ಜೀವನದಲ್ಲಿ ಎಲ್ಲಾ ಸಮಯ ಎಲ್ಲರಿಗೂ ಒಂದೇ ರೀತಿ ಇರಲ್ಲ, ನಾವು ಮಾಡುವ ಒಂದು ಸಣ್ಣ ಸಹಾಯ ಇನ್ನೊಬ್ಬರಿಗೆ ಒಂದು ಸಣ್ಣ ಖುಷಿ ಕೊಟ್ಟರು ಆ ಅನುಭವವೇ ಬೇರೆ ತಾರಾ ಇರುತ್ತೆ ಆಲ್ವಾ. ಹೌದು ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಸೀರೆ, ಓಲೆ, ಸರ, ಬಳೆಗಳು ಅಂದ್ರೆ ಏನೋ ಒಂಥರಾ ಇಷ್ಟ ಆಗುತ್ತವೆ. ಅದರಲ್ಲೂ ಹೊಸ ಡಿಸೈನ್ ನೋಡುದ್ರೆ ಅದೇ ಥರ ನನಗೂ ಬೇಕು ಅನ್ನೋ ಆಸೆ ಮೂಡುತ್ತೆ. ಏನಾಪ್ಪ ಸರ ಬಳೆ ಬಗ್ಗೆನೇ ಹೇಳ್ತಿದ್ದಾರೆ ಅಂತ ಅನಿಸುತ್ತಾ ಇಲ್ಲಿದೆ ನೋಡಿ ಸ್ಟೋರಿ.
ಸಾಮಾನ್ಯವಾಗಿ ನಕಾರಾತ್ಮಕ ಸುದ್ದಿಗಳಿಂದಲೇ ಸುದ್ದಿಯಲ್ಲಿರುವ ಮೆಟ್ರೋ, ಈ ಬಾರಿ ಹೃದಯ ಸ್ಪರ್ಶಿ ಘಟನೆಯಿಂದ ಟ್ರೆಂಡಿಂಗ್ ಆಗಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆದ ಹೃದಯ ಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳೆಯನ್ನು ಇಷ್ಟಪಟ್ಟ ಸಹ-ಪ್ರಯಾಣಿಕಳಿಗೆ ಹುಡುಗಿಯೊಬ್ಬಳು ತನ್ನ ಬಳೆಯನ್ನೇ ನೀಡಿರುವ ಘಟನೆ ನಡೆದಿದೆ. ಮಹಿಳೆ ಈ ಸನ್ನಿವೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಹುಡುಗಿಯ ದಯಾಗುಣಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಗುತ್ತಿದೆ. ಹೌದು ನೂಕು ನುಗ್ಗಲು, ಕೆಲ ಪ್ರಯಾಣಿಕರ ಅಸಂಮಜಸ ವರ್ತನೆಯಂತಯ ವಿಷಯಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ಬೆಂಗಳೂರಿನ ನಮ್ಮ ಮೆಟ್ರೋ ಇದೀಗ ಸಕತ್ ಹೃದಯ ಸ್ಪರ್ಶಿ ಘಟನೆಯೊಂದರ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡಿಂಗ್ನಲ್ಲಿದೆ.
ಹೌದು ಮೆಟ್ರೋ ಪ್ರಯಾಣದ ವೇಳೆ ನನ್ನ ಪಕ್ಕವೇ ಕುಳಿತಿದ್ದ ಹುಡುಗಿಯ ಕೈನಲ್ಲಿ ಚಿನ್ನದ ಬಳೆಗಳನ್ನು ಗಮನಿಸಿದೆ. ಅದು ನನಗೆ ಬಹಳ ಇಷ್ಟವಾದ ಕಾರಣ, ಅಂತಹುದ್ದೇ ಬಳೆಯನ್ನು ಮಾಡಿಸಿಕೊಳ್ಳಲು ಅದರ ಫೋಟೋ ತೆಗೆದುಕೊಳ್ಳಬಹುದೇ ಎಂದು ಆಕೆಯನ್ನು ಕೇಳಿದ್ದಷ್ಟೇ. ಆಕೆ ತನ್ನ ಕೈಗಳಲ್ಲಿದ್ದ ಬಳೆಯನ್ನೇ ತೆಗೆದು ನನಗೆ ನೀಡಿದಳು. ಇದರ ಡಿಸೈನ್ ನ ಚಿನ್ನದ ಅಂಗಡಿಗೆ ತೋರಿಸಿದರೆ ಅದೇ ರೀತಿ ಬಳೆ ಮಾಡಲು ಸುಲಭವಾಗುತ್ತದೆ ಎಂದಳು. ಆದ್ರೆ ಅವಳ ನಡೆಯಿಂದ ನಮಗೆ ಆಶ್ಚರ್ಯವಾಯಿತು. ಅಷ್ಟು ಸುಲಭವಾಗಿ ಯಾರು ಯಾರಿಗೂ ಏನ್ನನ್ನು ಯಾರಿಗೂ ನೀಡಲ್ಲ ಆದರೆ ಈ ಹುಡುಗಿ ಫೋಟೋ ಕೇಳುತ್ತಿದ್ದಂತೆಯೇ ಬಳೆಯನ್ನೇ ನಮ್ಮ್ ಕೈಗೆ ನೀಡಿದ್ದಾಳೆ.
ನಂತರ ಆಕೆ ಇದು ಬಂಗಾರದ ಬಳೆಯಲ್ಲ ಎಂದು ನಗುತ್ತಾ ಹೇಳಿದಳು. ಆಕೆಗಿರುವ ದಯಾ ಗುಣದ ನೆನಪಿಗಾಗಿ ಆ ಬಳೆಯನ್ನು ನಾನು ತೆಗೆದುಕೊಂಡೆ. ಮೆಟ್ರೋದಲ್ಲಿನ ಎಲ್ಲ ಸನ್ನಿವೇಶಗಳೂ ಕೆಟ್ಟದಾಗಿರಲ್ಲ. ಕೆಲವು ಬಹಳ ಸುಂದರವಾಗಿರುತ್ತವೆ ಎಂದು ಮಹಿಳೆ ಬರೆದುಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಬಳೆಯ ಫೋಟೋವನ್ನೂ ಹಾಕಿದ್ದಾರೆ. ಹೌದು ಇನ್ನು ಮಹಿಳೆ ಮಾಡಿರುವ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಅಭಿಪ್ರಾಯಗಳು, ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಈ ಪೋಸ್ಟ್ ನಿಜಕ್ಕೂ ನಮ್ಮ ಮುಖದಲ್ಲಿ ನಗು ತರಿಸಿದೆ. ಆ ಹುಡುಗಿ ತುಂಬಾ ಒಳ್ಳೆಯ ಮನಸ್ಸಿನವಳು ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಇಂದು ಇಂಟರ್ನೆಟ್‌ನಲ್ಲಿ ನೋಡಿದ ಅತ್ಯುತ್ತಮ ವಿಷಯ ಇದು ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಕೂಡ ಈ ವಿಡಿಯೋ ನೋಡಿ ನಿಮ್ಮನಿಸಿಕೆ ತಿಳಿಸಿ ಧನ್ಯವಾದಗಳು.