Mar 23, 2026 Languages : ಕನ್ನಡ | English

ಏಪ್ರಿಲ್ 1 ರಿಂದ ಪ್ಯಾನ್ ಕಾರ್ಡ್ ನಿಯಮ ಬದಲು - ಆಧಾರ್ ಜೊತೆಗೆ ಈ ದಾಖಲೆ ಇಲ್ಲದಿದ್ದರೆ ನಿಮ್ಮ ಅರ್ಜಿ ರಿಜೆಕ್ಟ್!! ಇಲ್ಲಿದೆ ಹೊಸ ಲಿಸ್ಟ್;

ನೀವು ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸಬೇಕು ಅಂತ ಇದ್ದೀರಾ? ಅಥವಾ ಹಳೇ ಕಾರ್ಡ್‌ನಲ್ಲಿ ಏನಾದರೂ ತಿದ್ದುಪಡಿ ಮಾಡಿಸಬೇಕಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಇಷ್ಟು ದಿನ ನಾವು ಕೇವಲ ಆಧಾರ್ ಕಾರ್ಡ್ ಕೊಟ್ಟರೆ ಸಾಕು, ಸುಲಭವಾಗಿ ಪ್ಯಾನ್ ಕಾರ್ಡ್ ಸಿಗುತ್ತಿತ್ತು. ಆದರೆ ಏಪ್ರಿಲ್ 1, 2026 ರಿಂದ ಈ ನಿಯಮ ಸಂಪೂರ್ಣವಾಗಿ ಬದಲಾಗುತ್ತಿದೆ. 

ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ದೊಡ್ಡ ಬದಲಾವಣೆ;
ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ದೊಡ್ಡ ಬದಲಾವಣೆ;

ಹೊಸ ನಿಯಮ ಏನಪ್ಪಾ ಅಂದ್ರೆ?

ಐಟಿ ಕಾಯ್ದೆ 2025 ಮತ್ತು ಹೊಸ ಐಟಿ ರೂಲ್ಸ್ 2026ರ ಪ್ರಕಾರ, ಇನ್ಮುಂದೆ ಆಧಾರ್ ಕಾರ್ಡ್ ಒಂದನ್ನೇ ನಂಬಿಕೊಂಡು ಪ್ಯಾನ್ ಕಾರ್ಡ್ ಅಪ್ಲೈ ಮಾಡೋಕೆ ಆಗಲ್ಲ. ಆಧಾರ್ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕಕ್ಕೆ ಇನ್ನೊಂದು ಅಧಿಕೃತ ದಾಖಲೆಯನ್ನು ಕಡ್ಡಾಯವಾಗಿ ನೀಡಲೇಬೇಕು.

ಯಾವೆಲ್ಲಾ ಹಳೇ ಫಾರ್ಮ್‌ಗಳು ಬಂದ್ ಆಗಲಿವೆ?

ನೀವು ಹಳೇ ಫಾರ್ಮ್‌ಗಳಾದ 49A, 49AA ಅಥವಾ 49B ಬಳಸಿ ಅರ್ಜಿ ಸಲ್ಲಿಸುತ್ತಿದ್ದರೆ, ಮಾರ್ಚ್ 31 ರೊಳಗೆ ಕೆಲಸ ಮುಗಿಸಿಕೊಳ್ಳಿ. ಏಕೆಂದರೆ ಏಪ್ರಿಲ್ 1 ರಿಂದ ಈ ಹಳೇ ಫಾರ್ಮ್‌ಗಳನ್ನು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಒಪ್ಪಿಕೊಳ್ಳುವುದಿಲ್ಲ. ಹೊಸ ಮಾದರಿಯ ಫಾರ್ಮ್‌ಗಳೇ ಜಾರಿಗೆ ಬರಲಿವೆ.

ಹುಟ್ಟಿದ ದಿನಾಂಕಕ್ಕೆ ಯಾವ ದಾಖಲೆಗಳು ಬೇಕು?

