ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಈಗ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿವೆ. ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆಯಿಂದಲೇ ಭೀಕರ ಕ್ಷಿಪಣಿ ದಾಳಿಗಳು ನಡೆಯುತ್ತಿವೆ, ಈ ಐತಿಹಾಸಿಕ ದಾಳಿಯ ಮೊದಲ ಅಧಿಕೃತ ವೀಡಿಯೊವನ್ನು ಇಸ್ರೇಲಿ ರಕ್ಷಣಾ ಪಡೆ IDF ಬಿಡುಗಡೆ ಮಾಡಿದ್ದು, ಇಡೀ ಜಗತ್ತು ಈಗ ಆತಂಕದಿಂದ ಇತ್ತ ನೋಡುವಂತಾಗಿದೆ.
ಇಸ್ರೇಲ್ ಈ ಬೃಹತ್ ಸೇನಾ ಕಾರ್ಯಾಚರಣೆಗೆ 'ರೋರ್ ಆಫ್ ದಿ ಲಯನ್' ಎಂದು ಹೆಸರಿಟ್ಟಿದೆ. ಇಸ್ರೇಲಿ ವಾಯುಪಡೆಯು ಹಂಚಿಕೊಂಡಿರುವ ವೀಡಿಯೊದಲ್ಲಿ, ಪಶ್ಚಿಮ ಇರಾನ್‌ನ ನೂರಾರು ಮಿಲಿಟರಿ ಗುರಿಗಳನ್ನು ಕ್ಷಿಪಣಿಗಳು ಧ್ವಂಸ ಮಾಡುತ್ತಿರುವುದು ಕಂಡುಬಂದಿದೆ. ಇರಾನ್‌ನ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಲಾಂಚರ್‌ಗಳು ಮತ್ತು ಶಸ್ತ್ರಾಸ್ತ್ರ ಮಳಿಗೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದ್ದು ಆಕಾಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ.
תיעוד נוסף ממבצע "שאגת הארי"
— Israeli Air Force (@IAFsite) February 28, 2026
צה"ל פועל בריכוז מאמץ לסיכול איומים לעבר עורף מדינת ישראל וכן סיכל משגרים רבים שהיו מוכנים לשיגור מיידי לעבר אזרחי מדינת ישראל.
במסגרת תקיפות חיל האוויר במערב איראן, זוהו פעילים מיחידת טילי הקרקע-קרקע של משטר הטרור האיראני מחמשים משגר במערב איראן… pic.twitter.com/X3HUAxcFYH
ಈ ದಾಳಿಯು ಆಕಸ್ಮಿಕವಾಗಿ ನಡೆದಿದ್ದಲ್ಲ, ಬದಲಿಗೆ ತಿಂಗಳುಗಳಿಂದ ರೂಪಿಸಿದ ಪಕ್ಕಾ ಯೋಜನೆಯಾಗಿದೆ ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ ದಾಳಿಯ ದಿನಾಂಕವನ್ನು ವಾರಗಳ ಮುಂಚೆಯೇ ನಿಗದಿಪಡಿಸಲಾಗಿತ್ತು. ಅಮೆರಿಕ ಕೂಡ ಇರಾನ್ ಸುತ್ತಮುತ್ತ ತನ್ನ ಸೇನಾ ಬಲವನ್ನು ಹೆಚ್ಚಿಸುವ ಮೂಲಕ ಈ ಜಂಟಿ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದೆ.
ಇರಾನ್ ಸುಪ್ರೀಂ ಲೀಡರ್ ಕಚೇರಿ ಮೇಲೆ ದಾಳಿ
ಯುದ್ಧದ ತೀವ್ರತೆ ಎಷ್ಟಿದೆಯೆಂದರೆ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಸಮೀಪದಲ್ಲೂ ಬಾಂಬ್ ದಾಳಿಗಳು ನಡೆದಿವೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಇರಾನ್ ಸರ್ಕಾರ, ಖಮೇನಿ ಅವರನ್ನು ಮೊದಲೇ ಅತ್ಯಂತ ಸುರಕ್ಷಿತ ಮತ್ತು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಇರಾನ್ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಇಸ್ರೇಲಿ ಕ್ಷಿಪಣಿಗಳನ್ನು ತಡೆಯಲು ಪ್ರಯತ್ನಿಸುತ್ತಿದೆಯಾದರೂ, ದಾಳಿಯ ವೇಗಕ್ಕೆ ತತ್ತರಿಸಿ ಹೋಗಿದೆ.
