ಬೆಂಗಳೂರು ಕಾಟನ್ ಪೇಟೆ ರಸ್ತೆಯಲ್ಲಿ ನಡೆದ ಒಂದು ಅಪಘಾತದಲ್ಲಿ ಖಾಸಗಿ ಬಸ್ ಚಾಲಕನ ಸಮಯಪ್ರಜ್ಞೆ ಇಬ್ಬರು ಮಹಿಳೆಯರ ಜೀವವನ್ನು ಉಳಿಸಿರುವ ಘಟನೆ ಇದೀಗ ಎಲ್ಲಾ ಕಡೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನೂ ಪಡೆಯುತ್ತಿದೆ. ಹೌದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಬೀಳುತ್ತಾರೆ, ಕ್ಷಣಾರ್ಧದಲ್ಲೇ ಬಸ್ ಚಾಲಕ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ ತನ್ನ ಸಮಯಪ್ರಜ್ಞೆಯಿಂದ ಆಗಬೇಕಿದ್ದ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ.
ಹೌದು ಇದು ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾದ ದುರಂತದಿಂದ ಮಹಿಳೆಯರು ಅದೃಷ್ಟವಶಾತ್ ಪಾರಾಗಿದ್ದಾರೆ ಎನ್ನಬಹುದು. ಪುಣ್ಯಕ್ಕೆ ಯಾವ ದುರ್ಘಟನೆ ನಡೆಯಲು ಅವಕಾಶ ಆಗಿಲ್ಲ. ಈ ಘಟನೆಯ ದೃಶ್ಯಗಳು ಇದೀಗ ಸಿಸಿ ಕ್ಯಾಮೆರಾದಲ್ಲಿ ಕಂಡು ಬಂದಿದ್ದು ಅಥ್ವಾ ದಾಖಲಾಗಿದ್ದು, ಬಸ್ ಸ್ಟಾಪ್ ಮಾಡಿದ್ದ ಡ್ರೈವರ್ ಗೆ ಎಲ್ಲರೂ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಾಗೆ ಒಳ್ಳೆಯ ಸಮಯಕ್ಕೆ ದೊಡ್ಡ ಕಾರ್ಯ ನಿಮ್ಮಿಂದಾಗಿದೆ ಎಂದು ಶ್ಲಾಘಿಸುತ್ತಿದ್ದರೆ.
ಈ ಪ್ರಕರಣದ ಕುರಿತು ಮಹದೇವಪುರ ಪೊಲೀಸ್ ಠಾಣೆ ಮಾಹಿತಿ ಸಂಗ್ರಹಿಸುತ್ತಿದ್ದು, ಅಪಘಾತದ ಸಂಪೂರ್ಣ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಪರಿಶೀಲನೆ ಮಾಡಿದ್ದಾರೆ. ಹೌದು ಒಟ್ಟಿನಲ್ಲಿ, ಕಷ್ಟ ಸಂದರ್ಭದಲ್ಲಿ ತಕ್ಷಣ ನಿರ್ಧಾರ ಕೈಗೊಂಡ ಬಸ್ ಚಾಲಕನ ಸಮಯಪ್ರಜ್ಞೆ ಮಹಿಳೆಯರ ಬದುಕನ್ನು ಉಳಿಸಿದ ಈ ಘಟನೆ ಸಾರ್ವಜನಿಕರಿಗೆ ಪ್ರೇರಣೆಯಾಗಿದೆ ಎಂದು ಹೇಳಬಹದು.