ಅಂತರಾಷ್ಟ್ರೀಯ ರಾಜಕೀಯದ ಲೆಕ್ಕಾಚಾರಗಳು ಈಗ ಪೂರ್ತಿ ಉಲ್ಟಾ ಹೊಡೆಯುತ್ತಿವೆ. ಇಷ್ಟು ದಿನ ಅಮೆರಿಕಾದ ಪರಮಾಪ್ತ ಮಿತ್ರನಾಗಿದ್ದ ಫ್ರಾನ್ಸ್, ಈಗ ದಿಢೀರ್ ಅಂತ ಅಮೆರಿಕಾಗೆ ಕೈಕೊಟ್ಟು ಇರಾನ್ ಬೆಂಬಲಕ್ಕೆ ನಿಂತಿದೆ. ಹೌದು, ಕಳೆದ 23 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಫ್ರಾನ್ಸ್, ರಷ್ಯಾ ಮತ್ತು ಚೀನಾ ದೇಶಗಳು ಒಂದಾಗಿ ಅಮೆರಿಕಾದ ವಿರುದ್ಧ ವಿಶ್ವಸಂಸ್ಥೆಯಲ್ಲಿ ತಮ್ಮ 'ವೀಟೋ' (Veto) ಅಧಿಕಾರ ಚಲಾಯಿಸಿವೆ. ಇದು ಇಡೀ ಜಗತ್ತನ್ನೇ ಆಶ್ಚರ್ಯಚಕಿತಗೊಳಿಸಿದೆ.
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಬಹ್ರೇನ್ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಂದು ನಿರ್ಣಯವನ್ನು ಸಲ್ಲಿಸಿತ್ತು. ಒಂದು ವೇಳೆ ಈ ನಿರ್ಣಯ ಅಂಗೀಕಾರವಾಗಿದ್ದರೆ ಇರಾನ್ ದೇಶಕ್ಕೆ ದೊಡ್ಡ ಸಂಕಷ್ಟ ಎದುರಾಗುತ್ತಿತ್ತು. ಅಮೆರಿಕಾ ಇದನ್ನು ಬೆಂಬಲಿಸಿತ್ತು. ಆದರೆ ಫ್ರಾನ್ಸ್, ರಷ್ಯಾ ಮತ್ತು ಚೀನಾ ಒಟ್ಟಾಗಿ ಇದನ್ನು ವಿರೋಧಿಸಿ 'ವೀಟೋ' ಚಲಾಯಿಸಿದವು. ಇದರಿಂದ ಅಮೆರಿಕಾದ ಪ್ಲಾನ್ ಪುಡಿಪುಡಿಯಾಗಿದೆ. ಈ ಹಿಂದೆ 2003ರ ಇರಾಕ್ ಯುದ್ಧದ ಸಮಯದಲ್ಲಿ ಅಮೆರಿಕಾದ ವಿರುದ್ಧ ಈ ದೇಶಗಳು ಹೀಗೆ ಒಂದಾಗಿದ್ದವು.
ವಿಶ್ವಸಂಸ್ಥೆಯಲ್ಲಿ ವೀಟೋ ಪವರ್ ಹೊಂದಿರುವ ಐದು ದೇಶಗಳನ್ನು (ಅಮೆರಿಕಾ, ಬ್ರಿಟನ್, ಫ್ರಾನ್ಸ್, ರಷ್ಯಾ, ಚೀನಾ) P-5 ಎನ್ನಲಾಗುತ್ತದೆ. ಈವರೆಗೆ ಅಮೆರಿಕಾ ಬಣದಲ್ಲಿ 3 ದೇಶಗಳಿದ್ದವು. ಆದರೆ ಈಗ ಫ್ರಾನ್ಸ್ ಹೊರಬಂದಿರುವುದರಿಂದ ಅಮೆರಿಕಾದ ಬಹುಮತ 3-2ಕ್ಕೆ ಕುಸಿದಿದೆ. ಇದು ಅಮೆರಿಕಾದ ಜಾಗತಿಕ ಅಧಿಪತ್ಯಕ್ಕೆ ಬಿದ್ದ ದೊಡ್ಡ ಹೊಡೆತ.
ಇರಾನ್‌ಗೆ ಫ್ರಾನ್ಸ್ ಬೆಂಬಲ ನೀಡಿದ್ದೇಕೆ? ಇಲ್ಲಿವೆ 3 ಮುಖ್ಯ ಕಾರಣಗಳು:
ಟ್ರಂಪ್ ಮತ್ತು ಮ್ಯಾಕ್ರನ್ ನಡುವಿನ 'ಈಗೊ' ವಾರ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನ ಸಾರ್ವಜನಿಕವಾಗಿ ಅಪಹಾಸ್ಯ ಮಾಡಿದ್ದರು. ಯುದ್ಧ ಶುರು ಮಾಡುವಾಗ ಫ್ರಾನ್ಸ್ ಅನ್ನ ಕನ್ಸಲ್ಟ್ ಮಾಡದ ಅಮೆರಿಕಾ, ಆಮೇಲೆ ಮಾತ್ರ ಫ್ರಾನ್ಸ್ ತನ್ನ ಬೆಂಬಲಕ್ಕೆ ಬರಬೇಕು ಅಂತ ಬಯಸಿತ್ತು. ಇದರಿಂದ ಬೇಸತ್ತ ಮ್ಯಾಕ್ರನ್, ಅಮೆರಿಕಾದ ಮಾತನ್ನ ತಿರಸ್ಕರಿಸಿದ್ದಾರೆ.
