Friday, Oct 30, 2026
|

"ನಾವೀಗ ಮೂವರು" - ರಶ್ಮಿಕಾ ಮಂದಣ್ಣ ಹಂಚಿಕೊಂಡ ಆ 'ಗುಡ್ ನ್ಯೂಸ್' ಅಸಲಿ ಕಥೆ ಏನು ಗೊತ್ತಾ?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಏನೇ ಮಾಡಿದ್ರೂ ಅದು ಸುದ್ದಿನೇ. ಈಗಂತೂ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ನೋಡಿ ಫ್ಯಾನ್ಸ್ ಫುಲ್ ಕನ್ಫ್ಯೂಸ್ ಆಗಿದ್ದಾರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಮದುವೆಯಾಗಿ ಈಗಷ್ಟೇ ಒಂದು ತಿಂಗಳು ಕಳೆದಿದೆ. ಅಷ್ಟರಲ್ಲೇ ರಶ್ಮಿಕಾ ಅವರು "ನಾವೀಗ ಮೂವರು" ಅಂತ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದವರೆಲ್ಲಾ "ಅರೇ.. ಅಷ್ಟರಲ್ಲೇ ಗುಡ್ ನ್ಯೂಸ್ ಕೊಟ್ಟುಬಿಟ್ರಾ?" ಅಂತ ಹುಬ್ಬೇರಿಸಿದ್ದಾರೆ.

ಮೊಟ್ಟೆ ಚಿತ್ರವಿರೋ ಟೀ-ಶರ್ಟ್ ಧರಿಸಿದ ರಶ್ಮಿಕಾ
ಮೊಟ್ಟೆ ಚಿತ್ರವಿರೋ ಟೀ-ಶರ್ಟ್ ಧರಿಸಿದ ರಶ್ಮಿಕಾ

ಏನಿದೆ ಆ ವಿಡಿಯೋದಲ್ಲಿ?

ರಶ್ಮಿಕಾ ಹಂಚಿಕೊಂಡಿರೋದು ಒಂದು ಪುಟ್ಟ ಅನಿಮೇಟೆಡ್ (ಕಾರ್ಟೂನ್) ವಿಡಿಯೋ. ಅದರಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಕಾರ್ಟೂನ್ ಚಿತ್ರಗಳ ಜೊತೆಗೆ ಒಂದು ಪುಟ್ಟ ಸೂರ್ಯಕಾಂತಿ ಹೂವಿನ ಚಿತ್ರವೂ ಇದೆ. ವಿಶೇಷ ಅಂದ್ರೆ, ಆ ವಿಡಿಯೋದಲ್ಲಿ ರಶ್ಮಿಕಾ ಹಾಕಿರೋ ಟೀ-ಶರ್ಟ್ ಮೇಲೆ ಒಂದು ಮೊಟ್ಟೆಯ ಚಿತ್ರವಿದೆ! ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿ ಊಹೆ ಮಾಡ್ತಿದ್ದಾರೆ. "ರಶ್ಮಿಕಾ ಗರ್ಭಿಣಿಯಾಗಿದ್ದಾರೆ, ಶೀಘ್ರದಲ್ಲೇ ತಾಯಿಯಾಗಲಿದ್ದಾರೆ" ಅಂತ ಫ್ಯಾನ್ಸ್ ಸಂಭ್ರಮಿಸಲು ಶುರು ಮಾಡಿದ್ದಾರೆ.

ಅಸಲಿ ವಿಷಯ ಏನು ಗೊತ್ತಾ?

ಆದರೆ ಗಾಯ್ಸ್.. ಸಮಾಧಾನ ಪಡಿ! ವಿಷಯ ನೀವು ಅಂದುಕೊಂಡಷ್ಟು ಸೀರಿಯಸ್ ಇಲ್ಲ, ಇದು ತುಂಬಾ ಕ್ಯೂಟ್ ಆಗಿದೆ. ರಶ್ಮಿಕಾ ಅವರು 'ರೂ (Ru)' ಅನ್ನೋ ಒಂದು ಹೊಸ ಅನಿಮೇಟೆಡ್ ಪಾತ್ರವನ್ನು ಪರಿಚಯಿಸಿದ್ದಾರೆ. ಈ 'ರೂ' ಅನ್ನೋದು ರಶ್ಮಿಕಾ ಅವರದ್ದೇ ಪ್ರತಿಬಿಂಬದಂತಿರೋ ಒಂದು ಪಾತ್ರ.

