Jan 25, 2026 Languages : ಕನ್ನಡ | English

ಹುಲಿಗೆಮ್ಮ ದೇವಸ್ಥಾನದಲ್ಲಿ ಗಿಲ್ಲಿ ಗೆದ್ದು ಬರಲಿ ಎಂದು ವಿಶೇಷ ಪೂಜೆ - ಅಸಲಿಗೆ ಗಿಲ್ಲಿ ಗೆಲ್ತಾನಾ?

ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಹುಲಿಗೆಮ್ಮ ದೇವಾಲಯದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ಅಭಿಮಾನಿಗಳಿಂದ ವಿಶೇಷ ಹರಕೆ ಸಲ್ಲಿಕೆಯಾಗಿದೆ ಎಂದು ತಿಳಿದುಬಂದಿದೆ. ಬಿಗ್‌ಬಾಸ್ ಮನೆಯಲ್ಲಿ ಬಹುಮುಖ ಆಟಗಾರನಾಗಿ ಹೊರಹೊಮ್ಮಿರುವ ಗಿಲ್ಲಿ ಗೆಲ್ಲಲಿ ಎಂಬ ಆಶಯದಿಂದ ಅಭಿಮಾನಿಗಳು ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಹೌದು ಜಗನ್ಮಾತೆ ಹುಲಿಗೆಮ್ಮ ದೇವಿಯ ದೇವಸ್ಥಾನದಲ್ಲಿ ಗಿಲ್ಲಿ ಅಭಿಮಾನಿಗಳ ಬಳಗವು ಪಂಚಾಮೃತ ಅಭಿಷೇಕ ಸೇವೆ ನೆರವೇರಿಸಿದ್ದು ನಟ ನಟರಾಜ್ ಅವರ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ, ಗಿಲ್ಲಿ ಬಿಗ್‌ಬಾಸ್ ಗೆಲ್ಲಲಿ ಎಂಬ ಹರಕೆ ಸಲ್ಲಿಸಲಾಯಿತು. 

"ಹುಲಿಗೆಮ್ಮ ದೇವಾಲಯದಲ್ಲಿ ಗಿಲ್ಲಿ ಅಭಿಮಾನಿಗಳ ವಿಶೇಷ ಪೂಜೆ

ಹೌದು ಸ್ಥಳೀಯ ಅಭಿಮಾನಿಗಳು ದೇವಿಯ ಮುಂದೆ ಪ್ರಾರ್ಥನೆ ಸಲ್ಲಿಸಿ, ಗಿಲ್ಲಿ ವಿಜಯಶಾಲಿಯಾಗಿ ಹೊರ ಬರಲಿ ಎಂದು ಆಶಿಸಿದರು. ಹೌದು ಅಭಿಮಾನಿಗಳ ಪ್ರಕಾರ, ಗಿಲ್ಲಿ ಬಡವರ ಪರವಾಗಿ ಸದಾ ನಿಂತು ಮಾತನಾಡುವ ವ್ಯಕ್ತಿ. ಬಡವರ ಮಕ್ಕಳು ಬೆಳೆಯಬೇಕು, ಸದಾ ಆ ಭಗವಂತನ ಆಶೀರ್ವಾದ ಬಡವರ ಜೊತೆಗೆ ಇರಬೇಕು ಎಂಬ ಆಶಯದಿಂದ ಈ ಹರಕೆ ಸಲ್ಲಿಸಲಾಗಿದೆಯಂತೆ. ಗಿಲ್ಲಿ ಬಿಗ್‌ಬಾಸ್ ಮನೆಯಲ್ಲಿ ತನ್ನ ಸರಳತೆ, ಹಾಸ್ಯಭರಿತ ಶೈಲಿ ಮತ್ತು ನೇರ ಮಾತಿನಿಂದ ಜನಮನ ಗೆದ್ದಿದ್ದಾನೆ ಎಂದು ಅವ್ರು ಹೇಳಿದರು. 

