Apr 26, 2026 Languages : ಕನ್ನಡ | English

ಮಗಳಿಗೆ ಅರಿಶಿಣ ಹಚ್ಚಿದ ಕಿಚ್ಚ ಸುದೀಪ್ ದಂಪತಿಗಳು!! ಹುಡುಗ ಯಾರು ಗೊತ್ತಾ?

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಮದುವೆ ಸಂಭ್ರಮದ ಹಬ್ಬದ ವಾತಾವರಣ ಮೂಡಿದೆ. ಪ್ರೀತಿಯ ಮಗಳು ಸಾನ್ವಿ ಅವರಿಗೆ ಕಿಚ್ಚ್ ಸುದೀಪ್ ಹಾಗೂ ಅವರ ಧರ್ಮಪತ್ನಿ ಅರಿಶಿಣ ಹಚ್ಚುವ ಕ್ಷಣ ಕಂಡು ಬಂದಿದೆ. ಅರಿಶಿನ ಶಾಸ್ತ್ರವು ಕುಟುಂಬದವರಿಗೂ ಅಭಿಮಾನಿಗಳಿಗೂ ಹರ್ಷವನ್ನು ತಂದಿದೆ. ಅರಿಶಿನ ಹಚ್ಚುವ ಶಾಸ್ತ್ರವು ಕನ್ನಡ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖವಾದ ಹಂತವಾಗಿದ್ದು, ಅದನ್ನು ಸುದೀಪ್ ಸ್ವತಃ ಮಗಳಿಗೆ ಹಚ್ಚಿದ ಕ್ಷಣವು ಎಲ್ಲರ ಮನಸ್ಸನ್ನು ಮುಟ್ಟಿದೆ.

ಸಾನ್ವಿ ಅವರಿಗೆ ಕಿಚ್ಚ್ ಸುದೀಪ್ ಹಾಗೂ ಅವರ ಧರ್ಮಪತ್ನಿ ಅರಿಶಿಣ ಹಚ್ಚುವ ಕ್ಷಣ
ಸಾನ್ವಿ ಅವರಿಗೆ ಕಿಚ್ಚ್ ಸುದೀಪ್ ಹಾಗೂ ಅವರ ಧರ್ಮಪತ್ನಿ ಅರಿಶಿಣ ಹಚ್ಚುವ ಕ್ಷಣ

ಸುದೀಪ್ ತಮ್ಮ ಮಗಳೊಂದಿಗೆ ಹಂಚಿಕೊಂಡ ಈ ವಿಶೇಷ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳು ಮತ್ತು ವಿಡಿಯೋಗಳು ಅಭಿಮಾನಿಗಳಲ್ಲಿ ವೈರಲ್ ಆಗಿ ಹರಡುತ್ತಿವೆ. ಅಭಿಮಾನಿಗಳು "ಕಿಚ್ಚನ ಮಗಳು ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ " ಎಂದು ಕಾಮೆಂಟ್ ಮಾಡುತ್ತಾ ಶುಭಾಶಯಗಳನ್ನು ಕಳುಹಿಸುತ್ತಿದ್ದಾರೆ.

ಮದುವೆ ಸಂಭ್ರಮದಲ್ಲಿ ಕುಟುಂಬದವರ ಜೊತೆಗೆ ಸ್ನೇಹಿತರು, ಹತ್ತಿರದವರು ಸೇರಿಕೊಂಡು ಹಬ್ಬದ ವಾತಾವರಣವನ್ನು ಇನ್ನಷ್ಟು ಬಣ್ಣಗೊಳಿಸಿದ್ದಾರೆ. ಸಂಪ್ರದಾಯದ ಶಾಸ್ತ್ರಗಳು, ಹಾಸ್ಯ-ಹುಚ್ಚಾಟ, ಹಾಡು-ಹಬ್ಬ ಎಲ್ಲವೂ ಕಾಣಸಿಕ್ಕಿವೆ. ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈ ಸಂಭ್ರಮವನ್ನು ತಮ್ಮದೇ ಸಂಭ್ರಮವೆಂದು ಆಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಯುತ್ತಿದ್ದು ಅಸಲಿಗೆ ಇದು ಯಾರ ವಿವಾಹ ಎಂಬುದಾಗಿ ಪ್ರಶ್ನೆಗಳು ಕೇಳಿ ಬಂದಿವೆ, ಅದಕ್ಕೆ ತಕ್ಕಂತೆ ಮಾಹಿತಿ ಲಭ್ಯವಾಗಿರುವ ಪ್ರಕಾರ ಇದು ಸುದೀಪ್ ಅವರ ಅಕ್ಕನ ಮಗನ ವಿವಾಹದ ಸಂಭ್ರಮದ ಕ್ಷಣ ಎಂದು ಹೇಳಲಾಗುತ್ತಿದೆ. ನೀವು ಕೂಡ ಅವರಿಗೆ ಶುಭಾಶಯ ತಿಳಿಸಿ ಧನ್ಯವಾದಗಳು. 

Latest News