ನಾಳೆ ಆಫೀಸ್‌ಗೆ ಹೋಗೋಕೆ ಅಥವಾ ಸಿಟಿ ಕಡೆ ಏನಾದ್ರೂ ಕೆಲಸಕ್ಕೆ ಹೋಗೋಕೆ ಪ್ಲಾನ್ ಮಾಡ್ತಾ ಇದ್ದೀರಾ? ಹಾಗಿದ್ರೆ ಈ ನ್ಯೂಸ್ ಬಿಡದೆ ಪೂರ್ತಿ ಓದಿಬಿಡಿ. ಯಾಕಂದ್ರೆ ನಾಳೆ (ಜೂನ್ 3) ಲೋಕಭವನದ ಗಾಜಿನ ಮನೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮ ನಡೀತಾ ಇದೆ. ಈ ಹೈಪ್ರೊಫೈಲ್ ಇವೆಂಟ್‌ಗೆ ದೇಶ-ವಿದೇಶದ ವಿಐಪಿಗಳು, ರಾಜಕಾರಣಿಗಳು ಮತ್ತು ಲಕ್ಷಾಂತರ ಜನ ಬರೋ ಸಾಧ್ಯತೆ ಇದೆ.
ಇಷ್ಟೊಂದು ದೊಡ್ಡ ಪ್ರೋಗ್ರಾಂ ಇರೋದ್ರಿಂದ ಸಿಟಿಲಿ ಟ್ರಾಫಿಕ್ ಜಾಮ್ ಆಗಬಾರದು ಅಂತ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದು ಭರ್ಜರಿ ಪ್ಲಾನ್ ರೆಡಿ ಮಾಡಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಈ ರಸ್ತೆಗಳಲ್ಲಿ ನಾಳೆ ಸಂಚಾರ ನಿಷೇಧ (VVIP ವಾಹನಗಳಿಗೆ ಮಾತ್ರ ಎಂಟ್ರಿ):
ನಾಳೆ ಮಧ್ಯಾಹ್ನದಿಂದಲೇ ಕೆಳಗಿನ ರಸ್ತೆಗಳಲ್ಲಿ ನಾರ್ಮಲ್ ಪಬ್ಲಿಕ್ ಗಾಡಿ ತಗೊಂಡು ಹೋಗೋ ಹಾಗಿಲ್ಲ, ಕಂಪ್ಲೀಟ್ ಬಂದ್ ಇರುತ್ತೆ:
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್‌ವರೆಗೆ ಮತ್ತು ಸಿ.ಟಿ.ಓ. ಸರ್ಕಲ್‌ನಿಂದ ಲೋಕಭವನದವರೆಗೆ.
- ಬಾಳೇಕುಂದ್ರಿ ಜಂಕ್ಷನ್‌ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಹೋಗೋ ಹಾಗಿಲ್ಲ.
- ಡಾ. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್‌ನಿಂದ ಕಾಫಿಬೋರ್ಡ್ ಜಂಕ್ಷನ್‌ವರೆಗೆ.
- ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್‌ವರೆಗೆ ಹಾಗೂ ಜೆ.ಡಿ.ಎಸ್ ಕ್ರಾಸ್‌ನಿಂದ ಸುಬ್ಬಣ್ಣ ಜಂಕ್ಷನ್‌ವರೆಗೆ.
- ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಕಡೆಗೆ ಮತ್ತು ಸೆಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಓ. ಜಂಕ್ಷನ್ ಕಡೆಗೆ.
ಟೆನ್ಷನ್ ಬೇಡ, ಪರ್ಯಾಯ ಮಾರ್ಗಗಳು (Alternative Routes) ಇಲ್ಲಿದೆ:
ಒಂದು ವೇಳೆ ನೀವು ಆ ಕಡೆ ಹೋಗಲೇಬೇಕು ಅಂದ್ರೆ ಪೊಲೀಸರು ಹೇಳಿರೋ ಈ ರೂಟ್‌ಗಳನ್ನು ಫಾಲೋ ಮಾಡಿ:
ಕಬ್ಬನ್ ರಸ್ತೆ ಕಡೆಯಿಂದ ಹೋಗೋರು: ಬಿ.ಆರ್.ವಿ. ಜಂಕ್ಷನ್ ಹತ್ತಿರ ಶಿವಾಜಿನಗರ ಕಡೆಗೆ ರೈಟ್ ಟರ್ನ್ ತಗೊಳ್ಳಿ ಅಥವಾ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಲೆಫ್ಟ್ ಟರ್ನ್ ತಗೊಂಡು ಹೋಗಿ.
ಶಿವಾಜಿನಗರ ಕಡೆಯಿಂದ ಬರೋರು: ಬಾಳೇಕುಂದ್ರಿ ಜಂಕ್ಷನ್ ಹತ್ತಿರ ಕನ್ನಿಂಗ್‌ಹ್ಯಾಮ್ ರಸ್ತೆ ಮುಖಾಂತರ ಮೂವ್ ಆಗಿ.
ಕೆ.ಆರ್. ಸರ್ಕಲ್ ಕಡೆಯಿಂದ ಹೋಗೋರು: ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಹೋಗೋ ಬದಲು ನೃಪತುಂಗ ರಸ್ತೆ ಬಳಸಿ.
