Mar 31, 2026 Languages : ಕನ್ನಡ | English

ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ - ನಿಮ್ಮ ಜೇಬಿನ ಮೇಲೆ ಎಫೆಕ್ಟ್ ಬೀರಲಿರುವ 10 ಬಿಗ್ ಚೇಂಜಸ್ ಇಲ್ಲಿವೆ ನೋಡಿ!!

ಇಂದು ಮಾರ್ಚ್ 31, ಪ್ರಸಕ್ತ ಹಣಕಾಸು ವರ್ಷದ ಕಡೆಯ ದಿನ. ನಾಳೆಯಿಂದ (ಏಪ್ರಿಲ್ 1, 2026) ಹೊಸ ಆರ್ಥಿಕ ವರ್ಷ ಶುರುವಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೆಲವು ಬದಲಾವಣೆಗಳಾಗುತ್ತಿವೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕಂದರೆ, ಈ ಬಾರಿ ಕೇಂದ್ರ ಸರ್ಕಾರ ಬರೋಬ್ಬರಿ 65 ವರ್ಷಗಳಷ್ಟು ಹಳೆಯದಾದ 'ಆದಾಯ ತೆರಿಗೆ ಕಾಯ್ದೆ'ಯನ್ನೇ ಬದಲಾಯಿಸಿ ಹೊಸ ಸಂಚಲನ ಮೂಡಿಸಿದೆ.

ಏಪ್ರಿಲ್ 1ರಿಂದ ಬದಲಾಗುವ ನಿಯಮಗಳು – ನಿಮ್ಮ ಬದುಕಿಗೆ ನೇರ ಪರಿಣಾಮ;
ಏಪ್ರಿಲ್ 1ರಿಂದ ಬದಲಾಗುವ ನಿಯಮಗಳು – ನಿಮ್ಮ ಬದುಕಿಗೆ ನೇರ ಪರಿಣಾಮ;

ರೈತರಿಗೆ ಖುಷಿ ಸುದ್ದಿ ಕೊಟ್ಟರೆ, ವಾಹನ ಸವಾರರಿಗೆ ಹಾಗೂ ಹೂಡಿಕೆದಾರರಿಗೆ ಕೆಲವು ಕಠಿಣ ನಿಯಮಗಳನ್ನು ತರಲಾಗಿದೆ. ಹಾಗಾದರೆ ನಾಳೆಯಿಂದ ನಿಮ್ಮ ಬದುಕಿನಲ್ಲಿ ಏನೆಲ್ಲಾ ಬದಲಾಗಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

1. ಹಳೆಯ ಐಟಿ ಕಾಯ್ದೆ ಇನ್ಮುಂದೆ ಇತಿಹಾಸ!

1961ರಿಂದ ಜಾರಿಯಲ್ಲಿದ್ದ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಿ, ಇಂದಿನ ಕಾಲಕ್ಕೆ ತಕ್ಕಂತೆ ರೂಪಿಸಲಾದ ‘ಆದಾಯ ತೆರಿಗೆ ಕಾಯ್ದೆ 2025’ ನಾಳೆಯಿಂದ ಜಾರಿಗೆ ಬರಲಿದೆ. ಇದರಲ್ಲಿ ಕ್ಲಿಷ್ಟವಾಗಿದ್ದ ನಿಯಮಗಳನ್ನು ಸರಳಗೊಳಿಸಲಾಗಿದೆ. ಮೊದಲು 819 ಸೆಕ್ಷನ್‌ಗಳಿದ್ದವು, ಈಗ ಅವುಗಳನ್ನು ಕೇವಲ 536ಕ್ಕೆ ಇಳಿಸಲಾಗಿದೆ. ಇದರಿಂದ ಸಾಮಾನ್ಯ ತೆರಿಗೆದಾರರಿಗೆ ಗೊಂದಲಗಳು ಕಡಿಮೆಯಾಗಲಿವೆ.

