ಬೆಂಗಳೂರು ನಗರದಲ್ಲಿ ಮತ್ತೊಂದು ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ನಾಯಂಡಹಳ್ಳಿ ನಿವಾಸಿಯಾಗಿರುವ ಮೊಹಮ್ಮದ್ ಹನೀಫ್ (33) ಎಂಬ NGO ವ್ಯವಸ್ಥಾಪಕನನ್ನು DCRE ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ಥೆಯೊಬ್ಬಳಿಗೆ ಕೌಟುಂಬಿಕ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ, ಬಳಿಕ ಅನಗತ್ಯ ಕಿರುಕುಳ ಹಾಗೂ ಜಾತಿ ನಿಂದನೆ ಮಾಡಿದ ಆರೋಪಗಳು ಹನೀಫ್ ವಿರುದ್ಧ ದಾಖಲಾಗಿವೆ. ಸಂತ್ರಸ್ಥೆ ಮತ್ತು ಪತಿ ನಾಗರಾಜ್ ನಡುವೆ ಕೌಟುಂಬಿಕ ಜಗಳ ಉಂಟಾಗಿ, ಇಬ್ಬರೂ ಬೇರೆಯಾಗಿ ವಾಸ ಮಾಡುತ್ತಿದ್ದರು.
ಈ ಹಿಂದೆ ಇಬ್ಬರು ಸೇರಿ ಪ್ರಾರಂಭಿಸಿದ್ದ ಶಾಲೆಯನ್ನು ಪತಿ ನಾಗರಾಜ್ ಪತ್ನಿಗೆ ತಿಳಿಯದೇ ಮಾರಾಟ ಮಾಡಿದ್ದರಿಂದ ಸಮಸ್ಯೆ ತೀವ್ರಗೊಂಡಿತ್ತು. 2025ರಲ್ಲಿ ಪರಿಚಯಸ್ಥರೊಬ್ಬರು ಸಂತ್ರಸ್ಥೆಗೆ ಶಬ್ಬೀರ್ ಎಂಬ ವ್ಯಕ್ತಿಯನ್ನು ಸಂಪರ್ಕಿಸಲು ಸಲಹೆ ನೀಡಿದ್ದರು. ಶಬ್ಬೀರ್ ಶಾಲೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ನಂತರ, ಸಂತ್ರಸ್ಥೆ ಆಗಾಗ ಅವನನ್ನು ಭೇಟಿ ಮಾಡುತ್ತಿದ್ದರು. ಬಳಿಕ ಶಬ್ಬೀರ್ ತನ್ನ NGOಗೆ ಸಂತ್ರಸ್ಥೆಯನ್ನು ರಾಜ್ಯಾಧ್ಯಕ್ಷೆಯನ್ನಾಗಿ ನೇಮಿಸಿದ್ದ.
ಈ ಸಮಯದಲ್ಲಿ ಕೇರಳ ಗುರುಗಳಿಂದ ಪಡೆದ ಮದ್ದು ತಂದು ಪೂಜೆ ಮಾಡುವಂತೆ ಹೇಳಿ, ಆಗಾಗ ಟೀನಲ್ಲಿ ಮದ್ದು ಹಾಕಿ ಕೊಟ್ಟು ಅನಗತ್ಯ ಕಿರುಕುಳ ನೀಡುತ್ತಿದ್ದ ಆರೋಪ ಹೊರಬಂದಿದೆ. ಶಾಲೆ ವಾಪಸ್ ಕೊಡಿಸುವುದಾಗಿ ಹೇಳಿ ಶಬ್ಬೀರ್ ಸುಮಾರು 16 ಲಕ್ಷ ರೂ. ಪಡೆದಿದ್ದಾನೆಂದು ಸಂತ್ರಸ್ಥೆ ಆರೋಪಿಸಿದ್ದಾರೆ. ಕಚೇರಿಗೆ ಬಂದಾಗಲೂ ಅನಗತ್ಯ ಕಿರುಕುಳ ನೀಡುತ್ತಿದ್ದನೆಂದು ದೂರು ನೀಡಲಾಗಿದೆ. ಕೊನೆಗೆ ಸಂತ್ರಸ್ಥೆ ಪ್ರಶ್ನಿಸಿದಾಗ, ಶಬ್ಬೀರ್ “ಕನ್ವರ್ಟ್ ಆಗಿ ನನ್ನ ಮದುವೆ ಆಗು” ಎಂದು ಒತ್ತಾಯಿಸಿದ್ದಾನೆಂದು ಹೇಳಲಾಗಿದೆ. ಶಾಲೆ ವಿಚಾರದಲ್ಲಿ ಪರಿಹಾರ ಸಿಗದಾಗ ಹಣ ವಾಪಸ್ ಕೇಳಿದಾಗ, ಸಂತ್ರಸ್ಥೆಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ಆರೋಪ.
ಈ ಬಗ್ಗೆ ಸಂತ್ರಸ್ಥೆ ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದು, ಅಟ್ರಾಸಿಟಿ ಕಾಯ್ದೆ ಹಾಗೂ BNS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಪ್ರಕರಣವನ್ನು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು. ತನಿಖೆ ನಡೆಸಿದ DCRE ಪೊಲೀಸರು ಆರೋಪಿ ಮೊಹಮ್ಮದ್ ಹನೀಫ್ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣವು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವ ಹೆಸರಿನಲ್ಲಿ ವ್ಯಕ್ತಿಗಳು ಹೇಗೆ ದುರುಪಯೋಗ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ. ಸಂತ್ರಸ್ಥೆಯ ಧೈರ್ಯದಿಂದಲೇ ಪ್ರಕರಣ ಬೆಳಕಿಗೆ ಬಂದಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ.