Apr 12, 2026 Languages : ಕನ್ನಡ | English

ಅಕ್ರಮ ಸಂಬಂಧದ ವಿಡಿಯೋ ಲೀಕ್ - ವಿಡಿಯೋ ಕಾಲ್‌ನಲ್ಲಿ ಲೈವ್ ನೋಡಿ ಸಂಭ್ರಮಿಸಿದಳು ಪತ್ನಿ!!

ಅನೈತಿಕ ಸಂಬಂಧ ಎಂತಹ ಅನಾಹುತಕ್ಕೆ ದಾರಿ ಮಾಡಿಕೊಡುತ್ತೆ ಅನ್ನೋದಕ್ಕೆ ಬೆಳಗಾವಿಯ ಅನಗೋಳದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತನ್ನ ಸುಖಕ್ಕಾಗಿ ಅನ್ಯ ಪುರುಷನ ಜೊತೆ ಸಂಬಂಧ ಬೆಳೆಸಿದ್ದ ಪತ್ನಿಯೊಬ್ಬಳು, ಅದಕ್ಕೆ ಅಡ್ಡಿಯಾದ ಗಂಡನನ್ನು ಪ್ರಿಯಕರನ ಸಹಾಯದಿಂದ ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲ, ಕೊಲೆ ಮಾಡಿದ ಮೇಲೆ ತನಗೇನೂ ತಿಳಿಯದಂತೆ ನಾಟಕವಾಡಿ ಪೊಲೀಸರನ್ನೇ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ.

ಬೆಳಗಾವಿ ಅನಗೋಳದಲ್ಲಿ ಬೆಚ್ಚಿಬೀಳಿಸುವ ಹತ್ಯೆ
ಬೆಳಗಾವಿ ಅನಗೋಳದಲ್ಲಿ ಬೆಚ್ಚಿಬೀಳಿಸುವ ಹತ್ಯೆ

ಮೃತ ವ್ಯಕ್ತಿಯನ್ನು ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಆಗಿದ್ದ ಅವಿನಾಶ್ ಸೂಪ್ಪಣ್ಣವರ (40) ಎಂದು ಗುರುತಿಸಲಾಗಿದೆ. ಈ ಕೊಲೆಯಲ್ಲಿ ಅವಿನಾಶ್ ಪತ್ನಿ ಲಕ್ಷ್ಮೀ ಮತ್ತು ಆಕೆಯ ಪ್ರಿಯಕರ ಕೈಲಾಶ್ ಭಾಗಿಯಾಗಿದ್ದಾರೆ. ಮಾರ್ಚ್ 6ರಂದು ಸಂಜೆ ಅವಿನಾಶ್ ಕ್ಲಿನಿಕ್‌ಗೆ ಹೋದಾಗ ಪ್ರಿಯಕರ ಕೈಲಾಶ್ ಕೂಡ ಅಲ್ಲಿಗೆ ತೆರಳಿದ್ದಾನೆ. ಹೋಗುವಾಗಲೇ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಂಡು ಹೋಗಿದ್ದ ಕೈಲಾಶ್, ಮಾತಿನ ಮಲ್ಲತನದಿಂದ ಅವಿನಾಶ್‌ಗೆ ಅದನ್ನು ಕುಡಿಸಿದ್ದಾನೆ.

ಅವಿನಾಶ್ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಕೈಲಾಶ್ ಅಲ್ಲೇ ಇದ್ದ ಸಿಲಿಂಡರ್‌ನಿಂದ ಅವಿನಾಶ್ ಅವರ ತಲೆ ಮತ್ತು ಎದೆಗೆ ಬಲವಾಗಿ ಹೊಡೆದಿದ್ದಾನೆ. ಆಘಾತಕಾರಿ ವಿಷಯ ಏನೆಂದರೆ, ಇದೆಲ್ಲಾ ನಡೆಯುವಾಗ ಪತ್ನಿ ಲಕ್ಷ್ಮೀ ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿ ಲೈವ್ ಆಗಿ ಎಲ್ಲವನ್ನೂ ನೋಡುತ್ತಿದ್ದಳು! ಗಂಡ ಸತ್ತಿದ್ದಾನೋ ಇಲ್ಲವೋ ಎಂದು ಕನ್ಫರ್ಮ್ ಮಾಡಿಕೊಳ್ಳಲು "ಮೂಗು ಬಿಗಿ ಹಿಡಿದು ಸಾಯಿಸು" ಎಂದು ಪ್ರಿಯಕರನಿಗೆ ಇನ್ಸ್‌ಟ್ರಕ್ಷನ್ ಕೂಡ ಕೊಟ್ಟಿದ್ದಾಳೆ.

