ಕಿಚ್ಚ ಸುದೀಪ್‌ಗಿಂತಲೂ ಎತ್ತರ - ಥಿಯೇಟರ್‌ನಲ್ಲಿ ಅಬ್ಬರಿಸಿದ ಆ ಹೊಸ ವಿದೇಶಿ ಬಾಡಿಗಾರ್ಡ್ ಯಾರು?

ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಹೊಸ ಬಾಡಿಗಾರ್ಡ್ ಕಾರಣಕ್ಕೆ ಇಡೀ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ನಿಮಗೆ ಗೊತ್ತೇ ಇರಬಹುದು. ಅವರ 'ಪೆದ್ದಿ' ಸಿನಿಮಾದ ಪ್ರಮೋಷನ್ ವೇಳೆ ರಾಮ್ ಚರಣ್ ಜೊತೆಗಿದ್ದ ಕೆವಿನ್ ಕುಂಟಾ ಎಂಬ ಗಾರ್ಡ್‌ನ ಲುಕ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದರು. ಈಗ ಅದೇ ತರಹದ ಒಂದು ದೊಡ್ಡ ಕುತೂಹಲ ನಮ್ಮ ಸ್ಯಾಂಡಲ್‌ವುಡ್‌ನಲ್ಲೂ ಶುರುವಾಗಿದೆ.

ಅಳಿಯನ ಸಿನಿಮಾ ನೋಡಲು ಬಂದ ಸುದೀಪ್ | Photo Credit: https://www.instagram.com/vk_kiccha_boss/
ಅಳಿಯನ ಸಿನಿಮಾ ನೋಡಲು ಬಂದ ಸುದೀಪ್ | Photo Credit: https://www.instagram.com/vk_kiccha_boss/

ಹಲವು ವರ್ಷಗಳಿಂದ ಸುದೀಪ್ ನೆರಳಿನಂತೆ ಇರುವ ಕಿಚ್ಚ ಕಿರಣ್ ಅವರನ್ನು ನಾವೆಲ್ಲಾ ನೋಡೇ ಇದ್ದೀವಿ. ಆದರೆ, ಈಗ ಕಿರಣ್ ಹೊರತಾಗಿ ಕಾಣಿಸಿಕೊಂಡಿರುವ ಈ ಎತ್ತರದ ವಿದೇಶಿ ವ್ಯಕ್ತಿ ಯಾರು? ಇವರು ಬರೀ ಒಂದು ದಿನದ ಇವೆಂಟ್‌ಗೆ ಮಾತ್ರ ಬಂದಿದ್ದಾರಾ ಅಥವಾ ಕಿಚ್ಚನಿಗೆ ಕಾಯಂ ಆಗಿ ಸೆಕ್ಯೂರಿಟಿ ಕೊಡಲು ಬಂದಿರುವ ಹೊಸ ಬಾಡಿಗಾರ್ಡ್ ಆ ಎಂಬ ಪ್ರಶ್ನೆ ಸದ್ಯ ಕಿಚ್ಚನ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಸ್ಯಾಂಟ್ರೋ ಥಿಯೇಟರ್‌ನಲ್ಲಿ ಕಂಡ ಆ ಹೈಟ್ ಪರ್ಸನಾಲಿಟಿ

ಕಿಚ್ಚ ಸುದೀಪ್ ಅವರ ಅಳಿಯ ಸಂಜಿತ್ ಸಂಜೀವ್ ನಟಿಸಿರುವ ಬಹುನಿರೀಕ್ಷಿತ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅಳಿಯನ ಸಿನಿಮಾಗೆ ಸಪೋರ್ಟ್ ಮಾಡಲು ಸುದೀಪ್ ಅವರು ತಮ್ಮ ಇಡೀ ಫ್ಯಾಮಿಲಿ ಜೊತೆ ಬೆಂಗಳೂರಿನ ಖ್ಯಾತ ಸಂತೋಷ್ ಥಿಯೇಟರ್‌ಗೆ ಮೂವಿ ನೋಡಲು ಆಗಮಿಸಿದ್ದರು. ಸುದೀಪ್ ಬರ್ತಾರೆ ಅಂದಮೇಲೆ ಅಲ್ಲಿ ಫ್ಯಾನ್ಸ್ ಕ್ರೇಜ್ ಯಾವ ರೇಂಜ್‌ಗೆ ಇರುತ್ತೆ ಅಂತ ನೀವೇ ಊಹಿಸಿ.

