Mar 29, 2026 Languages : ಕನ್ನಡ | English

ಹೊಂಬಾಳೆ ಫಿಲ್ಮ್ಸ್ ಜೊತೆ ಕಿರಿಕಿರಿ? 'ಕಾಂತಾರ' ಹೀರೊ ರಿಷಬ್ ಶೆಟ್ಟಿ ಅವರ ಈ ಮೌನದ ಹಿಂದಿರೋ ರಹಸ್ಯ ಇಲ್ಲಿದೆ!!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದ್ರೆ ಅದು 'ಡಿವೈನ್ ಸ್ಟಾರ್' ರಿಷಬ್ ಶೆಟ್ಟಿ ಅವರ ಇನ್‌ಸ್ಟಾಗ್ರಾಮ್ ಅಕೌಂಟ್! ಹೌದು, ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಮಾಡಿರುವ ಕೆಲವು 'ಅನ್‌ಫಾಲೋ' ಮೂವ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿವೆ. ತಮಗೆ ತುಂಬಾ ಹತ್ತಿರವಿದ್ದವರನ್ನೇ ರಿಷಬ್ ದೂರ ಇಡುತ್ತಿದ್ದಾರಾ ಅನ್ನೋ ಅನುಮಾನ ಈಗ ಎಲ್ಲರನ್ನೂ ಕಾಡುತ್ತಿದೆ.

ರುಕ್ಮಿಣಿ ವಸಂತ್ ಮತ್ತು ರಾಜ್ ಶೆಟ್ಟಿ ಅನ್‌ಫಾಲೋ
ರುಕ್ಮಿಣಿ ವಸಂತ್ ಮತ್ತು ರಾಜ್ ಶೆಟ್ಟಿ ಅನ್‌ಫಾಲೋ

ಮೊದಲು ಕೇಳಿಬಂದ ಸುದ್ದಿ ಅಂದ್ರೆ, ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ನಡುವೆ ಏನೋ ಕಿರಿಕಿರಿ ನಡೆದಿದೆ ಅನ್ನೋದು. ಯಾಕಂದ್ರೆ, ರಿಷಬ್ ಅವರು ಮೊದಲು ಹೊಂಬಾಳೆ ಫಿಲ್ಮ್ಸ್ ಮತ್ತು ತಮ್ಮದೇ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ'ದ ಅಧಿಕೃತ ಅಕೌಂಟ್‌ಗಳನ್ನು ಅನ್‌ಫಾಲೋ ಮಾಡಿದ್ದರು. 'ಕಾಂತಾರ ಪ್ರಿಕ್ವೆಲ್' ಕೆಲಸಗಳು ನಡೆಯುತ್ತಿರುವಾಗಲೇ ಈ ರೀತಿ ಆಗಿರೋದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು.

ರಾಜ್ ಬಿ. ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಕೂಡ ಲಿಸ್ಟ್‌ನಲ್ಲಿ!

ಆದರೆ ಈಗ ವಿಷಯ ಅದಕ್ಕಿಂತಲೂ ದೊಡ್ಡದಾಗಿದೆ. ರಿಷಬ್ ಶೆಟ್ಟಿ ಅವರು ತಮ್ಮ ಆಪ್ತ ಗೆಳೆಯ ರಾಜ್ ಬಿ. ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ್ದಾರೆ!

ರಾಜ್ ಬಿ. ಶೆಟ್ಟಿ: ರಿಷಬ್ ಮತ್ತು ರಾಜ್ ನಡುವೆ ವೈಮನಸ್ಸು ಇದೆ ಎಂಬ ವದಂತಿಗಳು ಮೊದಲೇ ಇದ್ದವು. ಆದರೆ ಇತ್ತೀಚೆಗಷ್ಟೇ ರಾಜ್, "ನಮ್ಮ ನಡುವೆ ಎಲ್ಲವೂ ಚೆನ್ನಾಗಿದೆ, ನಾವಿಬ್ಬರೂ ಆರಾಮಾಗಿದ್ದೇವೆ" ಎಂದು ಕ್ಲಾರಿಟಿ ಕೊಟ್ಟಿದ್ದರು. ಆದರೂ ರಿಷಬ್ ಅನ್‌ಫಾಲೋ ಮಾಡಿರುವುದು ಬೆಂಕಿಯಿಲ್ಲದೆ ಹೊಗೆ ಆಡುತ್ತಿಲ್ಲ ಅನ್ನೋ ಮಾತಿಗೆ ಪುಷ್ಟಿ ನೀಡಿದೆ.