ರೇಸ್‌ಕೋರ್ಸ್ ರಸ್ತೆ ಕಡೆಯವರು: ಟ್ರಿಲೈಟ್ ಜಂಕ್ಷನ್‌ನಿಂದ ಶಿವಾನಂದ ಜಂಕ್ಷನ್ ಮೂಲಕ ಎಂ.ಜಿ. ರೋಡ್ ಅಥವಾ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಲೆಫ್ಟ್ ಟರ್ನ್ ಮಾಡಿ ಹೋಗಿ.
ಏರ್‌ಪೋರ್ಟ್ ಕಡೆಗೆ ಹೋಗೋರು: ಹಲಸೂರು ಮತ್ತು ಹಳೇ ಏರ್‌ಪೋರ್ಟ್ ಕಡೆಯಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಹೋಗೋರು ಬಿ.ಆರ್.ವಿ ಜಂಕ್ಷನ್ ಹತ್ತಿರ ರೈಟ್ ಟರ್ನ್ ತಗೊಂಡು, ಶಿವಾಜಿನಗರ ಬಸ್‌ಸ್ಟ್ಯಾಂಡ್ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರ ಹಿಡಿದು ಹೆಬ್ಬಾಳ ಕಡೆಗೆ ಹೋಗಿ.
ಹಳೇ ಮದ್ರಾಸ್ ರಸ್ತೆ ಕಡೆಯವರು: ಹೆಬ್ಬಾಳಕ್ಕೆ ಹೋಗಲು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ತಲುಪಿ ಅಲ್ಲಿಂದ ಔಟರ್ ರಿಂಗ್ ರೋಡ್ ಬಳಸಿ.
ಇಲ್ಲಿ ಗಾಡಿ ನಿಲ್ಲಿಸಿದ್ರೆ ಟೋಯಿಂಗ್ ಗ್ಯಾರಂಟಿ! (ನೋ ಪಾರ್ಕಿಂಗ್ ಝೋನ್)
ನಾಳೆ ಈ ಕೆಳಗಿನ ರಸ್ತೆಗಳ ಇಕ್ಕೆಲಗಳಲ್ಲಿ ಗಾಡಿಗಳನ್ನು ಪಾರ್ಕ್ ಮಾಡುವುದನ್ನು ಕಂಪ್ಲೀಟ್ ಆಗಿ ಬ್ಯಾನ್ ಮಾಡಲಾಗಿದೆ:
ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ (ಬಾಳೇಕುಂದ್ರಿಯಿಂದ ಕೆ.ಆರ್.ವೃತ್ತ), ಲೋಕಭವನ ರಸ್ತೆ, ಎಲ್.ಹೆಚ್.ರಸ್ತೆ, ಕ್ಲೀನ್ಸ್ ರಸ್ತೆ, ಪ್ಯಾಲೇಸ್ ರಸ್ತೆ (ಮೈಸೂರು ಬ್ಯಾಂಕ್‌ನಿಂದ ವಸಂತನಗರ ಕೆಳಸೇತುವೆ), ದೇವರಾಜ ಅರಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಪಾರ್ಕ್‌ಹೌಸ್ ರಸ್ತೆ, ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳು, ಮಿಲ್ಲರ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ, ಕಸ್ತೂರಿಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ ಮತ್ತು ಕಬ್ಬನ್ ರಸ್ತೆ.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 2, 2026
ಹಾಗಾದ್ರೆ ಪಾರ್ಕಿಂಗ್ ಮಾಡೋದು ಎಲ್ಲಿ?
ಕಾರ್ಯಕ್ರಮದ ಪಾಸ್ ಇರೋರಿಗೆ: ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್, ವಿಕಾಸಸೌಧದ ಸುತ್ತಮುತ್ತ, ರಾಜಭವನ ಹಿಂಭಾಗದ ಎಲ್.ಹೆಚ್. ಪಾರ್ಕಿಂಗ್ ಮತ್ತು ತಾರಾಲಯದ ಆವರಣ.
ಪಾಸ್ ಇಲ್ಲದ ಸಾರ್ವಜನಿಕರಿಗೆ: ಕೊಂಡಜ್ಜಿ ಭವನ ಆವರಣ, ಶಿವಾಜಿನಗರ ಬಸ್‌ಸ್ಟ್ಯಾಂಡ್ ಮೇಲಿರೋ ಮಲ್ಟಿಲೆವೆಲ್ ಪಾರ್ಕಿಂಗ್, ಕಂಠೀರವ ಸ್ಟೇಡಿಯಂ, ಯು.ಬಿ. ಸಿಟಿ, ಕಾರ್ಪೊರೇಷನ್ ಆಫೀಸ್ ಆವರಣ, ಗವರ್ನಮೆಂಟ್ ಆರ್ಟ್ಸ್ ಕಾಲೇಜು ಗ್ರೌಂಡ್ ಮತ್ತು ಪ್ಯಾಲೇಸ್ ಮೈದಾನದ ಗೇಟ್ ನಂ. 2, 3 ಮತ್ತು 4.
ಹೆವಿ ವೆಹಿಕಲ್ಸ್‌ಗೆ ನೋ ಎಂಟ್ರಿ!
ನಾಳೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ಸಿಟಿ ಒಳಗಡೆ ಯಾವುದೇ ಲಾರಿ, ಟ್ರಕ್ ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಾಳೆ ಏನಾದ್ರೂ ಮೆಜೆಸ್ಟಿಕ್, ಶಿವಾಜಿನಗರ ಅಥವಾ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಏರಿಯಾಗಳಿಗೆ ಹೋಗೋ ಪ್ಲಾನ್ ಇದ್ರೆ ಈ ಮ್ಯಾಪ್ ನೆನಪಿನಲ್ಲಿರಲಿ.