ರಶ್ಮಿಕಾ ಶೇರ್ ಮಾಡಿದ ಆ 'ಬ್ಲರ್' ಫೋಟೋದಲ್ಲೇನಿದೆ? ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ‘ಮಿಸಸ್ ದೇವರಕೊಂಡ’ ಪೋಸ್ಟ್!!

ಇತ್ತೀಚೆಗೆ ಸಪ್ತಪದಿ ತುಳಿದ ಟಾಲಿವುಡ್‌ನ ಕ್ಯೂಟ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸದ್ಯ ಜಪಾನ್‌ನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಹೌದು, ಈ ಸ್ಟಾರ್ ಕಪಲ್ ತಮ್ಮ ಬಿಡುಗಡೆಯ ದಿನಗಳನ್ನು ಜಪಾನ್‌ನ ಸುಂದರ ತಾಣಗಳಲ್ಲಿ ಕಳೆಯುತ್ತಿದ್ದು, ಅಲ್ಲಿನ ರೋಮ್ಯಾಂಟಿಕ್ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.

ಮೌಂಟ್ ಫ್ಯೂಜಿ ಎದುರು ಪತಿ ವಿಜಯ್‌ನನ್ನು ತಬ್ಬಿ ಹಿಡಿದ ರಶ್ಮಿಕಾ
ಮೌಂಟ್ ಫ್ಯೂಜಿ ಎದುರು ಪತಿ ವಿಜಯ್‌ನನ್ನು ತಬ್ಬಿ ಹಿಡಿದ ರಶ್ಮಿಕಾ

ನಿಮಗೆ ಗೊತ್ತಿರಲಿ, ರಶ್ಮಿಕಾ ಮಂದಣ್ಣ ಅವರಿಗೆ ಜಪಾನ್‌ನ ಪ್ರಸಿದ್ಧ ‘ಅನಿಮೆ’ ಕಾರ್ಯಕ್ರಮವೊಂದನ್ನು ಹೋಸ್ಟ್ ಮಾಡಲು ಸ್ಪೆಷಲ್ ಇನ್ವಿಟೇಶನ್ ಬಂದಿತ್ತು. ಈ ಆಫರ್ ಖುಷಿಯಿಂದ ಒಪ್ಪಿಕೊಂಡ ರಶ್ಮಿಕಾ, ತಮ್ಮ ಮುದ್ದಿನ ಪತಿ ವಿಜಯ್ ದೇವರಕೊಂಡ ಅವರನ್ನೂ ಜೊತೆಗೇ ಕರೆದುಕೊಂಡು ಜಪಾನ್‌ ಫ್ಲೈಟ್ ಹತ್ತಿದ್ದರು. ಕೆಲಸದ ಜೊತೆಗೇ ಒಂದು ಬ್ಯೂಟಿಫುಲ್ ಟ್ರಿಪ್ ಪ್ಲಾನ್ ಮಾಡಿದ್ದ ಈ ಜೋಡಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮನಸಾರೆ ಆಸ್ವಾದಿಸಿದೆ.

ಮುಚ್ಚುಮರೆಯಿಲ್ಲದೆ ಫೋಟೋ ಶೇರ್ ಮಾಡಿದ ರಶ್ಮಿಕಾ!

ಹಾಗೆ ನೋಡಿದರೆ, ಮದುವೆಗಿಂತ ಮುಂಚೆಯೂ ರಶ್ಮಿಕಾ ಮತ್ತು ವಿಜಯ್ ಜೊತೆಯಾಗಿ ಸಾಕಷ್ಟು ದೇಶಗಳಿಗೆ ಟ್ರಿಪ್ ಹೋಗಿದ್ರು. ಆದರೆ ಆಗೆಲ್ಲಾ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಎಲ್ಲೂ ಬಿಟ್ಟುಕೊಡುತ್ತಿರಲಿಲ್ಲ. ಪ್ರೀತಿಯ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರಿಂದ ಅಭಿಮಾನಿಗಳಿಗೆ ಬರೀ ಹಿಂಟ್ ಸಿಗುತ್ತಿತ್ತಷ್ಟೇ. ಆದರೆ ಈಗ ಮದುವೆಯಾಗಿ ಅಧಿಕೃತವಾಗಿ ಒಂದಾಗಿರೋದ್ರಿಂದ, ರಶ್ಮಿಕಾ ಯಾವುದೇ ಮುಚ್ಚುಮರೆಯಿಲ್ಲದೆ ಪತಿ ವಿಜಯ್ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ‘ಯುಕಾಟಾ’ ಧರಿಸಿ ರಶ್ಮಿಕಾ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. "ಈ ವರ್ಷದ ಜಪಾನ್ ಪ್ರವಾಸ ನನಗೆ ಇನ್ನು ಹೆಚ್ಚಿನ ಮಜಾ ನೀಡಿತು" ಅಂತ ಸಖತ್ ಕ್ಯೂಟ್ ಆಗಿ ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.