2. ಪ್ಯಾನ್ (PAN) ಕಾರ್ಡ್ ನಿಯಮಗಳಲ್ಲಿ ಬದಲಾವಣೆ

ನೀವು ಹಣಕಾಸಿನ ವಹಿವಾಟು ನಡೆಸುವಾಗ ಪ್ಯಾನ್ ಕಾರ್ಡ್ ತೋರಿಸುವುದು ಈಗ ಕಾಮನ್. ಆದರೆ ನಾಳೆಯಿಂದ ಕೆಲವು ಮಿತಿಗಳನ್ನು ಬದಲಿಸಲಾಗಿದೆ

  • ಆಸ್ತಿ ಖರೀದಿ: ಮೊದಲು 10 ಲಕ್ಷಕ್ಕಿಂತ ಹೆಚ್ಚಿನ ಆಸ್ತಿ ಖರೀದಿಗೆ ಪ್ಯಾನ್ ಬೇಕಿತ್ತು, ಈಗ ಆ ಮಿತಿಯನ್ನು 20 ಲಕ್ಷಕ್ಕೆ ಏರಿಸಲಾಗಿದೆ.
  • ವಾಹನ ಖರೀದಿ: 5 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರು ಅಥವಾ ಪ್ರೀಮಿಯಂ ಬೈಕ್ ಖರೀದಿಗೆ ಮಾತ್ರ ಪ್ಯಾನ್ ಕಡ್ಡಾಯ.
  • ಹೋಟೆಲ್ ಬಿಲ್: 1 ಲಕ್ಷ ರೂಪಾಯಿವರೆಗಿನ ಹೋಟೆಲ್ ಬಿಲ್‌ಗೆ ಪ್ಯಾನ್ ಅಗತ್ಯವಿಲ್ಲ (ಮೊದಲು ಇದು 50 ಸಾವಿರ ಇತ್ತು).
  • ನಗದು: ವರ್ಷಕ್ಕೆ 10 ಲಕ್ಷಕ್ಕಿಂತ ಹೆಚ್ಚು ಹಣ ವಿತ್‌ಡ್ರಾ ಅಥವಾ ಜಮೆ ಮಾಡಲು ಪ್ಯಾನ್ ಕಡ್ಡಾಯವಾಗಿ ಬೇಕು.

3. ರೈತರಿಗೆ 'ಜಾಕ್‌ಪಾಟ್' ಆಫರ್

ಜಮೀನು ಕಳೆದುಕೊಂಡ ರೈತರಿಗೆ ಇದು ದೊಡ್ಡ ರಿಲೀಫ್. ಸರ್ಕಾರ ಅಭಿವೃದ್ಧಿ ಕೆಲಸಗಳಿಗಾಗಿ ನಿಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಅದಕ್ಕೆ ನೀಡುವ ಪರಿಹಾರದ ಹಣದ ಮೇಲೆ ಇನ್ಮುಂದೆ ಯಾವುದೇ ಇನ್ಕಮ್ ಟ್ಯಾಕ್ಸ್ ಇರುವುದಿಲ್ಲ. ಇದು ರೈತ ಸಮುದಾಯಕ್ಕೆ ಸರ್ಕಾರ ನೀಡಿರುವ ದೊಡ್ಡ ಗಿಫ್ಟ್.

4. ಟೋಲ್‌ನಲ್ಲಿ ಇನ್ಮುಂದೆ ಚಿಲ್ಲರೆ ಕಿರಿಕಿರಿ ಇಲ್ಲ!

ನೀವು ಹೈವೇನಲ್ಲಿ ಟ್ರಾವೆಲ್ ಮಾಡುವವರಾಗಿದ್ದರೆ ಇದು ನೆನಪಿರಲಿ. ನಾಳೆಯಿಂದ ನ್ಯಾಷನಲ್ ಹೈವೇಗಳ ಟೋಲ್ ಪ್ಲಾಜಾದಲ್ಲಿ ನಗದು (Cash) ಪಾವತಿ ಸಂಪೂರ್ಣ ಬಂದ್ ಆಗಲಿದೆ. ಕೇವಲ ಫಾಸ್ಟ್‌ಟ್ಯಾಗ್ (FASTag) ಅಥವಾ UPI ಮೂಲಕ ಮಾತ್ರ ಹಣ ಪಾವತಿಸಬೇಕು. ಕೈಯಲ್ಲಿ ಕಾಸು ಹಿಡಿದು ಟೋಲ್‌ನಲ್ಲಿ ಕಾಯುವ ಕಾಲ ಮುಗಿಯಿತು!