ಅಮಾಯಕ ವಿದ್ಯಾರ್ಥಿನಿಯರ ಸಾವು: ಒಂದು ಕರುಣಾಜನಕ ಘಟನೆ
ಯುದ್ಧದ ನಡುವೆ ಅತ್ಯಂತ ದುಃಖಕರ ಸಂಗತಿಯೆಂದರೆ ಸಾಮಾನ್ಯ ಜನರ ಸಾವು. ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದ ಮಿನಾಬ್ ಎಂಬಲ್ಲಿರುವ ಬಾಲಕಿಯರ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 53 ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಿನಾಬ್ ಪ್ರದೇಶವು ಇರಾನಿನ ಕ್ರಾಂತಿಕಾರಿ ಗಾರ್ಡ್‌ಗಳ ಪ್ರಮುಖ ನೆಲೆಯಾಗಿರುವ ಕಾರಣ, ಅಲ್ಲಿ ಕ್ಷಿಪಣಿಗಳು ಬಿದ್ದಿವೆ ಎನ್ನಲಾಗಿದೆ, ಶಾಲಾ ಮಕ್ಕಳ ಸಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಮತ್ತು ವಿಷಾದಕ್ಕೆ ಕಾರಣವಾಗಿದೆ.
ಜಾಗತಿಕ ಮಟ್ಟದಲ್ಲಿ ತಲ್ಲಣ
ಶನಿವಾರ ಬೆಳಿಗ್ಗೆಯಿಂದ ಆರಂಭವಾಗಿರುವ ಈ ಸಂಘಟಿತ ದಾಳಿಯು ಕೇವಲ ಇರಾನ್ ಮೇಲೆ ಮಾತ್ರವಲ್ಲದೆ, ಇಡೀ ವಿಶ್ವದ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಲಿದೆ. ಈಗಾಗಲೇ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯ ಸೂಚನೆ ನೀಡಿವೆ. ಅಮೆರಿಕ ಮತ್ತು ಇಸ್ರೇಲ್ ಒಟ್ಟಾಗಿ ಇರಾನ್ ಮೇಲೆ ಯುದ್ಧ ಸಾರಿರುವುದು ಮುಂದಿನ ದಿನಗಳಲ್ಲಿ ತೈಲ ಬೆಲೆ ಏರಿಕೆ ಮತ್ತು ಆರ್ಥಿಕ ಅಸ್ಥಿರತೆಗೆ ನಾಂದಿ ಹಾಡಲಿದೆ. ಇರಾನ್ ಕೂಡ ಸುಮ್ಮನೆ ಕೂರದೆ ಪ್ರತಿ ದಾಳಿ ನಡೆಸುವ ಎಚ್ಚರಿಕೆ ನೀಡಿರುವುದರಿಂದ, ಈ ಯುದ್ಧವು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇರಾನ್‌ನಲ್ಲಿ ಈಗ ಬೆಂಕಿಯ ಮಳೆ ಸುರಿಯುತ್ತಿದ್ದು, ಅಲ್ಲಿನ ನಾಗರಿಕರು ಭಯಭೀತರಾಗಿದ್ದಾರೆ. ಇದು ಕೇವಲ ಒಂದು ದೇಶದ ಸಮಸ್ಯೆಯಾಗಿ ಉಳಿಯದೆ, ಜಾಗತಿಕ ಶಾಂತಿಗೆ ದೊಡ್ಡ ಧಕ್ಕೆಯುಂಟುಮಾಡಿದೆ.