ಆಧಾರ್ ಬಿಟ್ಟು ನೀವು ಈ ಕೆಳಗಿನ ಯಾವುದಾದರೂ ಒಂದು ದಾಖಲೆಯನ್ನು ನೀಡಬಹುದು

  • ವೋಟರ್ ಐಡಿ: ನಿಮ್ಮ ಮತದಾರರ ಗುರುತಿನ ಚೀಟಿ.
  • ಪಾಸ್‌ಪೋರ್ಟ್: ನಿಮ್ಮ ಬಳಿ ಪಾಸ್‌ಪೋರ್ಟ್ ಇದ್ದರೆ ಅದು ಬೆಸ್ಟ್.
  • ಡ್ರೈವಿಂಗ್ ಲೈಸೆನ್ಸ್: ವಾಹನ ಚಾಲನಾ ಪರವಾನಗಿ ಪತ್ರ.
  • ಜನ್ಮ ಪ್ರಮಾಣ ಪತ್ರ: ಮುನ್ಸಿಪಾಲಿಟಿ ಅಥವಾ ರಿಜಿಸ್ಟ್ರಾರ್ ಕಚೇರಿಯಿಂದ ನೀಡಿದ ಬರ್ತ್ ಸರ್ಟಿಫಿಕೇಟ್.
  • ಅಂಕಪಟ್ಟಿ (Marks Card): ಮಾನ್ಯತೆ ಪಡೆದ ಬೋರ್ಡ್‌ನಿಂದ ನೀಡಿದ ಎಸ್‌ಎಸ್‌ಎಲ್‌ಸಿ ಅಥವಾ ಮೆಟ್ರಿಕ್ಯುಲೇಷನ್ ಅಂಕಪಟ್ಟಿ.
  • ಸರ್ಕಾರಿ ಐಡಿ ಕಾರ್ಡ್: ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಪಬ್ಲಿಕ್ ಸೆಕ್ಟರ್ ಕಂಪನಿಗಳು ನೀಡಿದ ಐಡಿ ಕಾರ್ಡ್.
  • ಪೆನ್ಷನ್ ಆರ್ಡರ್: ನಿವೃತ್ತಿ ಹೊಂದಿದವರಿಗೆ ನೀಡುವ ಪೆನ್ಷನ್ ಪೇಮೆಂಟ್ ಆರ್ಡರ್.
  • ವಾಸ್ತವ್ಯದ ಪ್ರಮಾಣ ಪತ್ರ: ಸರ್ಕಾರದ ವತಿಯಿಂದ ನೀಡಲಾದ ಡೊಮಿಸೈಲ್ ಸರ್ಟಿಫಿಕೇಟ್.

ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ರೆ ಹುಷಾರ್

ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ, ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಒಂದು ವೇಳೆ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ದರೆ, ಕೂಡಲೇ ಒಂದನ್ನು ಸರೆಂಡರ್ ಮಾಡಿ. ಇಲ್ಲದಿದ್ದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಪ್ರಕಾರ ನಿಮಗೆ 10,000 ರೂಪಾಯಿ ದಂಡ ಬೀಳಬಹುದು. 

ಒಂದು ಗುಡ್ ನ್ಯೂಸ್

ಒಂದು ವೇಳೆ ನೀವು ನಿಮ್ಮ ಆಧಾರ್ ಮೂಲಕ ಪ್ಯಾನ್ ಕಾರ್ಡ್‌ನಲ್ಲಿ ಅಡ್ರೆಸ್ ಅಪ್‌ಡೇಟ್ ಮಾಡಬೇಕಿದ್ದರೆ, ಅದನ್ನು 'Protean Portal' ನಲ್ಲಿ ಉಚಿತವಾಗಿ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ನಿಯಮಗಳು ಬದಲಾಗುವ ಮುನ್ನವೇ ಅಪ್ಲೈ ಮಾಡುವುದು ಒಳ್ಳೆಯದು. ಒಂದು ವೇಳೆ ಏಪ್ರಿಲ್ ನಂತರ ಮಾಡುವುದಾದರೆ, ಮೇಲೆ ಹೇಳಿದ ದಾಖಲೆಗಳನ್ನು ಮೊದಲೇ ರೆಡಿ ಮಾಡಿ ಇಟ್ಟುಕೊಳ್ಳಿ. ಸುಮ್ಮನೆ ಕೊನೆ ಕ್ಷಣದಲ್ಲಿ ಟೆನ್ಷನ್ ಮಾಡಿಕೊಳ್ಳಬೇಡಿ. 

Latest News