Jan 25, 2026 Languages : ಕನ್ನಡ | English

ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾದ ನಮ್ಮ ಸಿಲಿಕಾನ್ ಸಿಟಿ!! ಮೊದಲ ಬಾರಿ ಹೀಟ್ ಮ್ಯಾಪ್ ಟೆಕ್ನಲಾಜಿ

ಬೆಂಗಳೂರು, ಭಾರತದ ಸಿಲಿಕಾನ್ ಸಿಟಿ, ಹೊಸ ವರ್ಷದ ಸಂಭ್ರಮಕ್ಕೆ ಭಾರೀ ಮಟ್ಟದಲ್ಲಿ ಸಜ್ಜಾಗಿದೆ. ಪ್ರತೀ ವರ್ಷ ಲಕ್ಷಾಂತರ ಜನರು ನಗರದಲ್ಲಿ ನ್ಯೂ ಇಯರ್ ಆಚರಿಸುತ್ತಾರೆ. ಕಳೆದ ವರ್ಷ ಸುಮಾರು 8 ಲಕ್ಷ ಜನರು ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಜನಸಂದಣಿ, ಟ್ರಾಫಿಕ್, ಸುರಕ್ಷತೆ ಎಲ್ಲವನ್ನೂ ನಿರ್ವಹಿಸಲು ಪೊಲೀಸರು ಹಾಗೂ ಸರ್ಕಾರ ಹಲವು ಹೊಸ ತಂತ್ರಜ್ಞಾನಗಳನ್ನು ಜಾರಿಗೆ ತಂದಿದ್ದಾರೆ.

ಜನಸಂದಣಿ ನಿಯಂತ್ರಣಕ್ಕೆ ಹೀಟ್ ಮ್ಯಾಪ್: ಬೆಂಗಳೂರಿನ ನ್ಯೂ ಇಯರ್
ಜನಸಂದಣಿ ನಿಯಂತ್ರಣಕ್ಕೆ ಹೀಟ್ ಮ್ಯಾಪ್: ಬೆಂಗಳೂರಿನ ನ್ಯೂ ಇಯರ್

ಹೀಟ್ ಮ್ಯಾಪ್ ಟೆಕ್ನಾಲಜಿ: ಇದೇ ಮೊದಲ ಬಾರಿಗೆ

ಈ ಬಾರಿ ಬೆಂಗಳೂರಿನಲ್ಲಿ ಹೀಟ್ ಮ್ಯಾಪ್ ಟೆಕ್ನಾಲಜಿ ಜಾರಿಗೆ ತಂದಿದ್ದಾರೆ.

  • ಅತೀ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ.
  • ಹೆಚ್ಚಿನ ಜನ ಸೇರುತ್ತಿರುವ ಸ್ಥಳಗಳನ್ನು ಹಳದಿ ಬಣ್ಣದಿಂದ ಗುರುತಿಸಲಾಗುತ್ತದೆ.
  • ಕಡಿಮೆ ಜನ ಇರುವ ಸ್ಥಳಗಳನ್ನು ಹಸಿರು ಬಣ್ಣದಿಂದ ಗುರುತಿಸಲಾಗುತ್ತದೆ.
  • ಈ ಮಾಹಿತಿಯನ್ನು ಕಮಾಂಡ್ ಸೆಂಟರ್‌ನಿಂದ ನಿಗಾ ವಹಿಸಲಾಗುತ್ತದೆ.
  • ಜನಸಂದಣಿ ನಿಯಂತ್ರಣಕ್ಕಾಗಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ.

ಇದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಜಾರಿಗೆ ತಂದಿರುವ ವ್ಯವಸ್ಥೆ. ಜನಸಂದಣಿ ಹೆಚ್ಚಾಗುವ ಸ್ಥಳಗಳನ್ನು ತಕ್ಷಣ ಗುರುತಿಸಿ, ನಿಯಂತ್ರಣ ಕ್ರಮ ಕೈಗೊಳ್ಳುವುದು ಇದರ ಉದ್ದೇಶ.

