ಬಿಗ್ ಬಾಸ್ ಸೀಸನ್ 12 ರಲ್ಲಿ ಸ್ಪರ್ಧಿಯಾಗಿದ್ದ ಸತೀಶ್ ಇದೀಗ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ತಮ್ಮ ಮತ್ತು ತಮ್ಮ ತಾಯಿಗೆ ಬಂದಿರುವ ಜೀವಹಾನಿ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಕುರಿತು ಅವರು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಸತೀಶ್ ಅವರ ಹೇಳಿಕೆಯ ಪ್ರಕಾರ, ಇತ್ತೀಚೆಗೆ ಕೆಲವು ಇನ್ಸ್ಟಾಗ್ರಾಂ ಖಾತೆ ಹೋಲ್ಡರ್‌ಗಳು ಅವರ ವಿರುದ್ಧ ದ್ವೇಷಪೂರ್ಣ ವಿಡಿಯೋಗಳನ್ನು ಅಪ್ಲೋಡ್ ಮಾಡಿ, @sathishcadaboms ಎಂಬ ಅವರ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.
ವಿಶೇಷವಾಗಿ Yuva Samrat (ಯುವಕನ್ನಡಿಗ) ಮತ್ತು Yalahanka_guru ಎಂಬ ಖಾತೆಗಳಿಂದ ಬಂದ ವಿಡಿಯೋಗಳಲ್ಲಿ ಸತೀಶ್‌ಗೆ ನೇರವಾಗಿ ಜೀವಹಾನಿ ಬೆದರಿಕೆ ಹಾಕುವಂತಹ ಶಬ್ಧಗಳನ್ನು ಬಳಸಲಾಗಿದೆ.ಇಷ್ಟೇ ಅಲ್ಲದೆ, ಆ ಖಾತೆ ಹೋಲ್ಡರ್‌ಗಳು ಸತೀಶ್ ಅವರ ಮೊಬೈಲ್ ನಂಬರ್‌ಗಳನ್ನು ಬೇರೆಯವರಿಗೆ ಹಂಚಿಕೊಂಡಿದ್ದಾರೆಂದು ಆರೋಪಿಸಲಾಗಿದೆ. ಇದರಿಂದಾಗಿ ಅನೇಕ ಅಜ್ಞಾತ ವ್ಯಕ್ತಿಗಳಿಂದ ಸತೀಶ್ ಹಾಗೂ ಅವರ ತಾಯಿಗೆ ಕರೆಗಳು ಬಂದು, ಅವಾಚ್ಯ ಶಬ್ಧಗಳಿಂದ ನಿಂದನೆ ಹಾಗೂ ಜೀವಹಾನಿ ಬೆದರಿಕೆ ನೀಡಲಾಗಿದೆ. ಈ ಘಟನೆಗಳಿಂದ ಸತೀಶ್ ಅವರ ತಾಯಿ ಕೂಡ ಭಯಭೀತರಾಗಿದ್ದಾರೆ ಎಂದು ಕೇಳಿ ಬಂದಿದೆ.
ಹೌದು ಸತೀಶ್ ತಮ್ಮ ದೂರುದಲ್ಲಿ, ಈ ರೀತಿಯ ಕೃತ್ಯಗಳು ಕೇವಲ ವೈಯಕ್ತಿಕ ಬೆದರಿಕೆ ಮಾತ್ರವಲ್ಲದೆ, ತಮ್ಮ ಬಿಸಿನೆಸ್ ಹಾಳು ಮಾಡುವ ಉದ್ದೇಶದಿಂದ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ಮಾನಸಿಕ ಕಿರುಕುಳದಿಂದ ತಾವು ಮತ್ತು ತಮ್ಮ ಕುಟುಂಬ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆಂದು ಅವರು ಸ್ಪಷ್ಟಪಡಿಸಿದ್ದಾರೆ. ಸಮಾಜ ಮಾಧ್ಯಮದಲ್ಲಿ ದ್ವೇಷ ಶಬ್ಧಗಳ ಬಳಕೆ, ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ನೇರ ಬೆದರಿಕೆ ಹಾಕುವುದು ಗಂಭೀರ ಅಪರಾಧವೆಂದು ಕಾನೂನು ತಜ್ಞರು ಹೇಳುತ್ತಾರೆ.
ಈ ಹಿನ್ನೆಲೆಯಲ್ಲಿ ಸತೀಶ್ ಅವರು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೊಂಡಿದ್ದಾರೆ. ಹೌದು ಒಟ್ಟಿನಲ್ಲಿ ಹೇಳಬೇಕು ಅಂದರೆ, ಬಿಗ್ ಬಾಸ್ ಸ್ಪರ್ಧಿ ಸತೀಶ್ ಎದುರಿಸುತ್ತಿರುವ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ನಡೆಯುವ ಆನ್‌ಲೈನ್ ದ್ವೇಷ ಮತ್ತು ಬೆದರಿಕೆಗಳ ಗಂಭೀರತೆಯನ್ನು ಮತ್ತೊಮ್ಮೆ ಹೊರಹಾಕಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.