿ ಪಡೆಯುವಾಗ ಪ್ರೊಫೆಸರ್‌ಗಳ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಅಂತಹ ಸಮಯದಲ್ಲಿ ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಇಂತಹ ಸಂಬಂಧಗಳಿಗೆ ಒಪ್ಪಿಕೊಳ್ಳುತ್ತಾರೆಯೇ? ಅಥವಾ ಇದು ಇಬ್ಬರ ಪರಸ್ಪರ ಒಪ್ಪಿಗೆಯಿಂದ ನಡೆಯುತ್ತಿರುವ ವಿಷಯವೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಏನೇ ಇರಲಿ, ಶಿಕ್ಷಣ ನೀಡುವ ಪವಿತ್ರ ಸ್ಥಾನದಲ್ಲಿರುವವರು ಇಂತಹ ನಡವಳಿಕೆ ತೋರುವುದು ಶೈಕ್ಷಣಿಕ ಕ್ಷೇತ್ರಕ್ಕೆ ಶೋಭೆ ತರುವಂತದ್ದಲ್ಲ ಎಂಬುದು ಬಹುತೇಕರ ಅಭಿಪ್ರಾಯ.

ಈ ಕಾಲದಲ್ಲಿ ಯಾರು ಯಾರ ಜೊತೆ ಹೇಗಿರಬೇಕು ಎಂಬುದು ಅವರವರ ವೈಯಕ್ತಿಕ ವಿಚಾರವಾಗಿದ್ದರೂ, ಒಂದು ಗೌರವಯುತ ಹುದ್ದೆಯಲ್ಲಿರುವಾಗ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ ಬಹಳ ಮುಖ್ಯವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧವು ಮಿತಿ ಮೀರುತ್ತಿರುವುದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಏನು? ಇದು ವೈಯಕ್ತಿಕ ಸ್ವಾತಂತ್ರ್ಯವೇ ಅಥವಾ ಶಿಕ್ಷಣ ಸಂಸ್ಥೆಯ ಶಿಸ್ತಿನ ಉಲ್ಲಂಘನೆಯೇ? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Latest News