ಭದ್ರತೆಗೆ ಭಾರೀ ಪೊಲೀಸ್ ನಿಯೋಜನೆ

ಹೊಸ ವರ್ಷದ ಸಂಭ್ರಮಕ್ಕೆ ಭದ್ರತೆಗಾಗಿ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

  • 14 ಸಾವಿರ ಸಾಮಾನ್ಯ ಪೊಲೀಸರು
  • 2500 ಟ್ರಾಫಿಕ್ ಪೊಲೀಸರು
  • 88 ಕೆಎಸ್ಆರ್‌ಪಿ ತುಕಡಿ
  • 21 ಸಿಎಆರ್
  • 266 ಹೊಯ್ಸಳ ವಾಹನ
  • 250 ಕೋಬ್ರಾ ವಾಹನ
  • 400 ಟ್ರಾಫಿಕ್ ವಾರ್ಡನ್‌ಗಳು
  • ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್
  • ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾರ್ಡ್ಸ್

ಈ ನಿಯೋಜನೆಯಿಂದ ನಗರದಲ್ಲಿ ಭದ್ರತೆ ಹೆಚ್ಚುವ ನಿರೀಕ್ಷೆಯಿದೆ. ಕುಡಿದು ರಸ್ತೆಯಲ್ಲಿ ಬಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು 24x7 ಕಾರ್ಯನಿರ್ವಹಿಸಲಿದ್ದಾರೆ.

ತುರ್ತು ಸೇವೆಗಳು ಮತ್ತು ಮಾಹಿತಿ ವ್ಯವಸ್ಥೆ

  • ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಮಾಹಿತಿ ತಲುಪಿಸಲು QR ಕೋಡ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ.
  • ಆಂಬ್ಯುಲೆನ್ಸ್, ವಾಹನಗಳು, ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಮಾಹಿತಿ QR ಕೋಡ್ ಮೂಲಕ ದೊರೆಯಲಿದೆ.
  • ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್ ವ್ಯವಸ್ಥೆ.
  • ವಾಹನ ತಪಾಸಣೆ ವ್ಯವಸ್ಥೆ ಮೂಲಕ ಸುರಕ್ಷತೆ ಹೆಚ್ಚಿಸಲಾಗುತ್ತದೆ.

ಸಾರಿಗೆ ವ್ಯವಸ್ಥೆ

ಹೊಸ ವರ್ಷದ ಸಂಭ್ರಮದ ನಂತರ ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

  • ಹೆಚ್ಚು ಯುವಜನರು ಸೇರುವ ಬಾರ್, ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್ ಹಾಗೂ ಮನೋರಂಜನಾ ಸ್ಥಳಗಳಲ್ಲಿ ವಿಶೇಷ ಕ್ರಮ.
  • ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್ ಅಳವಡಿಕೆ.
  • 180 ಕಡೆ ಫೋಕಸ್ ಲೈಟ್‌ಗಳು ಅಳವಡಿಕೆ.
  • ಟ್ಯಾಕ್ಸಿಗಳು ಸಿಗದಿದ್ದರೆ, ಸರ್ಕಾರವೇ ಸಾರಿಗೆ ವ್ಯವಸ್ಥೆ ಒದಗಿಸುತ್ತದೆ.

ಬೆಂಗಳೂರಿನ ನ್ಯೂ ಇಯರ್ ಸಂಭ್ರಮ

ನಗರದಲ್ಲಿ ಪ್ರತೀ ವರ್ಷ ನ್ಯೂ ಇಯರ್ ಸಂಭ್ರಮ ಭಾರೀ ಮಟ್ಟದಲ್ಲಿ ನಡೆಯುತ್ತದೆ. ಈ ಬಾರಿ ಜನಸಂದಣಿ ಹೆಚ್ಚುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸರ್ಕಾರ ಭದ್ರತೆ, ಸಾರಿಗೆ, ತುರ್ತು ಸೇವೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಹೀಟ್ ಮ್ಯಾಪ್ ಟೆಕ್ನಾಲಜಿ, QR ಕೋಡ್ ಮಾಹಿತಿ, 20 ಸಾವಿರ ಪೊಲೀಸರ ನಿಯೋಜನೆ ಇದರಲ್ಲಿ ಎಲ್ಲವೂ ಇದ್ದು, ಈ ಬಾರಿ ಬೆಂಗಳೂರಿನ ಹೊಸ ವರ್ಷದ ಸಂಭ್ರಮವನ್ನು ಸುರಕ್ಷಿತ ಹಾಗೂ ನಿಯಂತ್ರಿತವಾಗಿ ನಡೆಸುವ ಗುರಿ ಹೊಂದಲಾಗಿದೆ.

Latest News