ಇಸ್ರೇಲ್ ಜೊತೆಗಿನ ವೈಷಮ್ಯ: ಫ್ರಾನ್ಸ್ ಈಗ ಇಸ್ರೇಲ್ ವಿರುದ್ಧ ತಿರುಗಿ ಬಿದ್ದಿದೆ. ಇಸ್ರೇಲ್‌ಗೆ ಬೆಂಬಲ ನೀಡುವ ವಿಮಾನಗಳಿಗೆ ಫ್ರಾನ್ಸ್ ತನ್ನ ವಾಯುಪ್ರದೇಶವನ್ನ ಬಂದ್ ಮಾಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ಪ್ಯಾರಿಸ್ ಜೊತೆಗಿನ ಶಸ್ತ್ರಾಸ್ತ್ರ ಒಪ್ಪಂದವನ್ನ ರದ್ದು ಮಾಡಿದೆ. ಹೀಗಾಗಿ ಫ್ರಾನ್ಸ್ ಈಗ ಅಮೆರಿಕಾದ ಮಿತ್ರ ಇಸ್ರೇಲ್‌ಗೆ ಎದುರಾಗಿ ಇರಾನ್ ಪರ ನಿಂತಿದೆ.
ತೈಲ ಮತ್ತು ವ್ಯಾಪಾರದ ಹಿತಾಸಕ್ತಿ: ಬ್ಲೂಮ್‌ಬರ್ಗ್ ವರದಿ ಪ್ರಕಾರ, ಫ್ರಾನ್ಸ್ ಮತ್ತು ಇರಾನ್ ನಡುವೆ ಒಂದು ಗುಪ್ತ ಒಪ್ಪಂದ ನಡೆದಿದೆ. ಇದರ ಅಡಿಯಲ್ಲಿ ಇರಾನ್ ತನ್ನ 'ಹಾರ್ಮುಜ್ ಜಲಸಂಧಿ'ಯಲ್ಲಿ ಫ್ರೆಂಚ್ ಹಡಗುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವ್ಯಾಪಾರದ ಲಾಭಕ್ಕಾಗಿ ಫ್ರಾನ್ಸ್ ಇರಾನ್ ಜೊತೆ ಕೈಜೋಡಿಸಿದೆ.
ನ್ಯಾಟೋ (NATO) ಕಥೆ ಏನಾಗುತ್ತೆ?
ಫ್ರಾನ್ಸ್‌ನ ಈ ನಡೆಯಿಂದ ಕೆರಳಿರುವ ಡೊನಾಲ್ಡ್ ಟ್ರಂಪ್, "ನಾವು ನ್ಯಾಟೋ ಒಕ್ಕೂಟದಿಂದ ಹೊರಬರುವುದನ್ನ ಗಂಭೀರವಾಗಿ ಪರಿಗಣಿಸುತ್ತೇವೆ" ಅಂತ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕಾ ನ್ಯಾಟೋದಿಂದ ಹೊರಬಂದರೆ ಇಡೀ ಜಗತ್ತಿನ ರಕ್ಷಣಾ ವ್ಯವಸ್ಥೆಯೇ ಅದಲುಬದಲಾಗಲಿದೆ.
⚡French-owned container ship SUCCESSFULLY EXITED THE STRAIT OF HORMUZ, FIRST known Western Europe-linked transit since start of Iran war — Bloomberg
— Avinash K S🇮🇳 (@AvinashKS14) April 3, 2026
Just a day after France, Russia & China objected UNSC push for a resolution authorizing FORCE to reopen the strait pic.twitter.com/Fhqqzi096M
ಈ ಬೆಳವಣಿಗೆಗಳು ಜಗತ್ತಿನಲ್ಲಿ ಹೊಸ ಶಕ್ತಿ ಕೇಂದ್ರಗಳು ಉದಯಿಸುತ್ತಿವೆ ಅನ್ನೋದನ್ನ ತೋರಿಸ್ತಿದೆ. ಅಮೆರಿಕಾದ ಏಕಪಕ್ಷೀಯ ನಿರ್ಧಾರಗಳಿಗೆ ಇನ್ನು ಮುಂದೆ ಬೆಲೆ ಇರಲ್ಲ ಅನ್ನೋ ಸಂದೇಶವನ್ನ ಫ್ರಾನ್ಸ್ ರವಾನಿಸಿದೆ. ಇದು ಮುಂದಿನ ದಿನಗಳಲ್ಲಿ ತೈಲ ಬೆಲೆ ಮತ್ತು ಜಾಗತಿಕ ಶಾಂತಿಯ ಮೇಲೆ ಎಂತಹ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕು. ನಿಮಗೆ ಈ ವಿಷಯದ ಬಗ್ಗೆ ಏನು ಅನ್ಸುತ್ತೆ? ಅಮೆರಿಕಾದ ಅಹಂಕಾರಕ್ಕೆ ಫ್ರಾನ್ಸ್ ಸರಿಯಾದ ಪಾಠ ಕಲಿಸಿದೆಯಾ? ಕಾಮೆಂಟ್ ಮಾಡಿ ತಿಳಿಸಿ.