ರುಕ್ಮಿಣಿ ವಸಂತ್: 'ಸಪ್ತ ಸಾಗರದಾಚೆ ಎಲ್ಲೋ' ಬೆಡಗಿ ರುಕ್ಮಿಣಿ ಅವರನ್ನೂ ರಿಷಬ್ ಅನ್‌ಫಾಲೋ ಮಾಡಿದ್ದಾರೆ. ವಿಶೇಷ ಅಂದ್ರೆ, ಇತ್ತ ಕಡೆ ರಾಜ್ ಮತ್ತು ರುಕ್ಮಿಣಿ ಇಬ್ಬರೂ ಇನ್ನೂ ರಿಷಬ್ ಅವರನ್ನು ಫಾಲೋ ಮಾಡುತ್ತಲೇ ಇದ್ದಾರೆ!

ಸ್ವಂತ ಬ್ಯಾನರ್, ಹೊಸ ಅಧ್ಯಾಯ!

ಇದೆಲ್ಲದರ ನಡುವೆ ರಿಷಬ್ ಯುಗಾದಿ ಹಬ್ಬದಂದು ಒಂದು ಪೋಸ್ಟರ್ ಹಂಚಿಕೊಂಡಿದ್ದರು. ಅದರಲ್ಲಿ '2ನೇ ಅಧ್ಯಾಯ ಆರಂಭ' ಅಂತ ಬರೆದಿದ್ದರು. ಇದು 'ಕಾಂತಾರ-2' ಇರಬಹುದಾ ಅಥವಾ ಅವರ ಹಳೆ ಹಿಟ್ ಸಿನಿಮಾ 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ'ಯ ಪಾರ್ಟ್-2 ಇರಬಹುದಾ ಅನ್ನೋ ಕುತೂಹಲ ಎಲ್ಲರಲ್ಲಿದೆ.

ಆದರೆ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಈ ಸಿನಿಮಾ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಘೋಷಣೆಯಾಗಿಲ್ಲ. ಬದಲಿಗೆ ರಿಷಬ್ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಮೂಲಕ ಇದನ್ನು ಅನೌನ್ಸ್ ಮಾಡಿದ್ದಾರೆ. ಇದು ಹೊಂಬಾಳೆ ಜೊತೆಗಿನ ಭಿನ್ನಾಭಿಪ್ರಾಯದ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಇಂತಹ ಅನ್‌ಫಾಲೋ ಆಟಗಳು ಕೆಲವೊಮ್ಮೆ ಕೇವಲ ಟೆಕ್ನಿಕಲ್ ಗ್ಲಿಚ್ ಇರಬಹುದು ಅಥವಾ ಸಿನಿಮಾದ ಪ್ರಚಾರದ ಗಿಮಿಕ್ ಕೂಡ ಆಗಿರಬಹುದು. ಆದರೆ ರಿಷಬ್ ಅವರಂತಹ ಸ್ಟಾರ್ ನಟರು ಸಡನ್ ಆಗಿ ಈ ರೀತಿ ಮಾಡುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿಯೇ ಆತಂಕ ಶುರುವಾಗಿದೆ. ರಿಷಬ್ ಅವರ 'ಕಾಂತಾರ' ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಮೇಲೆ, ಅವರು ತಮ್ಮ ಹಳೆ ತಂಡದಿಂದ ದೂರ ಸರಿಯುತ್ತಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ.

ರಿಷಬ್ ಶೆಟ್ಟಿ ಅವರ ಈ ಮೌನ ಮತ್ತು ಅನ್‌ಫಾಲೋ ಮೂವ್‌ಗಳಿಗೆ ಅವರೇ ಖುದ್ದಾಗಿ ಬಂದು ಉತ್ತರ ನೀಡುವವರೆಗೂ ಇಂತಹ ಊಹಾಪೋಹಗಳು ನಿಲ್ಲುವಂತೆ ಕಾಣುತ್ತಿಲ್ಲ.

Latest News