ಮೌಂಟ್ ಫ್ಯೂಜಿ ಎದುರು ರೋಮ್ಯಾಂಟಿಕ್ ಹಗ್

ಇನ್ನು ವೈರಲ್ ಆಗಿರೋ ಫೋಟೋಗಳಲ್ಲಿ ರಶ್ಮಿಕಾ ಮತ್ತು ವಿಜಯ್ ಜಪಾನ್‌ನ ಸ್ಥಳೀಯ ಫುಡ್ ಟೇಸ್ಟ್ ಮಾಡ್ತಿರೋದು, ಅಲ್ಲಿನ ಕಲೆ ಮತ್ತು ಸಂಸ್ಕೃತಿಯನ್ನು ಎಂಜಾಯ್ ಮಾಡ್ತಿರೋದು ಕಾಣಿಸುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ಜಪಾನ್‌ನ ಪ್ರಸಿದ್ಧ ‘ಮೌಂಟ್ ಫ್ಯೂಜಿ’ ಜ್ವಾಲಾಮುಖಿ ಹಿನ್ನೆಲೆಯಲ್ಲಿ ವಿಜಯ್ ಅವರನ್ನು ರಶ್ಮಿಕಾ ಗಟ್ಟಿಯಾಗಿ ತಬ್ಬಿಕೊಂಡಿರುವ ಒಂದು ಬ್ಲರ್ ಫೋಟೋ ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ. ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

View this post on Instagram

A post shared by Rashmika Mandanna (@rashmika_mandanna)

ಫ್ಯಾನ್ಸ್ ಕಾಮೆಂಟ್ಸ್ ಹಾವಳಿ:

ರಶ್ಮಿಕಾ ಪೋಸ್ಟ್ ಬೆನ್ನಲ್ಲೇ ಅಭಿಮಾನಿಗಳು ಹಾರ್ಟ್ ಎಮೋಜಿಗಳ ಸುರಿಮಳೆಗೈಯುತ್ತಿದ್ದಾರೆ. ಒಬ್ಬ ಅಭಿಮಾನಿ, "ಫೋಟೋಗಳನ್ನು ಶೇರ್ ಮಾಡಿದ್ದಕ್ಕಾಗಿ ಧನ್ಯವಾದಗಳು ಮಿಸಸ್ ದೇವರಕೊಂಡ" ಅಂತ ಕಾಮೆಂಟ್ ಮಾಡಿದರೆ, ಇನ್ನೊಬ್ಬರು "ನಿಮ್ಮ ಪ್ರೀತಿಯ ಪತಿಯೊಂದಿಗೆ ನೀವು ಲೈಫ್ ಎಂಜಾಯ್ ಮಾಡ್ತಿರೋದು ನೋಡಿ ತುಂಬಾ ಖುಷಿ ಆಗ್ತಿದೆ" ಅಂತ ಹಾರೈಸಿದ್ದಾರೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕಿ ಫರಾ ಖಾನ್ ಕುಂ      ದರ್ ಕೂಡ ರಶ್ಮಿಕಾ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು, "ನಾನು ನಾಳೆಯೇ ಜಪಾನ್‌ಗೆ ಹೋಗುತ್ತಿದ್ದೇನೆ. ಅಲ್ಲಿ ಎಲ್ಲೆಲ್ಲಿ ವಿಸಿಟ್ ಮಾಡಬೇಕು ಅಂತ ಐಡಿಯಾ ಕೇಳಲು ನಿನಗೆ ಕಾಲ್ ಮಾಡ್ತೀನಿ" ಎಂದು ಬರೆದಿದ್ದಾರೆ.

ಉದಯಪುರದಲ್ಲಿ ನಡೆದಿತ್ತು ಗ್ರ್ಯಾಂಡ್ ವೆಡ್ಡಿಂಗ್

ಅಂದಹಾಗೆ, ಹಲವು ವರ್ಷಗಳಿಂದ ಸದ್ದಿಲ್ಲದೆ ಪ್ರೀತಿಸುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇದೇ ವರ್ಷ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ತೀರಾ ಆಪ್ತರ ಸಮ್ಮುಖದಲ್ಲಿ ಕೊಡವ ಮತ್ತು ತೆಲುಗು ಸಂಪ್ರದಾಯದಂತೆ ಇವರ ಮದುವೆ ಗ್ರ್ಯಾಂಡ್ ಆಗಿ ನಡೆದಿತ್ತು. ಮದುವೆಯಾದಾಗಿನಿಂದಲೂ ಸುದ್ದಿಯಲ್ಲಿರೋ ಈ ಜೋಡಿ, ಈಗ ಜಪಾನ್ ಟ್ರಿಪ್ ಮೂಲಕ ಮತ್ತೆ ಟ್ರೆಂಡಿಂಗ್‌ನಲ್ಲಿದೆ.

Latest News