ಕನ್ನಡ ಚಲನ ಚಿತ್ರರಂಗದ ಸಾಕಷ್ಟು ಅಭಿಮಾನಿಗಳ ವಿಶೇಷ ದಿನ ಜನವರಿ ಎಂಟು ಎಂದು ಹೇಳಬಹುದು. ಕಾರಣ ಅಂದು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾವಾಗಿದೆ. ಯಶ್ ಅವರ ಅಭಿಮಾನಿಗಳು ಈ ದಿನವನ್ನು ಒಂದು ಹಬ್ಬದ ರೀತಿ ಆಚರಣೆ ಮಾಡಿ ಯಶ್ ಅವರಿಗೆ ಶುಭಾಶಯ ಕೋರುತ್ತಾರೆ. ಅವರ ಪ್ರೀತಿಯ ನಟನ ಹುಟ್ಟು ಹಬ್ಬಕ್ಕೆ ಕೆಲವರು ಊಟ ಹಾಕಿಸುವ ಮೂಲಕ ಕೆಲವು ಬಡ ಮಕ್ಕಳ ಶಾಲೆಗಳಲ್ಲಿ ಆಚರಣೆ ಮಾಡ್ತಾರೆ. ಇನ್ನೂ ಕೆಲವು ಅಭಿಮಾನಿ ಬಳಗದವರು ಅನಾಥಾಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿ ಊಟ ಹಾಕಿಸಿ ಯಶ್ ಅವರ ಬರ್ತ್ಡೇ ಆಚರಣೆ ಮಾಡಿ ಶುಭಕೋರಿ ಬರುತ್ತಾರೆ. ಹೌದು ಪ್ರತಿ ವರ್ಷ ಯಶ್ ಹುಟ್ಟು ಹಬ್ಬದಂದು ಅಭಿಮಾನಿಗಳು ಅದ್ದೂರಿ ಕಾರ್ಯಕ್ರಮ, ಕೇಕ್ ಕಟ್, ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಸಂಭ್ರಮಿಸುತ್ತಾರೆ ಎಂದು ಹೇಳಬಹುದು.
ಆದರೆ ಇದೀಗ ಯಶ್ ಅವರು ತುಂಬಾ ಬಿಜಿಯಾಗಿದ್ದಾರೆ. ಅವರ ಟಾಕ್ಸಿಕ್ ಸಿನೆಮಾ ಇನ್ನೇನು ತೆರೆಗೆ ಅಪ್ಪಳಿಸಲಿದ್ದು, ಅದರ ಕಾರ್ಯ ಚಟುವಟಿಕೆಯಲ್ಲಿ ಸಿನಿಮಾ ಬಿಡುಗಡೆಗೆ ಆಗಬೇಕಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊನಿಡಿದ್ದಾರೆ. ಹೌದು ಈ ಬಾರಿ ಯಶ್ ತಮ್ಮ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ನಿರ್ಧರ ಮಾಡಿದ್ದಾರಂತೆ. ಹೌದು ಅಭಿಮಾನಿಗಳ ನಿರೀಕ್ಷೆ ಏನಿದೆ ಅಂದರೆ, ಪ್ರತೀ ವರ್ಷ ಯಶ್ ಜನ್ಮ ದಿನದ ಸಂಭ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕರುನಾಡು ಬೆಂಗಳೂರಿಗೆ ಬರುತ್ತಾರೆ. ಈ ಬಾರಿ ಸಹ ಅಭಿಮಾನಿಗಳಲ್ಲಿ “ಯಶ್ ಬರ್ತ್‌ಡೇ ಆಚರಣೆ ಹೇಗಿರಬಹುದು?” ಎಂಬ ಹೆಚ್ಚಿನ ಕುತೂಹಲ ಸಹ ಇದೆ. ಆದರೆ ಮೂಲಗಳ ಪ್ರಕಾರ ತಿಳಿದು ಬಂದಿರುವ ವಿಷಯ ಏನಂದ್ರೆ, ಯಶ್ ಅವರು ಈ ಬಾರಿ ಅವರ ಜನ್ಮ ಡೇ ದಿನ ಯಾವ ಅದ್ದೂರಿ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ ಎಂದು ಕೇಳಿ ಬಂದಿದೆ.
ಅಭಿಮಾನಿಗಳಿಗೆ ನಟ ಯಶ್ ಅವರು “ಟಾಕ್ಸಿಕ್” ಸಿನಿಮಾದ ಟೀಸರ್ ಅನ್ನು ಹುಟ್ಟುಹಬ್ಬದ ಗಿಫ್ಟ್ ಆಗಿ ನೀಡಲು ತೀರ್ಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಟೀಸರ್‌ಗಾಗಿ ಮುಂಬೈನಲ್ಲಿ ಫೈನಲ್ ಔಟ್‌ಪುಟ್ ಸಿದ್ಧತೆಗಳಲ್ಲಿ ಸದ್ಯ ನಟ ಯಶ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಇದು ದೊಡ್ಡ ಉಡುಗೊರೆಯಾಗಿದ್ದು, ಹುಟ್ಟುಹಬ್ಬದ ಸಂಭ್ರಮವನ್ನು ಸಿನಿಮಾ ಮೂಲಕ ಹಂಚಿಕೊಳ್ಳುತ್ತಿದ್ದಾರೆ.
