Mar 23, 2026 Languages : ಕನ್ನಡ | English

ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್? ಟ್ರಂಪ್ ಅವರ ಈ 'ಒಂದು ಪೋಸ್ಟ್'ನಿಂದ ಜಗತ್ತಿಗೆ ನಿಟ್ಟುಸಿರು!!

ಕಳೆದ ಕೆಲವು ದಿನಗಳಿಂದ ಜಗತ್ತಿನಾದ್ಯಂತ ಎಲ್ಲರನ್ನೂ ಕಾಡ್ತಾ ಇದ್ದ ಒಂದು ದೊಡ್ಡ ಪ್ರಶ್ನೆ ಅಂದ್ರೆ, "ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ ಶುರುವಾಗುತ್ತಾ?" ಅನ್ನೋದು. ಇಡೀ ಜಗತ್ತು ಆತಂಕದಿಂದ ನೋಡ್ತಾ ಇರೋವಾಗಲೇ ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡೆಯಿಂದ ಒಂದು ಬಿಗ್ ಅಪ್‌ಡೇಟ್ ಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಜಗಳ ಸದ್ಯಕ್ಕೆ ಸ್ವಲ್ಪ ತಣ್ಣಗಾಗೋ ಲಕ್ಷಣಗಳು ಕಾಣಿಸ್ತಾ ಇವೆ. ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನ ಐದು ದಿನಗಳ ಕಾಲ ಮುಂದೂಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ. 

ತೈಲ ಮಾರುಕಟ್ಟೆಗೆ ಪಾಸಿಟಿವ್ ಸಿಗ್ನಲ್ – ಟ್ರಂಪ್ ನಡೆ;
ತೈಲ ಮಾರುಕಟ್ಟೆಗೆ ಪಾಸಿಟಿವ್ ಸಿಗ್ನಲ್ – ಟ್ರಂಪ್ ನಡೆ;

ಸದಾ ಅಚ್ಚರಿ ನೀಡೋ ಟ್ರಂಪ್ ಅವರು ಸೋಮವಾರ ಮುಂಜಾನೆ ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಒಂದು ಇಂಟರೆಸ್ಟಿಂಗ್ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ಅವರು, "ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ಕಳೆದ ಎರಡು ದಿನಗಳಿಂದ ತುಂಬಾನೇ ಒಳ್ಳೆ ಮತ್ತು ಉಪಯುಕ್ತವಾದ ಮಾತುಕತೆಗಳು ನಡೆದಿವೆ. ಈ ಮಾತುಕತೆಗಳು ಪಶ್ಚಿಮ ಏಷ್ಯಾದಲ್ಲಿ ನಡೀತಿರೋ ಜಗಳಕ್ಕೆ ಒಂದು ಪೂರ್ಣವಿರಾಮ ಇಡೋ ದಾರಿಯಲ್ಲಿ ಸಾಗ್ತಾ ಇವೆ" ಅಂತ ಖುಷಿಯಿಂದ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಈ ಮಾತುಕತೆಗಳ ಸಕಾರಾತ್ಮಕ ಹಾದಿಯನ್ನ ನೋಡಿ, ಇರಾನ್‌ನ ಪವರ್ ಪ್ಲಾಂಟ್ ಮತ್ತು ಎನರ್ಜಿ ಕೇಂದ್ರಗಳ ಮೇಲೆ ನಡೆಸಬೇಕಿದ್ದ ಮಿಲಿಟರಿ ದಾಳಿಯನ್ನ ಐದು ದಿನಗಳ ಕಾಲ 'ಪೋಸ್ಟ್‌ಪೋನ್' ಮಾಡೋಕೆ ಡಿಪಾರ್ಟ್‌ಮೆಂಟ್ ಆಫ್ ವಾರ್‌ಗೆ ಸೂಚನೆ ನೀಡಿದ್ದಾರಂತೆ.

ಟ್ರಂಪ್ ಅವರ ಪ್ರಕಾರ, ಈ ಮಾತುಕತೆಗಳು ತುಂಬಾನೇ ಡೀಪ್ ಆಗಿ ಮತ್ತು ರಚನಾತ್ಮಕವಾಗಿ ಸಾಗ್ತಾ ಇವೆಯಂತೆ. ಇಡೀ ವಾರ ಈ ಚರ್ಚೆಗಳು ಮುಂದುವರಿಯಲಿವೆ. ಒಂದು ವೇಳೆ ಈ ಐದು ದಿನಗಳ ಕಾಲ ನಡೆಯೋ ಮೀಟಿಂಗ್‌ಗಳು ಸಕ್ಸಸ್ ಆದ್ರೆ, ಬಹುಶಃ ಯುದ್ಧದ ಕಾರ್ಮೋಡ ಸಂಪೂರ್ಣವಾಗಿ ಚದುರಿ ಹೋದ್ರೂ ಅಚ್ಚರಿ ಇಲ್ಲ. ಸದ್ಯಕ್ಕೆ ಈ 'ಐದು ದಿನದ ಬಿಡುವು' ಇಡೀ ವಿಶ್ವಕ್ಕೆ ಒಂದು ದೊಡ್ಡ ನಿಟ್ಟುಸಿರು ಬಿಡುವಂತೆ ಮಾಡಿದೆ. ಯುದ್ಧದ ಭೀತಿಯಲ್ಲಿದ್ದ ಜನರಿಗೆ ಈಗ ಸ್ವಲ್ಪ ಶಾಂತಿಯ ಭರವಸೆ ಸಿಕ್ಕಿದೆ.

