Feb 16, 2026 Languages : ಕನ್ನಡ | English

ವಾಹನ ಸವಾರರು ಈ ತಪ್ಪು ಮಾಡಿದ್ರೆ ಬೀಳುತ್ತೆ ದಂಡ - ಜಾಗ ಇದೆಯೆಂದು ಗಾಡಿ ನಿಲ್ಲಿಸಲೇಬೇಡಿ!!

ಬೆಂಗಳೂರು ಜಿಬಿಎ (BBMP) ಒಂದಾದ ಮೇಲೊಂದರಂತೆ ಹೊಸ ನೀತಿಗಳನ್ನು ಜಾರಿಗೆ ತರುತ್ತಿದೆ. ಇದೀಗ ಪಾರ್ಕಿಂಗ್ ಶುಲ್ಕ ನೀತಿ ಜಾರಿಗೆ ತರಲು ಮುಂದಾಗಿದೆ. ಮನೆ ಗೇಟ್ ಒಳಗಡೆ ಬಿಟ್ಟು, ರಸ್ತೆ ಅಥವಾ ಬೇರೆಲ್ಲೇ ವಾಹನ ನಿಲ್ಲಿಸಿದರೂ ತಿಂಗಳಿಗೆ 3 ಸಾವಿರ ರೂ.ವರೆಗೆ ಶುಲ್ಕ ವಿಧಿಸುವ ಯೋಜನೆ ರೂಪಿಸಲಾಗಿದೆ. ಈ ನಿಯಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. 

ಬೆಂಗಳೂರು ಪಾರ್ಕಿಂಗ್ ಫೀಸ್‌ ಹೊಸ ನೀತಿ – ಜನರಲ್ಲಿ ಹೆಚ್ಚಿದ ಆಕ್ರೋಶ!!
ಬೆಂಗಳೂರು ಪಾರ್ಕಿಂಗ್ ಫೀಸ್‌ ಹೊಸ ನೀತಿ – ಜನರಲ್ಲಿ ಹೆಚ್ಚಿದ ಆಕ್ರೋಶ!!

ಇದಕ್ಕೆ ಕಡಿವಾಣ ಹಾಕಲು ಜಿಬಿಎ ಈ ಹೊಸ ನಿಯಮ ತರಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಕೆಲವು ಕಡೆ ಬಹುಮಹಡಿ ಪಾರ್ಕಿಂಗ್ ಕಟ್ಟಡಗಳು ನಿರ್ಮಾಣಗೊಂಡಿವೆ. 'ಪೇ ಆ್ಯಂಡ್ ಪಾರ್ಕ್' ವ್ಯವಸ್ಥೆಯೂ ಜಾರಿಯಲ್ಲಿದೆ. ಆದರೂ ಜನರು ನಿಯಮ ಪಾಲಿಸದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ, ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಹೇಳುವಂತೆ, ಮನೆ ಗೇಟ್ ಹೊರತುಪಡಿಸಿ ಎಲ್ಲೆ ವಾಹನ ನಿಲ್ಲಿಸಿದರೂ ಫೀಸ್ ಕಟ್ಟಬೇಕೆಂಬ ನಿಯಮ ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಎಂದು ಕೆಲವರು ಹೇಳುತ್ತಿದ್ದಾರೆ. 

ಈಗಾಗಲೇ ನೀರು, ಕರೆಂಟ್ ಬಿಲ್ ಏರಿಕೆ, ಕಸದ ಮೇಲೆ ಸೆಸ್, ಇಂಧನ ಬೆಲೆ ಏರಿಕೆ ಎಲ್ಲವೂ ಸೇರಿ ಜೀವನ ಕಷ್ಟವಾಗಿರುವ ಸಂದರ್ಭದಲ್ಲೇ ಪಾರ್ಕಿಂಗ್ ಫೀಸ್‌ ನೀತಿ ಜಾರಿಯಾದರೆ ಮತ್ತೊಂದು ಹೊರೆ ಬೀಳಲಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಡೆ ಜನರು ಜೀವನ ನಡೆಸಲು ಹೋರಾಡುತ್ತಿದ್ದರೆ, ಇನ್ನೊಂದು ಕಡೆ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವವರಿಗೆ ತಕ್ಕ ಪಾಠ ಕಲಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. 

ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಈ ಕ್ರಮ ಅಗತ್ಯವೆಂದು BBMP ಅಭಿಪ್ರಾಯಪಟ್ಟಿದೆ. ಒಟ್ಟಾರೆ, ಪಾರ್ಕಿಂಗ್ ಫೀಸ್‌ ನೀತಿ ಜಾರಿಗೆ ಬಂದರೆ, ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಿಸಬಹುದಾದರೂ, ಜನರ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ನೀತಿ ಹೇಗೆ ರೂಪ ಪಡೆಯುತ್ತದೆ ಎಂಬುದನ್ನು ನಗರವಾಸಿಗಳು ಕಾದು ನೋಡಬೇಕಾಗಿದೆ.

Latest News