ಹುಲಿಗೆಮ್ಮ ದೇವಾಲಯದಲ್ಲಿ ನಡೆದ ಈ ಹರಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯ ಗೆಲುವಿಗಾಗಿ ದೇವಾಲಯಗಳಲ್ಲಿ ಹರಕೆ ಸಲ್ಲಿಸುವುದು ಹೊಸದೇನಲ್ಲ, ಆದರೆ ಈ ಬಾರಿ ಕೊಪ್ಪಳದಲ್ಲಿ ನಡೆದ ವಿಶೇಷ ಪೂಜೆ ಹೆಚ್ಚು ಗಮನ ಸೆಳೆದಿದೆ ಎನ್ನಬಹುದು. ಗಿಲ್ಲಿ ಅಭಿಮಾನಿಗಳ ಈ ಭಕ್ತಿ, ಬಿಗ್‌ಬಾಸ್ ಮನೆಯಲ್ಲಿ ನಡೆಯುತ್ತಿರುವ ಸ್ಪರ್ಧೆಯ ತೀವ್ರತೆಯನ್ನು ಹೆಚ್ಚೆಚ್ಚು  ತೋರಿಸುತ್ತದೆ.

ಹೌದು ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ಕೊನೆಯ ಹಂತಕ್ಕೆ ತಲುಪಿದ್ದು, ಪ್ರತಿಯೊಬ್ಬ ಸ್ಪರ್ಧಿಯ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಗೆಲುವಿಗಾಗಿ ಹರಕೆ, ಪೂಜೆ, ಪ್ರಾರ್ಥನೆಗಳನ್ನು ಮಾಡುತ್ತಿದ್ದಾರೆ. ಗಿಲ್ಲಿ ಅಭಿಮಾನಿಗಳ ಈ ಹರಕೆ, ಬಿಗ್‌ಬಾಸ್ ಬಿಸಿ ಕೊಪ್ಪಳದಲ್ಲಿಯೂ ತಟ್ಟಿದೆಯೆಂಬುದನ್ನು ಸ್ಪಷ್ಟಪಡಿಸಿತು. ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲಿ ನಡೆದ ಈ ಹರಕೆ, ಬಿಗ್‌ಬಾಸ್ ಕನ್ನಡದ ಜನಪ್ರಿಯತೆಗೆ  ಮತ್ತೊಂದು ಸಾಕ್ಷಿಯಾಗಿದೆ. 

ಗಿಲ್ಲಿ ಅಭಿಮಾನಿಗಳ ಪ್ರಾರ್ಥನೆ, ಬಡವರ ಪರದಾಟದ ಆಶಯ ಮತ್ತು ದೇವಿಯ ಆಶೀರ್ವಾದ ಇವೆಲ್ಲವೂ ಸೇರಿ, ರಿಯಾಲಿಟಿ ಶೋಗಳು ದೂರದರ್ಶನದ ಗಡಿ ದಾಟಿ ಸಮಾಜದ ಸಾಂಸ್ಕೃತಿಕ ಮತ್ತು ಭಕ್ತಿಭಾವದ ಅಸ್ತಿತ್ವವನ್ನು ಸ್ಪರ್ಶಿಸಿರುವುದನ್ನು ತೋರಿಸುತ್ತವೆ. ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ತನ್ನ ಶಕ್ತಿಯನ್ನು ತೋರಿಸುತ್ತಿರುವಾಗ, ಹೊರಗೆ ಅಭಿಮಾನಿಗಳು ದೇವಿಯ ಮುಂದೆ ಹರಕೆ ಸಲ್ಲಿಸುತ್ತಿರುವುದು ಕನ್ನಡದ ಜನಮನದಲ್ಲಿ ಬಿಗ್‌ಬಾಸ್ ಎಷ್ಟು ಆಳವಾಗಿ ಸ್ಥಾನ ಪಡೆದಿದೆ ಎಂಬುದನ್ನು ತೋರಿಸುತ್ತದೆ.

Latest News