ನಿಮಗೆ ಗೊತ್ತಿರಲಿ, ಅಮೆರಿಕ ಮತ್ತು ಇರಾನ್ ನಡುವೆ ಏನಾದ್ರೂ ಯುದ್ಧ ಶುರುವಾದ್ರೆ ಅದರ ನೇರ ಪರಿಣಾಮ ನಮ್ಮ ಜೇಬಿನ ಮೇಲೆ ಆಗುತ್ತೆ. ಯಾಕಂದ್ರೆ ಪಶ್ಚಿಮ ಏಷ್ಯಾದಲ್ಲಿ ಗಲಾಟೆ ಆದ್ರೆ ತೈಲ ಬೆಲೆ ಗಗನಕ್ಕೆ ಏರುತ್ತೆ. ಈಗ ಟ್ರಂಪ್ ಅವರು ದಾಳಿ ನಿಲ್ಲಿಸಿ ಮಾತುಕತೆಗೆ ಮುಂದಾಗಿರೋದು ಅಂತರಾಷ್ಟ್ರೀಯ ಮಾರುಕಟ್ಟೆಗೂ ಒಂದು ಪಾಸಿಟಿವ್ ಸಿಗ್ನಲ್ ಕೊಟ್ಟಿದೆ.

ಟ್ರಂಪ್ ಅವರ ಈ ನಡೆಗೆ ಮಿಕ್ಸೆಡ್ ರಿಯಾಕ್ಷನ್ ಬರ್ತಾ ಇದೆ. ಕೆಲವರು ಇದನ್ನ "ಮಾಸ್ಟರ್ ಸ್ಟ್ರೋಕ್" ಅಂತಿದ್ರೆ, ಇನ್ನು ಕೆಲವರು ಇದು ಕೇವಲ ಟೈಮ್ ತಗೊಳ್ಳೋ ತಂತ್ರ ಇರಬಹುದು ಅಂತ ಶಂಕಿಸ್ತಾ ಇದ್ದಾರೆ. ಆದ್ರೆ, ಯುದ್ಧ ಮಾಡೋದಕ್ಕಿಂತ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋದು ಯಾವತ್ತಿದ್ರೂ ಒಳ್ಳೇದು ಅಲ್ವಾ? ಟ್ರಂಪ್ ಅವರು "ಕಂಪ್ಲೀಟ್ ಅಂಡ್ ಟೋಟಲ್ ರೆಸಲ್ಯೂಶನ್" (ಸಂಪೂರ್ಣ ಪರಿಹಾರ) ಬಗ್ಗೆ ಮಾತಾಡ್ತಾ ಇರೋದು ನೋಡಿದ್ರೆ, ಈ ಬಾರಿ ಏನೋ ಒಂದು ದೊಡ್ಡ ಮಟ್ಟದ ಶಾಂತಿ ಒಪ್ಪಂದ ಆಗೋ ಲಕ್ಷಣಗಳು ದಟ್ಟವಾಗಿವೆ.

ಈ ಐದು ದಿನಗಳ ಮಾತುಕತೆ ಏನಾಗುತ್ತೆ ಅನ್ನೋದರ ಮೇಲೆ ಮುಂದಿನ ಯುದ್ಧ ಅಥವಾ ಶಾಂತಿ ನಿರ್ಧಾರವಾಗುತ್ತೆ. ಒಟ್ಟಿನಲ್ಲಿ ಜಗತ್ತಿಗೆ ಯುದ್ಧ ಬೇಡ, ಶಾಂತಿ ಬೇಕು ಅನ್ನೋದೇ ಎಲ್ಲರ ಹಾರೈಕೆ. ಟ್ರಂಪ್ ಅವರ ಈ 'productive conversations' ನಿಜವಾಗಿಯೂ ಫಲ ನೀಡಲಿ ಅಂತ ಆಶಿಸೋಣ. 

Latest News