ಕೊಲೆ ನಡೆದ ನಂತರ ಏನೂ ತಿಳಿಯದಂತೆ ಕ್ಲಿನಿಕ್‌ಗೆ ಬಂದ ಲಕ್ಷ್ಮೀ, ಗಂಡನ ಶವ ನೋಡಿ ಜೋರಾಗಿ ಗೋಳಾಡಿದ್ದಾಳೆ. "ನನ್ನ ಗಂಡನಿಗೆ ಶುಗರ್ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ, ಅದಕ್ಕೇ ತಲೆಗೆ ಪೆಟ್ಟಾಗಿ ಸತ್ತಿದ್ದಾರೆ" ಎಂದು ಎಲ್ಲರನ್ನೂ ನಂಬಿಸಲು ಕಥೆ ಕಟ್ಟಿದ್ದಾಳೆ. ಆದರೆ, ಮಗನ ಸಾವಿನ ಬಗ್ಗೆ ಅನುಮಾನಗೊಂಡ ಅವಿನಾಶ್ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಯಲಾದ ಅಸಲಿ ಸತ್ಯ

ಟಿಳಕವಾಡಿ ಪೊಲೀಸರು ತನಿಖೆ ಶುರು ಮಾಡಿದಾಗ ಪತ್ನಿ ಲಕ್ಷ್ಮಿಯ ಮೇಲೆ ಸಂಶಯ ಬಂದಿದೆ. ಆಕೆಯ ಕಾಲ್ ಹಿಸ್ಟರಿ ಚೆಕ್ ಮಾಡಿದಾಗ ಪ್ರಿಯಕರ ಕೈಲಾಶ್ ಜೊತೆಗಿನ ಅಕ್ರಮ ಸಂಬಂಧ ಬಯಲಾಗಿದೆ. ಎರಡು ವರ್ಷಗಳ ಹಿಂದೆ ಮೊಬೈಲ್ ರಿಚಾರ್ಜ್ ಮಾಡಿಸಲು ಹೋದಾಗ ಕೈಲಾಶ್ ಪರಿಚಯವಾಗಿತ್ತು. ಈ ವಿಚಾರ ಅವಿನಾಶ್‌ಗೆ ಗೊತ್ತಾಗಿ ಹೆಂಡತಿಗೆ ವಾರ್ನಿಂಗ್ ಕೂಡ ಮಾಡಿದ್ದರು. ಇದೇ ಸಿಟ್ಟಿನಿಂದ ಲಕ್ಷ್ಮೀ ಕಳೆದ ಒಂದು ತಿಂಗಳಿಂದ ಗಂಡನನ್ನು ಕೊಲ್ಲುವಂತೆ ಕೈಲಾಶ್ ಮೇಲೆ ಒತ್ತಡ ಹಾಕುತ್ತಿದ್ದಳು ಎಂಬುದು ಈಗ ಸಾಬೀತಾಗಿದೆ.

ಸದ್ಯ ಪೊಲೀಸರು ಇಬ್ಬರೂ ಆರೋಪಿಗಳನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಪ್ರೀತಿ ಮಾಡಿ ಮದುವೆಯಾದ ಗಂಡನನ್ನೇ ಅಕ್ರಮ ಸಂಬಂಧಕ್ಕಾಗಿ ಈ ರೀತಿ ಕೊಲೆ ಮಾಡಿರುವ ಲಕ್ಷ್ಮಿಯ ಅಸಲಿ ಮುಖ ನೋಡಿ ಬೆಳಗಾವಿ ಜನ ಬೆಚ್ಚಿಬಿದ್ದಿದ್ದಾರೆ.

Latest News