5. ಷೇರು ಮಾರುಕಟ್ಟೆ ಮತ್ತು ಹೂಡಿಕೆದಾರರಿಗೆ ಎಚ್ಚರಿಕೆ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ಕೆಲವು ಬದಲಾವಣೆಗಳಿವೆ

  • F&O ಟ್ರೇಡಿಂಗ್: ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಟ್ರೇಡಿಂಗ್ ಮಾಡುವವರಿಗೆ ತೆರಿಗೆ (STT) ಏರಿಕೆಯಾಗಿದ್ದು, ವ್ಯವಹಾರ ತುಸು ದುಬಾರಿಯಾಗಲಿದೆ.
  • ಗೋಲ್ಡ್ ಬಾಂಡ್: ಸರ್ಕಾರದಿಂದ ನೇರವಾಗಿ ಬಾಂಡ್ ಖರೀದಿಸಿದರೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ. ಮಾರುಕಟ್ಟೆಯಲ್ಲಿ ಬೇರೆಯವರಿಂದ ಖರೀದಿಸಿದರೆ ಲಾಭದ ಮೇಲೆ ತೆರಿಗೆ ಕಟ್ಟಬೇಕು.

6. ವಿದೇಶಿ ಪ್ರವಾಸ ಅಗ್ಗ

ನೀವು ವಿದೇಶಕ್ಕೆ ಟ್ರಿಪ್ ಹೋಗುವ ಪ್ಲಾನ್‌ನಲ್ಲಿದ್ದರೆ ನಾಳೆಯಿಂದ ಪ್ಯಾಕೇಜ್ ದರ ಸ್ವಲ್ಪ ಇಳಿಕೆಯಾಗಲಿದೆ. ವಿದೇಶಿ ಪ್ರವಾಸದ ಮೇಲಿನ ಟ್ಯಾಕ್ಸ್ (TCS) ದರವನ್ನು ಶೇ. 5 ಮತ್ತು 20 ರಿಂದ ನೇರವಾಗಿ ಶೇ. 2ಕ್ಕೆ ಇಳಿಸಲಾಗಿದೆ. ಅಂದರೆ ನಿಮ್ಮ ಟಿಕೆಟ್ ಮತ್ತು ಹೋಟೆಲ್ ಬುಕಿಂಗ್ ವೆಚ್ಚ ತಗ್ಗಲಿದೆ.

7. ಮಾದಕ ವಸ್ತು, ಪಾನ್ ಮಸಾಲ ಬೆಲೆ ಏರಿಕೆ

ಆರೋಗ್ಯಕ್ಕೆ ಹಾನಿಕಾರಕವಾದ ಪಾನ್ ಮಸಾಲ ಮತ್ತು ಮಾದಕ ವಸ್ತುಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗುತ್ತಿದೆ. ಹಾಗಾಗಿ ನಾಳೆಯಿಂದ ಇವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ.

8. ಇತರ ರಾಜ್ಯಗಳಲ್ಲಿನ ವಿಚಿತ್ರ ನಿಯಮಗಳು

  • ಉತ್ತರ ಪ್ರದೇಶ: ಇಲ್ಲಿ ನೀವು ಮೊಟ್ಟೆ ಖರೀದಿಸುವಾಗ ಅದರ ಮೇಲೆ ಆ ಮೊಟ್ಟೆ ಇಟ್ಟ ದಿನಾಂಕ ಮತ್ತು ಎಕ್ಸ್‌ಪೈರಿ ಡೇಟ್ ಇರುವುದನ್ನು ಗಮನಿಸಬಹುದು. ಇದು ಕಡ್ಡಾಯವಾಗಿದೆ.
  • ಮಧ್ಯಪ್ರದೇಶ: ಇಲ್ಲಿ ಫ್ಯಾಮಿಲಿ ಪೆನ್ಷನ್ ನಿಯಮಗಳು ಸರಳವಾಗಲಿವೆ ಮತ್ತು ಜಿಎಸ್‌ಟಿ ವಿಚಾರಣೆಗಳು ಆನ್‌ಲೈನ್ ಮೂಲಕವೇ ನಡೆಯಲಿವೆ.

ಗಮನಿಸಿ: ಈ ಎಲ್ಲಾ ಬದಲಾವಣೆಗಳು ನಿಮ್ಮ ಹಣಕಾಸಿನ ಶಿಸ್ತಿನ ಮೇಲೆ ಪರಿಣಾಮ ಬೀರಲಿವೆ. ಹಾಗಾಗಿ ಯಾವುದಾದರೂ ದೊಡ್ಡ ಹೂಡಿಕೆ ಅಥವಾ ಖರೀದಿ ಮಾಡುವ ಮುನ್ನ ಈ ಹೊಸ ರೂಲ್ಸ್ ಒಮ್ಮೆ ನೆನಪಿಸಿಕೊಳ್ಳಿ.

Latest News