ಅಭಿಮಾನಿಗಳ ಸಾಗರದ ಮಧ್ಯೆ ಸುದೀಪ್ ಥಿಯೇಟರ್ ಒಳಗೆ ನುಗ್ಗುವಾಗ ಅವರ ರಕ್ಷಣೆಗೆ ನಿಂತಿದ್ದು ಇದೇ ವಿದೇಶಿ ವ್ಯಕ್ತಿ! ನಟ ಸುದೀಪ್ ಅವರೇ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಹೈಟ್ ಇರೋ ಹೀರೋಗಳಲ್ಲಿ ಒಬ್ಬರು. ಅವರು ಬರೋಬ್ಬರಿ 6.1 ಅಡಿ ಎತ್ತರವಿದ್ದಾರೆ. ಆದರೆ ವಿಶೇಷ ಏನೆಂದರೆ, ಅವರ ಹಿಂಭಾಗದಲ್ಲಿ ನಿಂತಿದ್ದ ಈ ವಿದೇಶಿ ಬಾಡಿಗಾರ್ಡ್, ಸುದೀಪ್ ಅವರಿಗಿಂತಲೂ ಸಖತ್ ಎತ್ತರವಾಗಿ ಕಾಣುತ್ತಿದ್ದರು! ಇವರ ಗತ್ತಿನ ಲುಕ್ ಹಾಗೂ ಬಾಡಿ ಪರ್ಸನಾಲಿಟಿ ನೋಡಿದ ನೆಟ್ಟಿಗರು, "ಇವರ ಹೆಸರೇನಿರಬಹುದು? ಕಿಚ್ಚನಿಗೆ ಹೊಸ ಸೆಕ್ಯೂರಿಟಿನಾ?" ಅಂತ ಇಂಟರ್ನೆಟ್‌ನಲ್ಲಿ ತಡಕಾಡಲು ಶುರು ಮಾಡಿದ್ದಾರೆ. ಆದರೆ ಇವರ ಕಂಪ್ಲೀಟ್ ಡೀಟೇಲ್ಸ್ ಇನ್ನಷ್ಟೇ ಹೊರಬರಬೇಕಿದೆ.

ವರ್ಷಗಳಿಂದ ನೆರಳಾಗಿರೋ ಕಿಚ್ಚ ಕಿರಣ್ ಕಥೆ ಏನು?

ಸಾಮಾನ್ಯವಾಗಿ ಸುದೀಪ್ ಎಲ್ಲೇ ಹೋದರೂ, ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಅವರ ಜೊತೆ ಬಾಡಿಗಾರ್ಡ್ ಕಿರಣ್ ಇದ್ದೇ ಇರುತ್ತಾರೆ. ನೂರಾರು ಅಭಿಮಾನಿಗಳು ಮುಗಿಬಿದ್ದಾಗ ಕಿಚ್ಚನಿಗೆ ಯಾವುದೇ ತೊಂದರೆಯಾಗದಂತೆ ತಡೆಯುವ ಶಕ್ತಿ ಇವರದ್ದು. ವರ್ಷಗಳಿಂದ ಸುದೀಪ್ ಫ್ಯಾಮಿಲಿ ಮೆಂಬರ್ ತರಹ ಇರೋ ಕಿರಣ್ ಸದ್ಯ ಎಲ್ಲೂ ಹೋಗಿಲ್ಲ, ಅವರೂ ಸುದೀಪ್ ಜೊತೆಯಲ್ಲೇ ಇದ್ದಾರೆ. ಆದರೆ ಈ ವಿದೇಶಿ ವ್ಯಕ್ತಿಯ ಎಂಟ್ರಿ ಮಾತ್ರ ಸಖತ್ ಸರ್ಪ್ರೈಸ್ ಕೊಟ್ಟಿದೆ. ಬಹುಶಃ ಇಂಟರ್ನ್ಯಾಷನಲ್ ಲೆವೆಲ್‌ನ ಸೆಕ್ಯೂರಿಟಿ ಏಜೆನ್ಸಿಯಿಂದ ಇವರನ್ನು ಕರೆಸಲಾಗಿದೆಯೇ ಎಂಬ ಗಾಸಿಪ್ ಕೂಡ ಹರಿದಾಡುತ್ತಿದೆ.

ಕಿಚ್ಚನ ಮುಂದಿನ ಸಿನಿಮಾಗಳ ಅಪ್‌ಡೇಟ್ ಇಲ್ಲಿದೆ

ಇನ್ನು ಸುದೀಪ್ ಅವರ ಸಿನಿಮಾಗಳ ವಿಚಾರಕ್ಕೆ ಬರೋದಾದರೆ, ಅವರು 'ಮಾರ್ಕ್' ಸಿನಿಮಾ ಮುಗಿಸಿದ ನಂತರ ಯಾವುದೇ ಹೊಸ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಅವರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆದ ‘ಬಿಲ್ಲ ರಂಗ ಭಾಷ’ ಚಿತ್ರದ ಕೆಲವೊಂದು ಭಾಗಗಳ ಶೂಟಿಂಗ್ ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದ್ದು, ಇದರ ಬಿಗ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ.

ಇದರ ಜೊತೆಗೆ ಬುಲ್ಲಿತೆರೆಯ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಶೀಘ್ರದಲ್ಲೇ ಶುರುವಾಗಲಿದೆ. ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ವಾರಾಂತ್ಯದ ಪಂಚಾಯಿತಿಯನ್ನು ಕಡಕ್ ಆಗಿ ಹೋಸ್ಟ್ ಮಾಡಲಿದ್ದಾರೆ. ಸಿನಿಮಾ ಮತ್ತು ಟಿವಿ ಶೋಗಳ ಬ್ಯುಸಿ ಶೆಡ್ಯೂಲ್ ನಡುವೆ ಕಿಚ್ಚನ ಈ ಹೊಸ ಬಾಡಿಗಾರ್ಡ್ ಮ್ಯಾಟರ್ ಮಾತ್ರ ಸದ್ಯಕ್ಕೆ ಸ್ಯಾಂಡಲ್‌ವುಡ್‌ನ ಬಿಸಿ ಬಿಸಿ ಸುದ್ದಿಯಾಗಿದೆ!

Latest News