ರಶ್ಮಿಕಾ ಮಂದಣ್ಣ ಅವರು 'ಟೆರಿಬ್ಲಿ ಟೈನಿ ಟೇಲ್ಸ್' (TTT) ಜೊತೆ ಸೇರಿ ಈ ವಿಶೇಷ ಸರಣಿಯನ್ನು ಶುರು ಮಾಡಿದ್ದಾರೆ. ಈ 'ರೂ' ಪಾತ್ರದ ಮೂಲಕ ಜನರಲ್ಲಿ ಪ್ರೀತಿ, ಪಾಸಿಟಿವಿಟಿ ಮತ್ತು ಸಂತೋಷ ಹರಡೋದು ಅವರ ಉದ್ದೇಶ.

"ಮೂರನೇ ವ್ಯಕ್ತಿ" ಯಾರು?

ಈ ಅನಿಮೇಷನ್ ಜಗತ್ತಿಗೆ ರಶ್ಮಿಕಾ ಈಗ ವಿಜಯ್ ದೇವರಕೊಂಡ ಅವರ ಪಾತ್ರವನ್ನೂ ಸೇರಿಸಿಕೊಂಡಿದ್ದಾರೆ. ರಶ್ಮಿಕಾ, ವಿಜಯ್ ಮತ್ತು ಅವರ ಜೊತೆಗಿರೋ ಆ ಸೂರ್ಯಕಾಂತಿ ಹೂವು (ಸೂರ್ಯಕಾಂತಿ ಪಾತ್ರವನ್ನು ರಶ್ಮಿಕಾ ಬೆಸ್ಟ್ ಫ್ರೆಂಡ್ ಅಂತ ಕರೀತಾರೆ) - ಇವಿಷ್ಟು ಸೇರಿ "ನಾವೀಗ ಮೂವರು" ಅಂತ ಅವರು ಬರೆದುಕೊಂಡಿದ್ದಾರೆ.

ಸರಳವಾಗಿ ಹೇಳ್ಬೇಕಂದ್ರೆ, ಇದು ರಶ್ಮಿಕಾ ಅವರ ಡಿಜಿಟಲ್ ಲೋಕದ ಕಥೆ. ಇಲ್ಲಿ 'ರೂ' ಅನ್ನೋ ಪಾತ್ರ ರಶ್ಮಿಕಾ ಅವರಂತೆಯೇ ಹಸನ್ಮುಖಿ ಮತ್ತು ದಯಾಳು ಗುಣಗಳನ್ನು ಹೊಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರಿಗೆ ನಗು ಹಂಚೋಕೆ ರಶ್ಮಿಕಾ ಮಾಡಿರೋ ಪುಟ್ಟ ಪ್ರಯತ್ನವಿದು.

ರಶ್ಮಿಕಾ ಸದ್ಯಕ್ಕೆ ಯಾವುದೇ "ರಿಯಲ್ ಲೈಫ್" ಗುಡ್ ನ್ಯೂಸ್ ಕೊಟ್ಟಿಲ್ಲ. ಅವರು ಕೇವಲ ತಮ್ಮ ಅನಿಮೇಷನ್ ಸರಣಿಯ ಹೊಸ ಎಪಿಸೋಡ್ ಬಗ್ಗೆ ಮಾಹಿತಿ ನೀಡಿದ್ದಾರೆ ಅಷ್ಟೇ. ಆದರೂ, ವಿಜಯ್ ಮತ್ತು ರಶ್ಮಿಕಾ ಅವರ ಈ ಅನಿಮೇಟೆಡ್ ಜೋಡಿ ನೋಡಲು ಸಖತ್ ಕ್ಯೂಟ್ ಆಗಿದೆ.

Comments

Latest News