Jan 25, 2026 Languages : ಕನ್ನಡ | English

ಈ ಬ್ಯಾಂಕಿಂಗ್ ಹುದ್ದೆಗೆ ಇವತ್ತೇ ಅರ್ಜಿ ಹಾಕಿ? 1.2 ಲಕ್ಷದವರೆಗೆ ಸಂಬಳ ಕೊಡುತ್ತಿದ್ದಾರೆ!!

ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶ ಎನ್ನಬಹುದು.  ಪ್ರಸಿದ್ಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ (BOI) ತನ್ನ ಖಾಲಿ ಇರುವ 115 ಅಧಿಕಾರಿ (ಮ್ಯಾನೇಜರ್) ಹುದ್ದೆಗಳನ್ನು ಭರ್ತಿ ಮಾಡಲು ನವೆಂಬರ್ 2025ರಲ್ಲಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕಟಣೆ ತಾಂತ್ರಿಕ ಹಾಗೂ ಅತಾಂತ್ರಿಕ ಹುದ್ದೆಗಳನ್ನು ಒಳಗೊಂಡಿದ್ದು, Chief Manager, Senior Manager, Law Officer, Manager ಮುಂತಾದ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಅಭ್ಯರ್ಥಿಗಳಿಗೆ ಈ ನೇಮಕಾತಿ ಅನ್ವಯವಾಗಲಿದ್ದು, ಆಯ್ಕೆಯಾದವರಿಗೆ ಆಕರ್ಷಕ ವೇತನ ಶ್ರೇಣಿಯೊಂದಿಗೆ ಸ್ಥಿರ ಸರ್ಕಾರಿ ಉದ್ಯೋಗದ ಅವಕಾಶ ದೊರೆಯಲಿದೆ ನೋಡಿ ಆಸಕ್ತರು ಸದುಪಯೋಗ ಮಾಡಿಕೊಳ್ಳಿ. 

Bank of India Recruitment
Bank of India Recruitment

1. ಉದ್ಯೋಗಾವಕಾಶ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಕನ್ನಡಿಗರಿಗೆ ಇದು ಮಹತ್ವದ ಅವಕಾಶವಾಗಿದೆ. ಪ್ರಸಿದ್ಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಡಿಯಾ (BOI) ತನ್ನ ಖಾಲಿ ಇರುವ 115 ಅಧಿಕಾರಿ (ಮ್ಯಾನೇಜರ್) ಹುದ್ದೆಗಳನ್ನು ಭರ್ತಿ ಮಾಡಲು ನವೆಂಬರ್ 2025ರಲ್ಲಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಅಭ್ಯರ್ಥಿಗಳಿಗೆ ಈ ನೇಮಕಾತಿ ಅನ್ವಯವಾಗಲಿದೆ.

2. ನೇಮಕಾತಿ ವಿವರಗಳು

ಈ ಹುದ್ದೆಗಳು Chief Manager, Senior Manager, Law Officer, Manager ವಿಭಾಗಗಳಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಉದ್ಯೋಗ ಸ್ಥಳ ಅಖಿಲ ಭಾರತವಾಗಿದ್ದು, ಆಯ್ಕೆಯಾದವರು ದೇಶದ ಯಾವುದೇ ಶಾಖೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಒಂದು ವೇಳೆ ನಿಮಗೆ ಯಾವ ಸ್ಥಳ ಆದ್ರೂ ತೊಂದರೆ ಇಲ್ಲ ಅಂದ್ರೆ ಈ ಮಾಹಿತಿ ನಿಮಗೆ ಉಪಯುಕ್ತ ಆಗಬಹುದು. 

3. ವಿದ್ಯಾರ್ಹತೆ ಮತ್ತು ವೇತನ

ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು B.Sc, BE/B.Tech, ME/M.Tech, MCA, M.Sc, MBA, CA, ICWA, LLB ಮುಂತಾದ ಪದವಿಗಳನ್ನು ಹೊಂದಿರಬೇಕು. ಆಯ್ಕೆಯಾದವರಿಗೆ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ₹64,820/- ರಿಂದ ₹1,20,940/- ರವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

4. ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ

ಅರ್ಜಿದಾರರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹850, SC/ST/PwD ಅಭ್ಯರ್ಥಿಗಳಿಗೆ ₹175 ನಿಗದಿಪಡಿಸಲಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಆನ್‌ಲೈನ್ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಹಂತಗಳನ್ನು ಒಳಗೊಂಡಿದೆ.

5. ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕಗಳು

ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಸಲ್ಲಿಕೆ ಪ್ರಕ್ರಿಯೆ 17-11-2025 ರಂದು ಆರಂಭಗೊಂಡಿದ್ದು, ಕೊನೆಯ ದಿನಾಂಕ 30-11-2025 ಆಗಿದೆ. ನಿಮಗಲ್ಲದಿದ್ದರೂ ನಿಮ್ಮವರಿಗಾದರೂ ಉಪಯೋಗಕ್ಕೆ ಬರುತ್ತದೆ ಶೇರ್ ಮಾಡಿಕೊಳ್ಳಿ.

Latest News