ಇನ್ನೂ ನಟ ಯಶ್ ಹಾಗೂ ಅವರ ಅಭಿಮಾನಿಗಳ ಭಾಂದವ್ಯ ನೋಡುವುದಾದರೆ, ಯಶ್ ತಮ್ಮ ಅಭಿಮಾನಿಗಳೊಂದಿಗೆ ಸದಾ ಹತ್ತಿರವಾಗಿರಲು ಪ್ರಯತ್ನಿಸುತ್ತಾರೆ ಎಂದು ಹೇಳಬಹುದು. ಸಾಮಾಜಿಕ ಸೇವೆ, ಅಭಿಮಾನಿಗಳೊಂದಿಗೆ ನೇರ ಪ್ರೀತಿಯ ಮಾತುಗಳು, ಅವರ ಜೊತೆಗಿನ ಸಂವಾದ, ಹಾಗೂ ಸಿನಿಮಾದ ಮೂಲಕ ಸಂದೇಶ ನೀಡುವುದು ಅವರ ಶೈಲಿ ಆಗಿದೆ. ಈ ಬಾರಿ ಹುಟ್ಟುಹಬ್ಬ ಸಂಭ್ರಮವನ್ನು “ಟಾಕ್ಸಿಕ್” ಟೀಸರ್ ಮೂಲಕ ಹಂಚಿಕೊಳ್ಳುವುದು, ಅಭಿಮಾನಿಗಳೊಂದಿಗೆ ಅವರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎನ್ನಬಹುದು.
ಯಶ್ ಅಭಿಮಾನಿಗಳು ಈಗಾಗಲೇ ಯಶ್ ಅಭಿನಯದ ಮುಂಬರುವ ಟಾಕ್ಸಿಕ್ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೌದು ನಟ ಯಶ್ ಅಭಿನಯದ “ಟಾಕ್ಸಿಕ್” ಸಿನಿಮಾ ಈಗಾಗಲೇ ಎಲ್ಲೆಡೆ ಭಾರೀ ನಿರೀಕ್ಷೆ ಹುಟ್ಟಿಸಿದೆ. ಕೆಜಿಎಫ್ ಸಿನಿಮಾದ ನಂತರ ಯಶ್ ಯಾವ ರೀತಿಯ ಪಾತ್ರದಲ್ಲಿ, ಹೇಗೆ ಈ ಟಾಕ್ಸಿಕ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿಗೆ ಆಗಿರೋದಂತೂ ಪಕ್ಕಾ. ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆಯ ದಿನಾಂಕವನ್ನು ಯಶ್ ಅವರ ಹುಟ್ಟು ಹಬ್ಬದೊಂದಿಗೆ ಜೋಡಿಸಿರುವುದು ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಯಾರೆಲ್ಲಾ ಈ ಸಿನಿಮಾಗಾಗಿ ಕಾಯುತ್ತಿದ್ದಿರಾ ಕಾಮೆಂಟ್ ಮಾಡಿ ಮಾಡಿ ಹಾಗೆ ಯಶ್'ಗೆ ಶುಭಾಶಯ ತಿಳಿಸಿ.
ಹುಟ್ಟುಹಬ್ಬದ ಆಚರಣೆ ಇಲ್ಲದಿದ್ದರೂ, ಅಭಿಮಾನಿಗಳು ಯಶ್ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಟಾಕ್ಸಿಕ್” ಟೀಸರ್‌ಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೌಂಟ್‌ಡೌನ್ ಆರಂಭಿಸಿದ್ದಾರೆ. ಯಶ್ ಅವರ ಹುಟ್ಟುಹಬ್ಬವನ್ನು ಸಿನಿಮಾ ಸಂಭ್ರಮದೊಂದಿಗೆ ಆಚರಿಸುವುದು ಅಭಿಮಾನಿಗಳಿಗೆ ಹೊಸ ಅನುಭವ. ಈ ಬಾರಿ ಯಶ್ ಹುಟ್ಟುಹಬ್ಬದ ಸಂಭ್ರಮವು ವೇದಿಕೆ, ಕೇಕ್, ದೊಡ್ಡ ಕಾರ್ಯಕ್ರಮಗಳಲ್ಲ. ಬದಲಾಗಿ, “ಟಾಕ್ಸಿಕ್” ಟೀಸರ್ ಎಂಬ ಸಿನಿ ಉಡುಗೊರೆಯ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಸಂಭ್ರಮವು ಸಿನಿಮಾ ಪ್ರೇಮಿಗಳಿಗಾಗಿ ಒಂದೊಳ್ಳೆ ಹೊಸ ರೀತಿಯ ಹಬ್ಬವಾಗಲಿದೆ ನೋಡಿ.